ಅಂಡಮಾನ್ ದ್ವೀಪಕ್ಕೆ ರೈಲು ಸಂಪರ್ಕ, ಇಲಾಖೆ ಕನಸಿನ ಯೋಜನೆ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 06: ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್​ನಿಂದ ಉತ್ತರ ತುದಿಯಲ್ಲಿರುವ ದೊಡ್ಡ ನಗರ ದಿಗ್ಲಿಪುರಕ್ಕೆ ಭಾರತೀಯ ರೈಲ್ವೆ ಸಂಪರ್ಕ ಒದಗಿಸಲು ಮುಂದಾಗಿದೆ. ಸುಮಾರು 240 ಕಿ.ಮೀ. ದೂರದ ಬ್ರಾಡ್ ಗೇಜ್ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಸಿದ್ಧತೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆಗೆ ರೈಲ್ವೆ ಸಚಿವಾಲಯ ಕಾಯುತ್ತಿದೆ.

ಈ ಕನಸಿನ ಯೋಜನೆಯ ಪ್ರಾಥಮಿಕ ಹಂತದ ಸಮೀಕ್ಷೆಯನ್ನು ರೈಲ್ವೆ ಸಚಿವಾಲಯ ಪೂರ್ಣಗೊಳಿಸಿದೆ. ಈ ಯೋಜನೆಯ ಅಂದಾಜು ವೆಚ್ಚ 2,413.68 ಕೋಟಿ ರೂ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Indian Railways to connect Port Blair with Diglipur Andaman and Nicobar Islands

ಅಂಡಮಾನ್​ನಲ್ಲಿ ರೈಲ್ವೆ ಮಾರ್ಗ ನಿರ್ಮಾಣದಿಂದ ರಕ್ಷಣಾ ತಂತ್ರಗಾರಿಕೆಗೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಪ್ರಸ್ತುತ ಅಂಡಮಾನ್ ದ್ವೀಪಕ್ಕೆ ವಾರ್ಷಿಕ 4.5 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದು, ರೈಲ್ವೆ ಮಾರ್ಗ ನಿರ್ಮಾಣದ ನಂತರ ಪ್ರವಾಸಿಗರ ಪ್ರಮಾಣ ವಾರ್ಷಿಕ 6 ಲಕ್ಷಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವಾಲಯ ತನ್ನ ಸಮೀಕ್ಷಾ ವರದಿಯಲ್ಲಿ ನಮೂದಿಸಿದೆ.

ಸದ್ಯ ಪೋರ್ಟ್​ಬ್ಲೇರ್​ನಿಂದ ದಿಗ್ಲಿಪುರಕ್ಕೆ ಬಸ್​ ಮೂಲಕ ಪ್ರಯಾಣಿಸಲು 14 ಗಂಟೆಗಳು ಬೇಕಾಗುತ್ತದೆ, ಹಡಗಿನಲ್ಲಿ 24 ಗಂಟೆ ಅವಧಿ ಬೇಕಾಗುತ್ತದೆ. ರೈಲ್ವೆ ಮಾರ್ಗ ನಿರ್ಮಾಣದಿಂದ ಪ್ರಯಾಣದ ಅವಧಿಯಲ್ಲಿ ಗಣನೀಯ ಇಳಿಕೆ ಕಂಡು ಬರಲಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಅಂಡಮಾನ್ ಆಡಳಿತ ಸಹ ಯೋಜನೆಗೆ ತನ್ನ ಸಹಮತವನ್ನು ವ್ಯಕ್ತಪಡಿಸಿದೆ.

2014ರಲ್ಲಿ ಮೊದಲ ಬಾರಿಗೆ ಅಂಡಮಾನ್​ನಲ್ಲಿ ರೈಲು ಮಾರ್ಗ ನಿರ್ಮಿಸುವ ಕುರಿತು ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗಿತ್ತು. ಕಾರಣಾಂತರಗಳಿಂದ ಸಮೀಕ್ಷೆ ಸ್ಥಗಿತಗೊಂಡಿತ್ತು. 2016ರಲ್ಲಿ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Railways to connect Port Blair with Diglipur Andaman and Nicobar Islands. A 240-KM broad-gauge railway line connecting two major islands, with bridges and stations along the coast
Please Wait while comments are loading...