ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಖಾಸಗಿ ಕಂಪನಿಗಳಿಗೆ ಲಾಭ ಕೊಡುವುದು ಹೇಗೆ ರಷ್ಯಾದ ಕಚ್ಚಾತೈಲ!?

|
Google Oneindia Kannada News

ನವದೆಹಲಿ, ಜೂನ್ 1: ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವ ವಿಚಾರದಲ್ಲಿ ಭಾರತದ ಖಾಸಗಿ ಶುದ್ಧೀಕರಣ ಕಂಪನಿಗಳು ಒಡೆದ ಮನೆಗಳಂತೆ ಆಗಿವೆ. ಕೆಲವು ಕಂಪನಿಗಳು ರಷ್ಯಾದ ಕಚ್ಚಾತೈಲವನ್ನು ಖರೀದಿಸುವುದರಿಂದ ದೂರ ಉಳಿದಿವೆ. ಆದರೆ ಇನ್ನೂ ಕೆಲವು ಖಾಸಗಿ ಕಂಪನಿಗಳು ಅದೇ ರಷ್ಯಾದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿವೆ.

ರಾಜ್ಯಗಳ ಮಟ್ಟಿಗೆ ಕೇಂದ್ರೀಕೃತವಾಗಿರುವ ಖಾಸಗಿ ಶುದ್ಧೀಕರಣ ಕಂಪನಿಗಳು ಲಾಭದ ಕಡೆಗೆ ಮುಖ ಮಾಡುತ್ತಿವೆ. ರಷ್ಯಾದ ಕಚ್ಚಾತೈಲ ಖರೀದಿಸುವ ಮೂಲಕ ಹೆಚ್ಚು ಹೆಚ್ಚು ಲಾಭ ಗಳಿಕೆಗೆ ಲಕ್ಷ್ಯ ವಹಿಸುತ್ತಿವೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಇಂಧನವನ್ನು ಖರೀದಿಸಬಾರದು ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿಕೊಂಡಿವೆ.

Petrol Pump Strike : ಮೇ 31ರಂದು ತೈಲ ಕಂಪನಿಗಳಿಂದ ಪೆಟ್ರೋಲ್-ಡೀಸೆಲ್ ಖರೀದಿಸುವುದಿಲ್ಲ ಡೀಲರ್ಸ್Petrol Pump Strike : ಮೇ 31ರಂದು ತೈಲ ಕಂಪನಿಗಳಿಂದ ಪೆಟ್ರೋಲ್-ಡೀಸೆಲ್ ಖರೀದಿಸುವುದಿಲ್ಲ ಡೀಲರ್ಸ್

ಈ ಹಂತದಲ್ಲಿ ರಷ್ಯಾದ ಕಚ್ಚಾತೈಲವು ಕಡಿಮೆ ಬೆಲೆಗೆ ಸಿಗುತ್ತಿದ್ದು, ಅದನ್ನೇ ಖರೀದಿಸುವ ಮೂಲಕ ಲಾಭವನ್ನು ಗಳಿಸಿಕೊಳ್ಳಲು ಭಾರತದ ಖಾಸಗಿ ಕಂಪನಿಗಳು ಆಲೋಚಿಸುತ್ತಿವೆ. ದೇಶದಲ್ಲಿನ ಇಂಧನ ಶುದ್ಧೀಕರಣ ಕಂಪನಿಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಹೇಗಿದೆ?, ರಷ್ಯಾದ ಕಚ್ಚಾತೈಲವನ್ನು ಖರೀದಿಸುವುದರಿಂದ ಇಲ್ಲಿನ ಕಂಪನಿಗಳಿಗೆ ಅದು ಹೇಗೆ ಲಾಭದಾಯಕವಾಗಿದೆ?, ಜಾಗತಿಕ ಮಟ್ಟದಲ್ಲಿ ರಷ್ಯಾದ ಕಚ್ಚಾತೈಲಕ್ಕೆ ಬೇಡಿಕೆ ಕುಗ್ಗುತ್ತಿದೆಯಾ?, ಭಾರತದಲ್ಲಿ ಶುದ್ಧೀಕರಿಸಿದ ಇಂಧನವನ್ನು ಇಲ್ಲಿ ಮಾರುವುದಕ್ಕಿಂತ ವಿದೇಶಕ್ಕೆ ರಫ್ತು ಮಾಡಿದರೆ ಹೆಚ್ಚು ಲಾಭ ಸಿಗುತ್ತಿರುವುದು ಏಕೆ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಭಾರತದಲ್ಲಿ ರಷ್ಯಾದ ರಿಯಾಯಿತಿ ಕಚ್ಚಾತೈಲಕ್ಕೆ ಸಖತ್ ಡಿಮ್ಯಾಂಡ್

