ಮಗುವಿಗೆ ಡೈಪರ್ ಬೇಕೆಂದು ರಿಕ್ಷೆಸ್ಟ್ ಮಾಡಿದ ಪ್ರಯಾಣಿಕ : ಹತ್ತೇ ನಿಮಿಷದಲ್ಲಿ ಸಮಸ್ಯೆ ಬಗೆಹರಿಸಿದ ರೈಲ್ವೆ
ರೈಲಿನಲ್ಲಿ ಪ್ರಯಾಣ (Indian Railway) ಮಾಡುವಾಗ ಕೆಲವೊಮ್ಮೆ ಕೆಲವು ಸಮಸ್ಯೆ ಎದುರಾಗಬಹುದು. ಏನಾದರೂ ವಸ್ತು ಬೇಕೇ ಬೇಕು ಎನ್ನುವ ತುರ್ತು ಎದುರಾದಾಗ ಸಿಗುವುದು ಕಷ್ಟ. ಯಾಕೆಂದರೆ ರೈಲನ್ನು ನಮಗೆ ಬೇಕು ಎಂದಲ್ಲಿ ನಿಲ್ಲಿಸೋಲ್ಲ. ಯಾವಾಗ ಯಾವ ಸ್ಥಿತಿ ಎದುರಾಗುತ್ತದೆಯೋ ಹೇಳೋದು ಕಷ್ಟ. ಅದರಲ್ಲೂ ಚಿಕ್ಕ ಮಗು ಜೊತೆ ಪಯಣಿಸಿದ್ದರಂತೂ ಮ್ಯಾನೇಜ್ ಮಾಡೋದು ಕಷ್ಟ ಕಷ್ಟ. ಆದರೆ ಈಗ ರೈಲ್ವೆ ಪ್ರಯಾಣಿಕರ ಅಗತ್ಯ, ಎಮರ್ಜೆನ್ಸಿಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ.

Indian Railway ಪ್ರಯಾಣದ ವೇಳೆ ಡೈಪರ್ ಸಮಸ್ಯೆ :
ಇದೀಗ ರೈಲಿನಲ್ಲಿ ಪ್ರಯಾಣ ಮಾಡ್ತಾ ಇದ್ದವರು ತಮ್ಮ ಅನುಭವವನ್ನು ಶೇರ್ ಮಾಡಿದ್ದಾರೆ. ಇವರು ಆರು ತಿಂಗಳ ಪುಟ್ಟ ಮಗುವಿನ ಜೊತೆ ಟ್ರೈನ್ ನಲ್ಲಿ ಹೋಗುತ್ತಿರುವಾಗ ಮಗುವಿನ ಡೈಪರ್ ಖಾಲಿಯಾಗಿದೆ. ಡೈಪರ್ ಇಲ್ಲದೆ ಸಣ್ಣ ಮಗುವಿನ ಜೊತೆ ಪ್ರಯಾಣ ಮಾಡುವುದು ಕಷ್ಟ. ಮೊದಲಿಗೆ ಅವರಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಮುಂದಿನ ಸ್ಟೇಷನ್‌ವರೆಗೆ ಕಾಯಬುದಿತ್ತು. ಆದರಲ್ಲಿ ಡೈಪರ್ ಸಿಗುವುದೋ, ಇಲ್ಲವೋ ಗೊತ್ತಿಲ್ಲ. ಆ ಹೊತ್ತಿನಲ್ಲಿ ಈ ಪೋಷಕರ ನೆರವಿಗೆ ಬಂದಿದ್ದೇ ರೈಲ್ ಮದದ್ ಪೋರ್ಟಲ್.
ರೈಲ್ ಮದದ್ ಮೊರೆ ಹೋದ ಪ್ರಯಾಣಿಕರು :
ರೈಲ್ ಮದದ್ ಎಂದರೆ ಅದು ರೈಲ್ವೆಯ ಹೆಲ್ಪ್ ಲೈನ್. ರೈಲು ಪ್ರಯಾಣಕರ ಕುಂದು ಕೊರತೆಗಳನ್ನು ಪರಿಹರಿಸುವ ಪ್ಲಾಟ್ ಫಾರಂ. ಪ್ರಯಾಣಿಕರ (travel) ದೂರು ದುಮ್ಮಾನಗಳನ್ನು ಇಲ್ಲಿ ಶೇರ್ ಮಾಡಬಹುದು. ದೇವಿ ಪ್ರಸಾದ್ ಎನ್ನುವ ವ್ಯಕ್ತಿ ಕೂಡಾ ತಮ್ಮ ಮಗುವಿಗೆ ಡೈಪರ್ ಅಗತ್ಯವಿರುವ ಬಗ್ಗೆ ಈ ಪೋರ್ಟಲ್ ನಲ್ಲಿ ಹಾಕುತ್ತಾರೆ. ಡೈಪರ್ ಸಿಗುತ್ತದೋ ಇಲ್ಲೋ ಎನ್ನುವ ಸಣ್ಣ ಅನುಮಾನದೊಂದಿಗೆಯೇ ಅವರು ತಮ್ಮ ರಿಕ್ವೆಸ್ಟ್ ಹಾಕುತ್ತಾರೆ. ಆದರೆ ಅವರ ಸಮಸ್ಯೆಯನ್ನು ರೈಲ್ವೆ ಗಂಭೀರವಾಗಿ ತೆಗೆದುಕೊಳ್ಳುತ್ತದೆ.
