Viral: ಎಸಿ ಬೋಗಿಯಲ್ಲಿ ಇಲಿ ಕಾಟ: ದೂರು ನಿರ್ಲಕ್ಷಿಸಿದ ರೈಲ್ವೆ ಇಲಾಖೆಗೆ 15000 ರೂ ದಂಡ
Indian Railways: ಭಾರತೀಯ ರೈಲ್ವೆ ಜಾಲ ವಿಸ್ತರಿಸುತ್ತಿದ್ದಂತೆ ರೈಲುಗಳಲ್ಲಿ ಜನ ಸಂಚಾರ ಪ್ರಮಾಣವು ಏರಿಕೆ ಆಗುತ್ತಿದೆ. ಇದರೊಂದಿಗೆ ನಿತ್ಯ ಒಂದಿಲ್ಲೊಂದು ಸಮಸ್ಯೆಗಳು, ನೈರ್ಮಲ್ಯ ಕೊರತೆ, ಅಹಿಕತರ ಘಟನೆಗಳು ಅಲ್ಲಲ್ಲಿ ವರದಿ ಆಗುತ್ತಿದೆ. ಇದೀಗ ಸುಮಾರು 7 ವರ್ಷಗಳ ಹಿಂದಿನ ಘಟನೆಗೆ ಗ್ರಾಹಕ ವೇದಿಕೆಯು ರೈಲ್ವೆ ಇಲಾಖೆಗೆ ಬರೋಬ್ಬರಿ 15,000 ರೂಪಾಯಿ ದಂಡ ವಿಧಿಸಿದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅಂದು ಏನಾಗಿತ್ತು, ಯಾಕೆ ದಂಡ ವಿಧಿಸಲಾಯಿತು ಎಂಬ ಮಾಹಿತಿ ಇಲ್ಲಿದೆ.
ಪ್ರಕರಣವೊಂದರಲ್ಲಿ ದಂಡ ಪಾವತಿಸಲಿರುವ ರೈಲ್ವೆ ಇಲಾಖೆಯು ಗ್ರಾಹಕರ ವೇದಿಕೆ ಆದೇಶದ ಬಳಿಕ ರೈಲ್ವೆ ಪ್ರಯಾಣಿಕರು ತಮ್ಮ ವಸ್ತುಗಳನ್ನು ತಾವೇ ನೋಡಿಕೊಳ್ಳುವಂತೆ ಕೋರಲಾಗಿದೆ. ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ಲಗೇಜ್‌ಗಳನ್ನು ಇಲಿಗಳು ಹಾನಿ ಮಾಡಿವೆ. ಈ ಪ್ರಕರಣದಲ್ಲಿ ಭಾರತೀಯ ರೈಲ್ವೆ ಇಲಾಖೆಗೆ ಮಧ್ಯಪ್ರದೇಶದ ಗ್ರಾಹಕರ ವೇದಿಕೆಯು 15,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಬ್ಯಾಗ್, ಬಟ್ಟೆ ಕಚ್ಚಿದ್ದ ಇಲಿ! ಸ್ಪಂದಿಸದ ರೈಲ್ವೆ, ಹೋರಾಟಕ್ಕೆ ಫಲ
ಸದರಿ ಪ್ರಕರಣ ಸುಮಾರು ಏಳು (2020ರ ಮೊದಲು) ವರ್ಷಗಳಷ್ಟು ಹಳೆಯದು ಎಂಬ ಮಾಹಿತಿ ಇದೆ. ಪ್ರಯಾಣಿಕ ವಿಪಿನ್ ದುಬೆ ಅವರು ಮಧ್ಯಪ್ರದೇಶದ ಕಟ್ನಿಯಿಂದ ಕಲ್ಯಾಣ್‌ಗೆ ಥರ್ಡ್ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿದ್ದ ಎಸಿ ಬೋಗಿಯಲ್ಲಿ ಇಲಿಗಳು ಇದ್ದವು. ಇಲಿಗಳು ನನ್ನ ಲಗೇಜ್‌ಗಳನ್ನು ಕಚ್ಚಿ ಹಾಳು ಮಾಡಿವೆ. ಬ್ಯಾಗ್‌ನಲ್ಲಿದ್ದ ಬಟ್ಟೆಗಳು ಹಾನಿಯಾಗಿವೆ ಎಂದು ದಬೆ ಅವರು ರೈಲ್ವೆ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದರು.