ಭಾರತದಲ್ಲಿ ರಷ್ಯಾದ ರಿಯಾಯಿತಿ ಕಚ್ಚಾತೈಲಕ್ಕೆ ಸಖತ್ ಡಿಮ್ಯಾಂಡ್

ಉಕ್ರೇನ್‌ನ ಮೇಲೆ ರಷ್ಯಾ ಯುದ್ಧವನ್ನು ನಡೆಯುತ್ತಿರುವುದಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಅನೇಕ ಪಾಶ್ಚಿಮಾತ್ಯ ರಾಷ್ಟ್ರದ ಖರೀದಿದಾರರು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ನಿರ್ಬಂಧ ಹೇರಿಕೊಂಡಿವೆ. ಹೀಗಾಗಿಯೇ ರಷ್ಯಾ ರಿಯಾಯಿತಿ ದರದಲ್ಲಿ ಕಚ್ಚಾತೈಲವನ್ನು ಮಾರಾಟ ಮಾಡುವುದಕ್ಕೆ ಶುರು ಮಾಡಿದೆ. ಭಾರತದ ರಿಲಯನ್ಸ್ ಮತ್ತು ನಯಾರಾ ರೀತಿಯ ಖಾಸಗಿ ಶುದ್ಧೀಕರಣ ಕಂಪನಿಗಳು ಈ ರಿಯಾಯಿತಿ ದರದ ಕಚ್ಚಾತೈಲವನ್ನು ಅತಿಹೆಚ್ಚು ಪ್ರಮಾಣದಲ್ಲಿ ಖರೀದಿಸಿದ ಕಂಪನಿಗಳಾಗಿವೆ.

