ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

130 ಬಿಲಿಯನ್ ನಿರೀಕ್ಷೆ; ಭಾರತದ ಭವಿಷ್ಯ ಬದಲಿಸುತ್ತಾ ಕೊರೊನಾ ಲಸಿಕೆ?

|
Google Oneindia Kannada News

ನವದೆಹಲಿ, ಫೆಬ್ರವರಿ.09: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಔಷಧಿ ಸರಬರಾಜು ಮಾಡುವಲ್ಲಿ ಭಾರತವು ಹೊಸ ಭರವಸೆಯನ್ನು ಮೂಡಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಭಾರತೀಯ ಔಷಧಿ ಮತ್ತು ವೈದ್ಯಕೀಯ ಸಾಧನ -2021ನೇ ಆವೃತ್ತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾಂಕ್ರಾಮಿಕ ಪಿಡುಗು ಜಗತ್ತನ್ನು ಬಾಧಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಔಷಧೀಯ ಉದ್ಯಮವು ಸೂಕ್ತ ಸಮಯದಲ್ಲಿ ಅಗತ್ಯ ಔಷಧೀಯ ಸಾಧನಗಳ ಪೂರೈಕೆದಾರನಾಗಿ ತನ್ನ ಸಾಮರ್ಥ್ಯವನ್ನು ತೋರಿದೆ.

ಕೊರೊನಾವೈರಸ್ ಲಸಿಕೆ ವಿತರಿಸುವಲ್ಲಿ ಭಾರತಕ್ಕೆ ಅಗ್ರಸ್ಥಾನಕೊರೊನಾವೈರಸ್ ಲಸಿಕೆ ವಿತರಿಸುವಲ್ಲಿ ಭಾರತಕ್ಕೆ ಅಗ್ರಸ್ಥಾನ

2030ರ ವೇಳೆ ಭಾರತೀಯ ಔಷಧೀಯ ಉದ್ಯಮವು 9.10 ಲಕ್ಷ ಕೋಟಿ (130 ಬಿಲಿಯನ್ ಡಾಲರ್) ವಹಿವಾಟು ನಡೆಸುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಭಾರತದಿಂದ 200 ರಾಷ್ಟ್ರಗಳಿಗೆ ಔಷಧೀಯ ಉತ್ಪನ್ನ

ಭಾರತದಿಂದ 200 ರಾಷ್ಟ್ರಗಳಿಗೆ ಔಷಧೀಯ ಉತ್ಪನ್ನ

ವೈದ್ಯಕೀಯ ಸಾಧನಗಳ ವಹಿವಾಟಿನಲ್ಲಿ 2025ರ ವೇಳೆಗೆ 3,500 ಕೋಟಿ(50 ಬಿಲಿಯನ್ ಡಾಲರ್) ಹೆಚ್ಚಳವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಭಾರತದ ಔಷಧೀಯ ಉತ್ಪನ್ನಗಳನ್ನು 200 ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ವ್ಯವಹಾರ ಪ್ರಜ್ಞೆ ಮತ್ತು ನೈತಿಕತೆ ಆಧರದಲ್ಲಿ ಯೋಜನೆ ರೂಪಿಸುವುದನ್ನು ಮುಂದುವರಿಸಲಾಗುತ್ತದೆ ಎಂದು ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಔಷಧೀಯ ಉದ್ಯಮದ ಮೇಲೆ ವಿದೇಶಿ ಬಂಡವಾಳ

ಔಷಧೀಯ ಉದ್ಯಮದ ಮೇಲೆ ವಿದೇಶಿ ಬಂಡವಾಳ

ಭಾರತದ ಔಷಧೀಯ ಉದ್ಯಮವು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯುವ ಟಾಪ್-10 ಕ್ಷೇತ್ರಗಳಲ್ಲಿ ಒಂದಾಗಿದೆ. 2019-20ನೇ ಸಾಲಿನಲ್ಲಿ ಔಷಧೀಯ ಉದ್ಯಮ ವಲಯಕ್ಕೆ 3650 ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿದೆ. ವರ್ಷದಿಂದ ವರ್ಷಕ್ಕೆ ಶೇ.98ರಷ್ಟು ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

ಭಾರತವನ್ನು ನಾಯಕತ್ವ ಸ್ಥಾನದಲ್ಲಿ ಕೂರಿಸುವ ಗುರಿ

ಭಾರತವನ್ನು ನಾಯಕತ್ವ ಸ್ಥಾನದಲ್ಲಿ ಕೂರಿಸುವ ಗುರಿ

ಜಗತ್ತಿನಾದ್ಯಂತ ಔಷಧೀಯ ಉದ್ಯಮ ಮತ್ತು ಉತ್ತಮ ಗುಣಮಟ್ಟದ ಜೆನಿರಿಕ್ ಔಷಧಿ ಹಾಗೂ ವೈದ್ಯಕೀಯ ಸಾಧನಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಭಾರತವು ಅಗ್ರಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು. ವಿಶ್ವದ ಎದುರಿನಲ್ಲಿ ಭಾರತವನ್ನು ನಾಯಕತ್ವ ಸ್ಥಾನದಲ್ಲಿ ಕೂರಿಸುವ ಗುರಿಯನ್ನು ಹೊಂದಲಾಗಿದೆ. ಈ ವರ್ಷದ ಆವೃತ್ತಿಯಲ್ಲಿ, "ಹೊಸ ಮತ್ತು ಕೈಗೆಟುಕುವ ದರದಲ್ಲಿ ಚಿಕಿತ್ಸೆ ಪೆಡಯಲು ಅಗತ್ಯವಿರುವ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ವಿಶ್ವಮಟ್ಟದಲ್ಲಿ ಭಾರತವನ್ನು ಹೂಡಿಕೆಯ ಅನುಕೂಲಕರ ತಾಣವನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಭಾರತದಿಂದ ಜಗತ್ತಿನ 12 ರಾಷ್ಟ್ರಗಳಿಗೆ ಲಸಿಕೆ

ಭಾರತದಿಂದ ಜಗತ್ತಿನ 12 ರಾಷ್ಟ್ರಗಳಿಗೆ ಲಸಿಕೆ

ದೇಶದಲ್ಲಿ ಕ್ಷಿಪ್ರಗತಿಯ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಸಂಶೋಧಿಸಿರುವ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಲಾಗುತ್ತಿರುವ ಕೊವಿಶೀಲ್ಡ್ ಲಸಿಕೆ ಮತ್ತು ಭಾರತ್ ಬಯೋಟೆಕ್ ನಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಯನ್ನು ವಿದೇಶಗಳಿಗೆ ರವಾನೆ ಮಾಡಲಾಗುತ್ತಿದೆ. ಈವರೆಗೂ 12 ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆಯನ್ನು ರಫ್ತು ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

English summary
Indian Pharma Market Expected To Hit $130 Billion By 2030, Said Minister Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X