ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸನೆ ಬಟ್ಟೆಗಳಿಗೆ ಗುಡ್ ಬೈ: ರೈಲ್ವೆ ಪ್ರಯಾಣ ಮತ್ತಷ್ಟು ಹಿತಕರ

|
Google Oneindia Kannada News

ನವದೆಹಲಿ, ಮಾರ್ಚ್, 14: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕ್ರಾಂತಿ ಮಾಡಿದ್ದು ಗೊತ್ತೆ ಇದೆ. ಅದೇ ದಾರಿಯಲ್ಲಿ ಸಾಗುತ್ತಿರುವ ಭಾರತೀಯ ರೈಲ್ವೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಸಕಲ ಕ್ರಮ ತೆಗೆದುಕೊಂಡಿದೆ.

ಇನ್ನು ಮುಂದೆ ರೈಲ್ವೆ ಪ್ರಯಾಣ ಎಂದು ಮೂಗು ಮುರಿಯುವಂತೆ ಇಲ್ಲ. ಸಕಲವನ್ನು ಆನ್ ಲೈನ್ ಗೆ ತಂದ ಭಾರತೀಯ ರೈಲ್ವೆ ಇದೀಗ ಸುಖಕರ ಪ್ರಯಾಣಕ್ಕೆ ಸಹ ಅವಕಾಶ ಮಾಡಿಕೊಡುತ್ತಿದ್ದು ಪ್ರತಿ ದಿನ ಹೊಸ ಬ್ಲ್ಯಾಂಕೆಟ್‌ ಗಳನ್ನು ನೀಡಲಿದ್ದೇನೆ ಎಂದು ತಿಳಿಸಿದೆ.[ರೈಲ್ವೆ 'ಕ್ಲೀನ್ ಮೈ ಕೋಚ್' ಆನ್ ಲೈನ್ ಗೆ ಎಂಟ್ರಿ]

indian railways

ರೈಲ್ವೆಯಲ್ಲಿ ಕೊಳೆಯಾದ ಬಟ್ಟೆ ನೀಡಲಾಗುತ್ತಿದೆ ಎಂಬ ಚರ್ಚೆ ರಾಜ್ಯಸಭೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಅಂತಿಮವಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅಭಯ ಪ್ರಯಾಣಿಕರಿಗೆ ಸಿಕ್ಕಂತಾಗಿದೆ. [ಜನ ಸಾಮಾನ್ಯರಿಗೆ ಪ್ರಭು ರೈಲು ಬಜೆಟ್ಟಿನಿಂದ ಸಿಕ್ಕಿದ್ದೇನು?]

ಈಗಿರುವ ಹೊದಿಕೆಗಳನ್ನು ಬದಲಿಸಿ ನೂತನ ವಿನ್ಯಾಸದ ಹಗುರ ಮತ್ತು ಮೃದುವಾದ ಹೊದಿಕೆಗಳನ್ನು ನೀಡಲು ಉದ್ದೇಶಿಸಲಾಗಿದೆ. ಪ್ರತಿ ಬಾರಿ ಬಳಕೆ ಬಳಿಕ ಅದನ್ನು ತೊಳೆಯಲಾಗುತ್ತದೆ.

ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್ಟಿ) ನೂತನ ಬ್ಲ್ಯಾಂಕೆಟ್‌ಗಳನ್ನು ವಿನ್ಯಾಸಗೊಳಿಸಿದ್ದು, ಉಣ್ಣೆ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗಿದೆ. ಇವುಗಳನ್ನು ಪ್ರತಿನಿತ್ಯ ತೊಳೆಯಲು ಅನೇಕ ರೈಲು ನಿಲ್ದಾಣಗಳಲ್ಲಿ ಯಾಂತ್ರೀಕೃತ ಲಾಂಡ್ರಿಗಳನ್ನು ಪ್ರಾರಂಭಿಸಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.

English summary
Indian Railways took a initiative that to replace all blankets which is used by the passenger. Smelly blankets may soon become a thing of past on trains, with the Railways deciding to wash them after every use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X