ISRO: ಇಸ್ರೋ ರಾಕೆಟ್ ಉಡಾವಣೆ ದಿಢೀರ್ ಮುಂದೂಡಿಕೆ, ಕಾರಣ ಏನು?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಾಧನೆ ನೋಡಿ ಅಮೆರಿಕ ಕೂಡ ಹೊಟ್ಟೆ ಉರಿದುಕೊಂಡು ನರಳುತ್ತದೆ. ಯಾಕಂದ್ರೆ ಭಾರತದ ರೀತಿ ಅಭಿವೃದ್ಧಿ ಹೊಂದುತ್ತಿರುವ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಸಾಧನೆ ಮಾಡುತ್ತಿದ್ದರೆ ಅದನ್ನು ಸಹಿಸಲು ಅಮೆರಿಕ ರೀತಿಯ ದೇಶಗಳಿಗೆ ಆಗಲ್ಲ ಎಂಬ ಆರೋಪ ಇದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಭಾರತದ ಹೆಮ್ಮೆ 'ಇಸ್ರೋ' ಮತ್ತೊಂದು ಮಹತ್ವದ ಸಾಧನೆಗೆ ಮುಂದಾಗಿದೆ. ಆದರೆ ಇದೇ ಸಮಯದಲ್ಲಿ ಒಂದು ಸಣ್ಣ ಸಮಸ್ಯೆ ಎದುರಾಗಿಬಿಟ್ಟಿದೆ!
ಹೌದು, 'ಇಸ್ರೋ' ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿತ್ತು. ಆದರೆ, ದಿಢೀರ್ ಉಪಗ್ರಹ ಉಡಾವಣೆ ಮೂಂದೂಡಿ ಈಗ ಆದೇಶ ಹೊರಡಿಸಲಾಗಿದೆ. 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ಯೋಜನೆ ಭಾಗವಾಗಿ ಒಟ್ಟು 2 ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಈಗ ಅದು ಬದಲಾಗಿದ್ದು ಹೊಸ ಸಮಯ ಘೋಷಣೆ ಮಾಡಲಾಗಿದೆ. ಹಾಗಾದ್ರೆ 'ಇಸ್ರೋ' ಉಪಗ್ರಹ ಉಡಾವಣೆಯ ಸಮಯ ಯಾವಾಗ? ಮುಂದೆ ಓದಿ.

'ಇಸ್ರೋ' ಅಭಿಮಾನಿಗಳೇ ಇಲ್ಲಿ ಗಮನಿಸಿ!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ' ಇಸ್ರೋ' ಈಗಾಗಲೇ ನೂರಾರು ಸಾಧನೆ ಮಾಡಿಬಿಟ್ಟಿದೆ. 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಎಂದರೆ, 2 ಬಾಹ್ಯಾಕಾಶ ನೌಕೆಗಳನ್ನ ಒಂದಕ್ಕೊಂದು ಜೋಡಿಸುವುದು ಹಾಗೂ ಬೇರ್ಪಡಿಸುವ ಪ್ರಯೋಗ ಮಾಡಲು ಈಗ ಎಲ್ಲ ರೀತಿ ಸಿದ್ಧತೆ ನಡೆಸಿದೆ. ಈವರೆಗೂ ಈ ಸಾಧನೆ ಮಾಡಿದ್ದ ದೇಶಗಳ ಪೈಕಿ ಅಮೆರಿಕ, ರಷ್ಯಾ, ಚೀನಾ ಮಾತ್ರ ಮುನ್ನೆಲೆಯಲ್ಲಿ ಇದ್ದವು. ಇದೀಗ ಭಾರತ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿತ್ತು, ಆದರೆ ಈಗ 'ಇಸ್ರೋ' ಉಪಗ್ರಹ ಉಡಾವಣೆ ಸಮಯ ಬದಲಾಗಿದೆ.
'ಇಸ್ರೋ' ತನ್ನ ರಾಕೆಟ್ ಉಡಾವಣೆ ಸಮಯವನ್ನು ರಾತ್ರಿ 10 ಗಂಟೆಗೆ ಮುಂದೂಡಿದ್ದು, ಈ ಮೂಲಕ 2 ನಿಮಿಷಗಳ ಕಾಲ ರಾಕೆಟ್ ಉಡಾವಣೆ ಸಮಯ ಮುಂದೂಡಿಕೆ ಆಗಿದೆ. ಹಾಗೇ, ಈ ಘೋಷಣೆ ಮೂಲಕ ಇಸ್ರೋ ಕಾರ್ಯದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿದೆ. ಈ ಸಾಧನೆ ಮಾಡಲು ನಮ್ಮ ಹೆಮ್ಮೆಯ 'ಇಸ್ರೋ' ಸಂಸ್ಥೆ ಹತ್ತಾರು ವರ್ಷಗಳ ಕಾಲ ಪರಿಶ್ರಮ ಹಾಕಿ, ಕಷ್ಟಪಟ್ಟಿದ್ದು ಇಂದು ರಾತ್ರಿ ಇಸ್ರೋ ಕನಸು ನನಸಾಗುವ ನಿರೀಕ್ಷೆ ಇದೆ.
ಬಾಹ್ಯಾಕಾಶ ಪ್ರಿಯರಿಗೆ ಭರ್ಜರಿ ಸುದ್ದಿ!
ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ನಡೆಸಲು 'ಇಸ್ರೋ' ವಿಜ್ಞಾನಿಗಳು ಸಜ್ಜಾಗಿದ್ದಾರೆ. ಈ ಮೂಲಕ ಬಾಹ್ಯಾಕಾಶ ಅಂದ್ರೆ ಆಕಾಶದಲ್ಲಿ ಯಾವುದೇ ರೀತಿ ಮಾನವರ ಸಹಾಯ ಇಲ್ಲದೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಕೂಡಿಸುವುದು & ಬೇರೆ ಮಾಡುವ ಕೆಲಸವನ್ನು ಇಸ್ರೋ ಭೂಮಿ ಮೇಲಿಂದಲೇ ನಡೆಸಲಿದೆ. ಡಿಸೆಂಬರ್ 30ರ ರಾತ್ರಿ 10 ಗಂಟೆಗೆ 'ಇಸ್ರೋ' 2 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಉಪಗ್ರಹ ನಭಕ್ಕೆ ಅಂದ್ರೆ ಬಾಹ್ಯಾಕಾಶಕ್ಕೆ ಹಾರಲಿದೆ. ಇದಕ್ಕಾಗಿ ವಿಶೇಷ ತಂತ್ರಜ್ಞಾನ ಬಳಸಲು ಇಸ್ರೋ ಈಗ ಮುಂದಾಗಿದೆ.












Click it and Unblock the Notifications