ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು
ನವದೆಹಲಿ, ಜೂ. 10: ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವನ್ನು ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ಎಸಿ ಕ್ಲಾಸ್ ಬುಕಿಂಗ್ ಸಮಯ ಬೆಳಗ್ಗೆ 10 ಗಂಟೆಗೆ ಆರಂಭವಾಗಿ 11 ಗಂಟೆಗೆ ಅಂತ್ಯವಾಗಲಿದೆ. ಉಳಿದ ವಿಭಾಗದ ಟಿಕೆಟ್ ಬುಕಿಂಗ್ ಬೆಳಗ್ಗೆ 11 ಕ್ಕೆ ಆರಂಭವಾಗಿ 12 ಕ್ಕೆ ಮುಗಿಯಲಿದೆ.
ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ದೊರೆಯಲು ಇಂಥ ಕ್ರಮ ತೆಗೆದುಕೊಳ್ಳಲಾಗಿದೆ. ಬುಕಿಂಗ್ ವೇಳೆ ಆಗುತ್ತಿದ್ದ ಕೆಲ ಸಮಸ್ಯೆಗಳು ಇದರಿಂದ ಪರಿಹಾರವಾಗಲಿದೆ ಎಂದು ರೈಲ್ವೆ ಬೋರ್ಡ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಅಲ್ಲದೇ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯ ವೇಗ ಸಹ ದ್ವಿಗುಣಗೊಂಡಿದೆ. ರೈಲ್ವೆಯಲ್ಲಿ ಪ್ರತಿದಿನ 4 ಲಕ್ಷ ತತ್ಕಾಲ್ ಟಿಕೆಟ್ ಕಾದಿರಿಸಲಾಗುತ್ತಿದ್ದು ರೈಲ್ವೆ ತಾಣ ನಿಧಾನಗತಿಗೆ ತಳ್ಳಲ್ಪಡುತ್ತಿತ್ತು. ಈಗ ಎರಡು ಹೊಸ ಸರ್ವರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.[ರೈಲು ಪ್ರಯಾಣ ಮಾಹಿತಿ ಗೂಗಲ್ ಮ್ಯಾಪ್ ನಲ್ಲೇ ಲಭ್ಯ!]
ಆಧುನಿಕ ಕ್ರಮ ಅಳವಡಿಸಿಕೊಂಡಿರುವ ಪರಿಣಾಮ ತತ್ಕಾಲ್ ಟಿಕೆಟ್ ಬುಕಿಂಗ್ ಸಾಮರ್ಥ್ಯ ನಿಮಿಷಕ್ಕೆ 7200 ಟಿಕೆಟ್‌ಗಳಿಂದ 14000 ಟಿಕೆಟ್‌ಗಳಿಗೆ ಹೆಚ್ಚಳವಾಗಿದೆ. ಗ್ರಾಹಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡಲಾಗಿದೆ ಎಂದು ಐಆರ್‌ಸಿಟಿಸಿ ಸಿಎಂಡಿ ಡಾ. ಮನೋಚಾ ತಿಳಿಸಿದ್ದಾರೆ.












Click it and Unblock the Notifications