ದೇಶದಲ್ಲಿ ಶುದ್ಧೀಕರಿಸುವ ಅತಿಹೆಚ್ಚು ಇಂಧನ ವಿದೇಶಕ್ಕೆ ರಫ್ತು

ದೇಶದಲ್ಲಿ ಶುದ್ಧೀಕರಿಸುವ ಅತಿಹೆಚ್ಚು ಇಂಧನ ವಿದೇಶಕ್ಕೆ ರಫ್ತು

ಭಾರತದಲ್ಲಿ ಶುದ್ಧೀಕರಿಸುವ ಇಂಧನವನ್ನು ದೇಶೀಯವಾಗಿ ಮಾರಾಟ ಮಾಡುವುದರ ಬದಲು ವಿದೇಶಗಳಿಗೆ ಹೆಚ್ಚು ಹೆಚ್ಚಾಗಿ ರಫ್ತು ಮಾಡಲಾಗುತ್ತಿದೆ. ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿದ ರಾಷ್ಟ್ರಗಳಿಗೆ ಇಂಧನವನ್ನು ರಫ್ತು ಮಾಡುತ್ತಿವೆ. ಆ ಮೂಲಕ ದೇಶೀಯವಾಗಿ ಪಡೆಯುವುದಕ್ಕಿಂತ ಹೆಚ್ಚು ಲಾಭಗಳಿಕೆಯ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯದ ಶುದ್ಧೀಕರಣ ಕಂಪನಿಗಳು ವಾರ್ಷಿಕ ಅವಧಿಯ ಲೆಕ್ಕಾಚಾರದಲ್ಲಿ ಸಣ್ಣ ಖರೀದಿದಾರರು ರಷ್ಯಾದ ಕಚ್ಚಾತೈಲವನ್ನು ಖರೀದಿ ಮಾಡುತ್ತಾರೆ. ಅವರು ಜೂನ್ ತ್ರೈಮಾಸಿಕದಲ್ಲಿ ಸಂಭಾವ್ಯ ನಷ್ಟವನ್ನು ಎದುರಿಸುತ್ತಾರೆ ಎಂದು ಉದ್ಯಮದ ಮೂಲಗಳು ಹೇಳುತ್ತವೆ. ಏಕೆಂದರೆ ಜಾಗತಿಕ ಕಚ್ಚಾತೈಲದ ವೆಚ್ಚಗಳು ಮತ್ತು ನಿಯಂತ್ರಿತ ಚಿಲ್ಲರೆ ಇಂಧನ ಬೆಲೆಗಳು ಏಪ್ರಿಲ್ ಆರಂಭದಿಂದ ಬದಲಾಗದೆ ಹಣದುಬ್ಬರ ನಿಯಂತ್ರಿಸಲಾಗುತ್ತಿದೆ.

ಅತಿಹೆಚ್ಚು ಕಚ್ಚಾತೈಲ ಆಮದು ಮಾಡಿಕೊಂಡ ಭಾರತ

ಅತಿಹೆಚ್ಚು ಕಚ್ಚಾತೈಲ ಆಮದು ಮಾಡಿಕೊಂಡ ಭಾರತ

ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ಸಾರಿದ ನಂತರ, ಅಂದಿನಿಂದ ಈವರೆಗೂ ಭಾರತದ ಶುದ್ಧೀಕರಣ ಕಂಪನಿಗಳು ಒಟ್ಟು 62.5 ದಶಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿವೆ. ಕಳೆದ 2021ರ ಫೆಬ್ರವರಿ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಆಮದು ಮಾಡಿಕೊಂಡ ಕಚ್ಚಾತೈಲಕ್ಕೆ ಹೋಲಿಸಿದರೆ, ಈ ವರ್ಷ ರಷ್ಯಾದಿಂದ ಬರೋಬ್ಬರಿ ಮೂರುಪಟ್ಟು ಕಚ್ಚಾತೈಲದ ಆಮದು ಹೆಚ್ಚಾಗಿದೆ. ಇದರಲ್ಲಿ ರಿಲಾಯನ್ಸ್ ಇಂಡಸ್ಟ್ರಿ ಮತ್ತು ನಯಾರಾ ಎನರ್ಜಿ ಕಂಪನಿಗಳ ಪಾಲು ಅರ್ಧಕ್ಕಿಂತ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ, 2021ರ ಇದೇ ಅವಧಿಗೆ ಹೋಲಿಸಿದರೆ 2022ರ ಮೊದಲ ಐದು ತಿಂಗಳಲ್ಲಿ ಒಟ್ಟು ಭಾರತೀಯ ಇಂಧನ ರಫ್ತುಗಳ ಪ್ರಮಾಣವು ಶೇಕಡಾ 15ರಷ್ಟು ಹೆಚ್ಚಿಸಲು ಖಾಸಗಿ ಸಂಸ್ಕರಣಾಗಾರರು ಸಹಾಯ ಮಾಡಿದ್ದಾರೆ ಎಂದು ಡೇಟಾ ಸಂಸ್ಥೆ Kpler ತಿಳಿಸಿದೆ.

