Train Cancelled: ಕರ್ನಾಟಕದ ಈ ಮಾರ್ಗದಲ್ಲಿ ಸಂಚರಿಸುವವರು ಗಮನಿಸಿ, ರದ್ದಾದ ರೈಲುಗಳ ಮಾಹಿತಿ ಇಲ್ಲಿದೆ
ಬೆಂಗಳೂರು, ಜನವರಿ 17: ಭಾರತೀಯ ರೈಲ್ವೆ ಇಲಾಖೆಯು ಕೆಲವು ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗಗಳಲ್ಲಿ ರೈಲು ಸಂಚಾರವು ಭಾಗಶಃ ರದ್ದು ಮಾಡಲಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಕೊಪ್ಪಳ ಮಾರ್ಗ ವ್ಯಾಪ್ತಿಯಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಬದಲಾಗಿ ಅಲ್ಲಿ ಸಬ್ ವೇ (ಉಪ ಮಾರ್ಗ) ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ರೈಲುಗಳ ತಾತ್ಕಾಲಿಕೆ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಿಭಾಗವು ಮಾಹಿತಿ ನೀಡಿದೆ. ಹಾಗಾದರೆ ಯಾವ ಮಾರ್ಗದಲ್ಲಿ, ಯಾವ ರೈಲುಗಳು ರದ್ದಾಗಿವೆ, ಗಾಡಿ ಸಂಖ್ಯೆ ಮಾಹಿತಿ ಇಲ್ಲಿ ತಿಳಿಯಿರಿ.

ರೈಲು ರದ್ದು, ವಿಳಂಬ ಸಂಚಾರದ ಮಾಹಿತಿ
* ಹೊಸಪೇಟೆ-ಸೋಲಾಪುರ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ-11306 ) ಜನವರಿ 23 ರಿಂದ ಫೆಬ್ರವರಿ 1ರವರೆಗೆ ಹೊಸಪೇಟೆ-ಗದಗ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದೆ. ಈ ರೈಲು ಗದಗ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
* ಸೊಲ್ಲಾಪುರ-ಹೊಸಪೇಟೆ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ-11305) ಜನವರಿ 22 ರಿಂದ 31 ಗದಗ-ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಇದೇ ಅವಧಿಯಲ್ಲಿ ಗದಗ ನಿಲ್ದಾಣದಲ್ಲಿ ಈ ರೈಲಿನ ಸೇವೆ ಕೊನೆಗೊಳ್ಳಲಿದೆ.
* ಜನವರಿ 22, 23, 29 ಮತ್ತು 31 ರಂದು ವಿಜಯವಾಡ ನಿಲ್ದಾಣದಿಂದ ಹೊರಡುವ ವಿಜಯವಾಡ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ (ಗಾಡಿ ಸಂಖ್ಯೆ 17330) ರೈಲು 40 ನಿಮಿಷಗಳ ಕಾಲ ಮಾರ್ಗ ಮಧ್ಯದಲ್ಲಿ ವಿಳಂಬಗೊಳ್ಳಲಿದೆ.
ಜ. 20 ರಂದು ರೈಲು ಸಂಚಾರ ಬದಲಾವಣೆ ಪಟ್ಟಿ
* ಮೈಸೂರು ರೈಲ್ವೆ ವ್ಯಾಪ್ತಿಯ ಮಂದಗೆರೆ ನಿಲ್ದಾಣದಲ್ಲಿ ಸಿಗ್ನಲಿಂಗ್ ಕುರಿತ ಕಾಮಗಾರಿ ನಡೆಯಲಿರುವ ಪ್ರಯುಕ್ತ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆಗಳು ಆಗಿವೆ. ಹಾಸನ ಮತ್ತು ಮೈಸೂರು ನಡುವೆ ಸಂಚರಿಸುವ ಬೆಂಗಳೂರಿನ ಯಶವಂತಪುರ-ಮೈಸೂರು ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16207) ಜನವರಿ 20 ಭಾಗಶಃ ರದ್ದುಗೊಳಿಸಲಾಗಿದೆ.
* ಮೈಸೂರು- ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಬದು ಸೇರುವ ವಿಶೇಷ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 06269) ಜನವರಿ 20 ಮೈಸೂರು ನಿಲ್ದಾಣದಿಂದ ಒಂದೂವರೆ ಗಂಟೆ ತಡವಾಗಿ ಬಿಡಲಿದೆ.

* ಅರಸೀಕೆರೆ-ಮೈಸೂರು ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 06267 ) ಜನವರಿ 20 ರಂದು ಅರಸೀಕೆರೆ ನಿಲ್ದಾಣದಿಂದ 90 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.
* ಮೈಸೂರು-ಅರಸೀಕೆರೆ ವಿಶೇಷ ಎಕ್ಸ್ ಪ್ರೆಸ್ (ಸಂಖ್ಯೆ 06214) ಜನವರಿ 20 ರಂದು ಸಂಚಾರ ಮಾರ್ಗದಲ್ಲಿಯೇ 45 ನಿಮಿಷ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ರೈಲ್ವೆ ಪ್ರಯಾಣಿಕರು ಪರ್ಯಾಯ ಮಾರ್ಗ, ಪರ್ಯಾಯ ಸಾರಿಗೆ ಮೂಲಕ ತೆರಳಬಹುದಾಗಿದೆ.
16 ರೈಲುಗಳ ಸಂಚಾರ ಸಂಪೂರ್ಣ ರದ್ದು
ಭಾರತೀಯ ರೈಲ್ವೆಯು ಆಗ್ರಾ ರೈಲು ವಿಭಾಗದಲ್ಲಿ ತುರ್ತು ನಿರ್ವಹಣೆಯಂತಹ ಕೆಲಸ ಕೈಗೊಂಡಿದೆ. ಈ ಸಂಬಂಧ ಫೆಬ್ರುವರಿ 6ರವರೆಗೆ ಒಟ್ಟು ಸುಮಾರು 16ರೈಲುಗಳ ಸಂಚಾರ ರದ್ದಾಗಿವೆ. ಇದರಿಂದ ಉತ್ತರ ಭಾರತದಲ್ಲಿ ಹಲವು ಭಾಗಗಳ ಸಂಪರ್ಕ ಕಡಿತಗೊಂಡಂತಾಗಿದೆ. ಇಷ್ಟು ರೈಲುಗಳ ಆಗ್ರಾ ವಿಭಾಗದಿಂದ ಪುಣೆ ಸಂಪರ್ಕಿಸುವ ರೈಲುಗಳಾಗಿದ್ದು, ಹಳಿ ತಪಾಸಣೆಯಂತಹ ಕಾಮಗಾರಿ ಪ್ರಯುಕ್ತ ಇವುಗಳ ಸೇವೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications