ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈ ರಾಜ್ಯಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್...

|
Google Oneindia Kannada News

ನವದೆಹಲಿ, ಡಿಸೆಂಬರ್ 31: ಭಾರತದಲ್ಲಿಯೂ ಬ್ರಿಟನ್ ನ ಕೊರೊನಾ ರೂಪಾಂತರ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ ಕೊರೊನಾ ಸೋಂಕಿನ ಸ್ಫೋಟದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ಹರಡುವಿಕೆ ತಡೆಗಟ್ಟಲು ಹೊಸ ವರ್ಷಾಚರಣೆಗೆ ಹಲವು ಕಡೆಗಳಲ್ಲಿ ಬ್ರೇಕ್ ಹಾಕಲಾಗಿದೆ.

ವಿಶ್ವದ ಹಲವು ಕಡೆಗಳಲ್ಲಿ ಹೊಸ ವರ್ಷಾಚರಣೆಯನ್ನು ಈ ಬಾರಿ ರದ್ದುಗೊಳಿಸಿದ್ದು, ಭಾರತದಲ್ಲೂ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಡಿಸೆಂಬರ್ 31ರ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿ, ನಿಗಾ ಇಡಲಾಗಿದೆ. ಹೊಸ ವರ್ಷಾಚರಣೆ ಕೊರೊನಾ ಹರಡುವಿಕೆಗೆ ಕಾರಣವಾಗದಿರಲಿ ಎಂದು ಕೇಂದ್ರವೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಮುಂದೆ ಓದಿ...

 ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸೂಚನೆ

ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸೂಚನೆ

ಹೊಸ ವರ್ಷದ ಸಂಭ್ರಮಾಚರಣೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ನಿರ್ಬಂಧ ಸಲಹೆಗಳನ್ನು ನೀಡಿದೆ. ಡಿಸೆಂಬರ್ 30, 31 ಮತ್ತು ಜನವರಿ 1ರಂದು ಸ್ಥಳೀಯ ಮಟ್ಟದ ಸನ್ನಿವೇಶಗಳನ್ನು ಮೌಲ್ಯಮಾಪನ ಮಾಡಿ ನಿರ್ಬಂಧ ವಿಧಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದು, ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಕಳೆದ ಮೂರು ತಿಂಗಳಿನಿಂದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಹೊಸ ವರ್ಷ ಈ ಸಂಖ್ಯೆಗಳನ್ನು ಅಧಿಕಗೊಳಿಸದಿರಲಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ.

 ಯಾವ ರಾಜ್ಯಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್?

ಯಾವ ರಾಜ್ಯಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್?

ಹೊಸ ವರ್ಷಾಚರಣೆಯಲ್ಲಿ ಹೆಚ್ಚು ಜನರು ಒಂದೆಡೆ ಸೇರಿ, ಕೊರೊನಾ ಹರಡುವಿಕೆಗೆ ಕಾರಣವಾಗಬಾರದು ಎಂಬ ನಿಟ್ಟಿನಲ್ಲಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನಿಗಾ ಇಡಲು ಸೂಚಿಸಿದೆ. ಸದ್ಯಕ್ಕೆ ಕರ್ನಾಟಕ, ಉತ್ತರಾಖಂಡ, ರಾಜಸ್ಥಾನ, ತಮಿಳುನಾಡು, ಒಡಿಶಾ, ಪಂಜಾಬ್ ರಾಜ್ಯಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ.

 ಕೆಲವೆಡೆ ನಿಬಂಧನೆಗಳೊಂದಿಗೆ ಅವಕಾಶ

ಕೆಲವೆಡೆ ನಿಬಂಧನೆಗಳೊಂದಿಗೆ ಅವಕಾಶ

ಕೆಲವು ರಾಜ್ಯಗಳಲ್ಲಿ ನಿಬಂಧನೆಗಳೊಂದಿಗೆ ಹೊಸ ವರ್ಷದ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಶಿಮ್ಲಾ, ಗೋವಾ, ಮುಂಬೈ, ಕೋಲ್ಕತ್ತಾದಲ್ಲಿ ಜನರಿಗೆ ನಿಬಂಧನೆಗಳನ್ನು ಹೇರಲಾಗಿದೆ. ಶಿಮ್ಲಾದಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಗೋವಾದಲ್ಲಿ ಈ ಬಾರಿ ವಿದೇಶಿಗರ ಸಂಖ್ಯೆಯೂ ಕಡಿಮೆ ಇರಲಿದೆ. ಮಹಾರಾಷ್ಟ್ರದಲ್ಲಿ ಹೋಟೆಲ್, ರೆಸ್ಟೋರೆಂಟ್, ಪಬ್, ಬಾರ್ ಗಳನ್ನು ಡಿ.31ರ ರಾತ್ರಿ 11ಗಂಟೆವರೆಗೂ ತೆರೆಯಲು ಅವಕಾಶವಿದೆ.

 ಚಳಿಗಾಲವೂ ಇರುವುದರಿಂದ ಎಚ್ಚರಿಕೆ!

ಚಳಿಗಾಲವೂ ಇರುವುದರಿಂದ ಎಚ್ಚರಿಕೆ!

ಬ್ರಿಟನ್ ರೂಪಾಂತರ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುವುದರೊಂದಿಗೆ ಚಳಿಗಾಲವೂ ಇದಾಗಿರುವುದರಿಂದ ಸೋಂಕು ಅತಿ ಬೇಗನೆ ತಗುಲಬಹುದು. ಹೀಗಾಗಿ ಹೆಚ್ಚು ಜನ ಸೇರಿಸಿ ಆಚರಣೆ ಸಲ್ಲದು. ಹೊಸ ವರ್ಷಾಚರಣೆಗೆಂದು ಹಲವು ಕಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ತಪ್ಪಿಸಬೇಕಿದೆ ಎಂದು ರಾಜ್ಯಗಳಿಗೆ ಸೂಚಿಸಿದೆ.

English summary
Due to Covid-19 pandemic, New Year celebrations on December 31 will be a muted across the world and as well as in India this time. Here are the list of states Which Bans New Year Celebration 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X