ಶುದ್ಧೀಕರಿಸಿದ ಬಹುಪಾಲು ಇಂಧನ ವಿದೇಶಕ್ಕೆ ರಫ್ತು

ಶುದ್ಧೀಕರಿಸಿದ ಬಹುಪಾಲು ಇಂಧನ ವಿದೇಶಕ್ಕೆ ರಫ್ತು

ಖಾಸಗಿ ಇಂಧನ ಸಂಸ್ಕರಣಾಗಾರ ಕಂಪನಿಗಳು ತಮ್ಮ ದೇಶೀಯ ಇಂಧನ ಮಾರಾಟವನ್ನು ತಗ್ಗಿಸಿವೆ. ದೇಶೀ ಮಾರುಕಟ್ಟೆಯಲ್ಲಿ 2022ರ ಮಾರ್ಚ್ ತಿಂಗಳಿನಲ್ಲಿ ಶೇ.10ರಷ್ಟಿದ್ದ ಇಂಧನ ಮಾರಾಟದ ಪಾಲನ್ನು ಏಪ್ರಿಲ್ ತಿಂಗಳಿನಲ್ಲಿ ಶೇ.7ಕ್ಕೆ ಇಳಿಸಲಾಗಿದೆ. ರಾಜ್ಯ ಸಂಸ್ಕರಣಾಗಾರಗಳು ದೇಶೀಯ ಮಾರಾಟವನ್ನು ಹೆಚ್ಚಿಸಬೇಕಾಗಿದೆ, ಆದರೆ ಡೀಸೆಲ್ ಮಾರಾಟದಿಂದ ಲೀಟರ್‌ಗೆ 20 ರೂಪಾಯಿ ಮತ್ತು ಪೆಟ್ರೋಲ್ ಮೇಲೆ 17 ರೂಪಾಯಿಗಿಂತ ಹೆಚ್ಚು ನಷ್ಟವನ್ನು ಅನುಭವಿಸುತ್ತಿವೆ ಎಂದು ರಾಜ್ಯ ಸಂಸ್ಕರಣಾಗಾರ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಇದು ಶುದ್ಧೀಕರಣ ಕಂಪನಿಗಳ ಲಾಭದ ಪಾಲನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇರುವ ಸುವರ್ಣಯುಗವಾಗಿದೆ. ಆದರೆ ಭಾರತದ ರಾಜ್ಯ ಶುದ್ಧೀಕರಣ ಕಂಪನಿಗಳ ಮಾರುಕಟ್ಟೆಯ ಮೌಲ್ಯ ಋಣಾತ್ಮಕವಾಗಿದ್ದರೂ, ಸಂಸ್ಕರಣಾ ವ್ಯವಹಾರದಿಂದ ಲಾಭವನ್ನು ಸರಿದೂಗಿಸುತ್ತಿವೆ," ಎಂದು ರಿಫಿನಿಟಿವ್‌ನ ವಿಶ್ಲೇಷಕ ಎಹ್ಸಾನ್ ಉಲ್ ಹಕ್ ಹೇಳಿದ್ದಾರೆ. "ಭಾರತೀಯ ಮಾರುಕಟ್ಟೆಯಲ್ಲಿ ನಾವು ಹೆಚ್ಚು ಮಾರಾಟ ಮಾಡುವುದರಿಂದ ನಾವು ಹೆಚ್ಚು ಕಳೆದುಕೊಳ್ಳುತ್ತೇವೆ," ಎಂದು ಎರಡನೇ ಮೂಲವು ಹೇಳಿದೆ.