ದುಬೆ ಅವರ ದೂರಿಗೆ ರೈಲ್ವೆಯ ಯಾವೊಬ್ಬ ಅಧಿಕಾರಿಗಳು ದೂರ ನೀಡಲಿಲ್ಲ. ಇದರಿಂದ ಅತೃಪ್ತಿ ಉಂಟಾಗಿತ್ತು. ರೈಲ್ವೆಯ ನಡೆಯನ್ನು ಪ್ರಶ್ನಿಸಿದ ಪ್ರಯಾಣಿಕನು ಗ್ರಾಹಕ ವೇದಿಕೆ ಸಂಪರ್ಕಿಸಿದರು. ಅಲ್ಲಿ ತಮಗಾದ ನೋವು ತೋಡಿಕೊಂಡರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಸುರಕ್ಷಿತ ಪ್ರಯಾಣ ವಾತಾವರಣವನ್ನು ಒದಗಿಸಲು ರೈಲ್ವೆ ವಿಫಲವಾಗಿದೆ' ಎಂದು ವೇದಿಕೆ ಪರಿಗಣಿಸಿತು.
ಮಧ್ಯಪ್ರದೇಶದ ಕಟ್ನಿಯಲ್ಲಿರುವ ಗ್ರಾಹಕರ ವೇದಿಕೆಯು "ಸೇವೆಯಲ್ಲಿ ಕೊರತೆ" ಉಂಟಾಗಿದೆ. ಪ್ರಯಾಣಿಕರಿಗೆ ಸ್ಪಂದಿಸಿಲ್ಲ ಎಂದು ಉಲ್ಲೇಖಿಸಿ ಭಾರತೀಯ ರೈಲ್ವೆಗೆ 15,000 ರೂಪಾಯಿ ದಂಡ ವಿಧಿಸಿತು. ಅದೆಲ್ಲ ಹಣವನ್ನು ಪರಿಹಾರ ರೂಪದಲ್ಲಿ ಪಾವತಿಸಲು ಸೂಚಿಸಿತು.
ಪ್ರಯಾಣಿಕನಿಗೆ ಆದ ತೊಂದರೆಗೆ ಪರಿಹಾರ
ರೈಲ್ವೆ ಪ್ರಯಾಣಿಕ ಪ್ರಕರಣ ಬಳಿಕ ಇಲ್ಲಿಯವರೆಗೆ ಅನುಭವಿಸಿದ ಮಾನಸಿಕ ಮತ್ತು ದೈಹಿಕ ತೊಂದರೆಗೆ 5,000 ರೂಪಾಯಿ, ಕಾನೂನು ಹೋರಾಟದ ವೆಚ್ಚಗಳಿಗಾಗಿ 5,000 ರೂಪಾಯಿ, ವೈಯಕ್ತಿಕ ವಸ್ತುಗಳಿಗೆ ಹಾನಿಗಾಗಿ ಉಳಿದ ಮೊತ್ತವನ್ನು (5000 ರೂ.) ಪಾವತಿಸುವಂತೆ ಆದೇಶಿಸಿದೆ. ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆ, ನೈರ್ಮಲ್ಯ ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ರೈಲ್ವೆ ಇಲಾಖೆಯ ಜವಾಬ್ದಾರಿಯನ್ನು ಈ ಆದೇಶ ಒತ್ತಿ ಹೇಳಿದೆ.
Passenger Are Requested To Take Care Of Their Own Belongings 😳😎
— Bihari Babu (@ZbnX5n) June 1, 2026
Indian Railways Fined ₹15,000 After Rats Damaged Passenger’s Luggage in AC Coach
A Consumer Forum in Katni, Madhya Pradesh, has imposed a ₹15,000 penalty on Indian Railways for "deficiency in service."
The… pic.twitter.com/LSBanBjI9I
ಸ್ಪಂದಿಸದ ರೈಲ್ವೆ ಇಲಾಖೆ: ನೆಟ್ಟಿಗರ ಖಂಡನೆ
ಎಕ್ಸ್ ನಲ್ಲಿ (@ZbnX5n) ಹಂಚಿಕೊಂಡ ಈ ಪೋಸ್ಟ್ ನೋಡಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ರೈಲ್ವೆ ಇಲಾಖೆಯು ಕೋಚ್‌ಗಳನ್ನು ಸ್ವಚ್ಛವಾಗಿಡುವುದಿಲ್ಲ. ಹಾಗಾದರೆ ನಾವು ಕೊಡುವ ಹಣ ಎಲ್ಲಿಗೆ ಹೋಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದು ಪ್ರಯಾಣಿಕರ ದುರಾದೃಷ್ಟ ಅಲ್ಲ, ಇದು ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ಎಸಿ ಬೋಗಿಗಳಲ್ಲೂ ಸ್ವಚ್ಛತೆಯ ಕೊರತೆ' ಎಂದು ಮತ್ತೊಬ್ಬರು ಹೇಳಿದ್ದಾರೆ. ಬಹುತೇಕ ಮಂದಿ ರೈಲ್ವೆ ಇಲಾಖೆಯ ನಿರ್ಲಕ್ಷ್ಯ, ದೂರಿಗೆ ಸ್ಪಂದಿಸದ ನಡೆ ಖಂಡಿಸಿದ್ದಾರೆ.













Click it and Unblock the Notifications