ಯೋಜನೆ ಕ್ಲಿಕ್, ಒಂದೇ ದಿನ 13 ಲಕ್ಷ ರೈಲ್ವೆ ಟಿಕೆಟ್ ಬುಕ್
ನವದೆಹಲಿ, ಏ. 3 : ರೈಲ್ವೆ ಇಲಾಖೆ ಹೊಸ ನಿಯಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೇ ದಿನ ದಾಖಲೆಯ 13.45 ಲಕ್ಷ ಟಿಕೆಟ್ ಗಳು ಆನ್ ಲೈನ್ ನಲ್ಲಿ ಮಾರಾಟವಾಗಿವೆ.
ಟಿಕೆಟ್ ಬುಕ್ ಮಾಡಲು 60 ದಿನ ಇದ್ದ ಅವಧಿಯನ್ನು ರೈಲ್ವೆ ಇಲಾಖೆ 120 ದಿನಗಳಿಗೆ ಏರಿಸಿತ್ತು. ಏಪ್ರಿಲ್ 1 ರಿಂದ ಹೊಸ ಯೋಜನೆ ಜಾರಿಯಾಗಿತ್ತು. ಪರಿಣಾಮ ಏಪ್ರಿಲ್ 1 ರಂದು ದಾಖಲೆಯ ಟಿಕೆಟ್ ಬುಕ್ ಆಗಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಮೊದಲ ದಿನವೇ 32 ಲಕ್ಷ ಪ್ರಯಾಣಿಕರು ತಾಣಕ್ಕೆ ಭೇಟಿ ನೀಡಿ 13 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಮಾಡಿದ್ದಾರೆ. ಇದರಲ್ಲಿ 1.25 ಲಕ್ಷ ತತ್ಕಾಲ್ ಟಿಕೆಟ್ ಆಗಿದ್ದು ಸರ್ಕಾರಕ್ಕೆ 2.5 ಕೋಟಿ ರೂ. ಗೂ ಅಧಿಕ ಸೇವಾ ಶುಲ್ಕ ಪಾವತಿಯಾಗಿದೆ.
ಆನ್ ಲೈನ್ ಟಿಕೆಟ್ ಬುಕಿಂಗ್ ನಲ್ಲಿ ಇದೊಂದು ಹೊಸ ದಾಖಲೆಯಾಗಿದೆ. ಆದರೆ ವಿದೇಶಿ ಪ್ರವಾಸಿಗರಿಗೆ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಅವರು ಈಗ ಇರುವಂತೆ 360 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು.[ಒಂದು ಲಾಗ್ ಇನ್ ಗೆ ಒಂದೇ ರೈಲ್ವೆ ಟಿಕೆಟ್]
ದಲ್ಲಾಳಿಗಳ ಹಾವಳಿ ತಪ್ಪಿಸಲು ಸರ್ಕಾರ ನೂತನ ಯೋಜನೆ ಜಾರಿ ಮಾಡಿದ್ದು ಜನರ ಪ್ರೀತಿಗೆ ಪಾತ್ರವಾಗುತ್ತಿದೆ. ಎರಡು ವರ್ಷಗಳ ಹಿಂದೆಯೂ ಇದೇ ಬಗೆಯ ಯೋಜನೆ ರೂಪಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣದಿಂದ ಹಿನ್ನಡೆ ಉಂಟಾಗಿತ್ತು.
ಇತ್ತೀಚೆಗಷ್ಟೇ ರೈಲ್ವೆ ಫ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿತ್ತು. ಅಲ್ಲದೇ ಸ್ಲೀಪರ್ ಮತ್ತು ಸೆಕೆಂಡ್ ಕ್ಲಾಸ್ ಸೇವಾ ಶುಲ್ಕದಲ್ಲಿಯೂ ಏರಿಕೆ ಮಾಡಲಾಗಿತ್ತು.












Click it and Unblock the Notifications