ವಿದೇಶಗಳಿಗೆ ಅತಿಹೆಚ್ಚು ಇಂಧನ ರಫ್ತು ಮಾಡುತ್ತಿರುವ ರಿಲಾಯನ್ಸ್

ವಿದೇಶಗಳಿಗೆ ಅತಿಹೆಚ್ಚು ಇಂಧನ ರಫ್ತು ಮಾಡುತ್ತಿರುವ ರಿಲಾಯನ್ಸ್

ಜಾಮ್‌ನಗರದಲ್ಲಿರುವ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣದ ನಿರ್ವಾಹಕ ಸಂಸ್ಥೆ ಆಗಿರುವ ರಿಲಯನ್ಸ್ ಇತ್ತೀಚೆಗೆ ತನ್ನ ಸಂಸ್ಕರಣಾಗಾರ ನಿರ್ವಹಣಾ ಯೋಜನೆಯನ್ನು ಮುಂದೂಡಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ "ಆರ್ಬಿಟ್ರೇಜ್" ಬ್ಯಾರೆಲ್‌ಗಳನ್ನು ಖರೀದಿಸಿದ್ದು, ಇಂಧನದ ರಫ್ತುಗಳನ್ನು ಹೆಚ್ಚಿಸಿರುವುದಾಗಿ ಕಳೆದ ತಿಂಗಳೇ ಹೇಳಿದೆ.

"RIL ಅದರ ಹೆಚ್ಚಿನ ಸಂಕೀರ್ಣತೆ, ಹೆಚ್ಚಿನ ಡೀಸೆಲ್ ಇಳುವರಿ ಮತ್ತು ಹೆಚ್ಚಿನ ರಫ್ತು ಅನುಪಾತವನ್ನು ನೀಡುವ ಮೂಲಕ ಶುದ್ಧೀಕರಣದ ಪ್ರಮಾಣದಲ್ಲಿ ನಡೆಯುತ್ತಿರುವ ಉಲ್ಬಣದಿಂದ ಲಾಭ ಪಡೆಯಲು ಉತ್ತಮ ಸ್ಥಾನದಲ್ಲಿದೆ," ಎಂದು ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಖಾಸಗಿ ಶುದ್ಧೀಕರಣ ಕಂಪನಿಯು ತಮ್ಮ ರಾಜ್ಯದ ಇತರೆ ಕಂಪನಿಗಳಿಗೆ ಹೋಲಿಸಿದರೆ ಹೆಚ್ಚಿನ ದರದಲ್ಲಿ ತಮ್ಮ ಇಂಧನಗಳಿಗೆ ಬೆಲೆ ನಿಗದಿಪಡಿಸಿದ್ದಾರೆ. ತಮ್ಮ ಪಂಪ್‌ಗಳಿಗೆ ಪೂರೈಕೆಯನ್ನು ಕಡಿಮೆ ಮಾಡಿದ್ದಾರೆ ಎಂದು ರಿಲಯನ್ಸ್ ಮತ್ತು ನಯಾರಾ ಎನರ್ಜಿಯ ಹಲವಾರು ಡೀಲರ್‌ಗಳು ಹೇಳಿದ್ದಾರೆ. ಇದು ಗ್ರಾಹಕರು ರಾಜ್ಯದ ಚಿಲ್ಲರೆ ವ್ಯಾಪಾರಿಗಳ ಇಂಧನ ಕೇಂದ್ರಗಳತ್ತ ಮುಖ ಮಾಡುವಂತೆ ಮಾಡಿದೆ.

"ನಾವು ರಷ್ಯಾದ ತೈಲವನ್ನು ಸಂಸ್ಕರಿಸುವ ಮೂಲಕ ಪ್ರತಿ ಬ್ಯಾರೆಲ್‌ಗೆ 30 ಡಾಲರ್ ಗಿಂತ ಹೆಚ್ಚು ಸಂಸ್ಕರಣೆಯನ್ನು ಮಾಡುತ್ತಿದ್ದೇವೆ. ಹೀಗೆ ಸಂಸ್ಕರಿಸಿದ ಇಂಧನದ ರಫ್ತಿನ ಮೂಲಕ ಭಾರಿ ಲಾಭವನ್ನು ಗಳಿಸುತ್ತಿದ್ದೇವೆ," ಎಂದು ಖಾಸಗಿ ಸಂಸ್ಕರಣಾಗಾರವೊಂದರಲ್ಲಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Indian private refiners tap cheap Russian crude and boost profits from exports just as domestically focused state refiners get squeezed by high oil costs and government-capped domestic fuel prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X