ಹತ್ತೇ ನಿಮಿಷದಲ್ಲಿ ಸಮಸ್ಯೆಗೆ ಪರಿಹಾರ :
ದೇವಿಪ್ರಸಾದ್ ಸುಮಾರು 10.07 ಕ್ಕೆ ದೂರು ನೀಡಿದ್ದಾರೆ. ತಕ್ಷಣ ರೈಲ್ ಮದದ್ ತಂಡ ರೈಲಿನ ಪ್ಯಾಂಟ್ರಿ ಕಾರ್ ಮ್ಯಾನೇಜರನ್ನು ಸಂಪರ್ಕಿಸಿದೆ. ಅಂದರೆ, ದೂರು ದಾಖಲಾದ ತಕ್ಷಣ ಇಲಾಖೆ ಸಹಾಯಕ್ಕೆ ಮುಂದಾಗಿದೆ. ಅಲ್ಲದೆ ಗಯಾ ಜಂಕ್ಷನ್ ತಲುಪುವುದಕ್ಕೂ ಮೊದಲು ಮಗುವಿಗೆ ಡೈಪರ್ ಒದಗಿಸಲಾಗುವುದು ಎಂದು ತಿಳಿಸಿದೆ. ಈ ವಿಷಯವನ್ನು ಆಫ್ ಲೈನ್ ನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತಿದೆ ಎಂದು ರೈಲ್ ಮದದ್ ತಿಳಿಸಿದೆ.
ರೈಲ್ ಮದದ್ ನೀಡಿದ ಭರವಸೆಯಂತೆ ಮುಂದಿನ ಸ್ಟೇಷನಿನಲ್ಲಿ ಡೈಪರ್ ವ್ಯವಸ್ಥೆ ಮಾಡಲಾಯಿತು. ಈ ರೀತಿಯಾಗಿ, ಪ್ರಯಾಣದ ಮಧ್ಯದಲ್ಲಿ ಮಗುವಿನ ಅಗತ್ಯವನ್ನು ಪೂರೈಸಿ ತಂದೆ ತಾಯಿಯ ಸಮಸ್ಯೆ ಪರಿಹರಿಸಲಾಯಿತು. ಈ ಬಗ್ಗೆ ಮಗುವಿನ ತಂದೆ ಸೋಶಿಯಲ್ ಮೀಡಿಯಾ (social media) ಪ್ಲಾಟ್ ಫಾರಂನಲ್ಲಿ ಬರೆದುಕೊಂಡಿದ್ದಾರೆ.
ರೈಲ್ವೆಯ ಕ್ರಮಕ್ಕೆ ಮೆಚ್ಚುಗೆ :
ತಾವು ರೈಲ್ವೆ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಡೈಪರನ್ನು ಹಣ ಕೊಟ್ಟೇ ಪಡೆದಿದ್ದೇವೆ. ಅಷ್ಟಕ್ಕೂ ನಾವು ಮಗುವಿಗೆ ಡೈಪರ್ ತಂದಿದ್ದೆವು ಆದರೆ ಖಾಲಿಯಾದ ಕಾರಣ ರೈಲ್ ಮದದ್ ಸಹಾಯ ತೆಗೆದುಕೊಳ್ಳಬೇಕಾಯಿತು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ರೈಲ್ ಮದದ್ ಮತ್ತು ಪ್ಯಾಂಟ್ರಿ ಕಾರ್ ಮ್ಯಾನೇಜರ್ ಸುಮಾರು 10 ನಿಮಿಷಗಳಲ್ಲಿ ತಮ್ಮನ್ನು ಸಂಪರ್ಕಿಸಿ ಬೇಡಿಕೆ ಪೂರೈಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ರೈಲ್ವೆ ನಿಜಕ್ಕೂ ಬದಲಾಗುತ್ತಿದೆ. ಪ್ರಯಾಣಿಕರ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ಪರಿಹರಿಸಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರೈಲ್ವೆಯ ಇಂಥಹ ಕ್ರಮ ಅಗತ್ಯವಿರುವ ಸಮಯದಲ್ಲಿ ಅದರಲ್ಲೂ ಚಿಕ್ಕ ಮಗುವಿನ ಜೊತೆ ಪ್ರಯಾಣಿಸುವ ಹೆತ್ತವರಿಗೆ ಪರಿಹಾರವಾಗಬಲ್ಲದು.
This is what transformation looks like. 🇮🇳Ran out of small-size diapers for my 6-month-old baby. Raised a RailMadad complaint at 10:07 AM.Within 10 minutes, RailMadad and the Pantry Car Manager called. At the next stoppage, the diapers were arranged.From digital grievance redressal to faster, accountable passenger services, this is a very different railway experience.Complaint → Response → Solution.A glimpse of the changes seen in the Modi government era. 🇮🇳👏@RailwaySeva @RailMinIndia#IndianRailways #RailMadad
— Debiprasad (@AskLipun) October 7, 2026


Click it and Unblock the Notifications
