ಮೇಘಾಲಯದ ನಿಗೂಢ ಗಣಿಯಲ್ಲಿ ಕೊನೆಗೂ ಪತ್ತೆಯಾದ ಶವ!
ಶಿಲ್ಲಾಂಗ್, ಜನವರಿ 17: ಮೇಘಾಲಯದ ಗಣಿಯೊಂದರಲ್ಲಿ 15 ಕಾರ್ಮಿಕರು ಸಿಲುಕಿಕೊಂಡ ಪ್ರಕರಣದಲ್ಲಿ ಕೊನೆಗೂ ಓರ್ವ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.
ಕಳೆದ ಒಂದುತಿಂಗಳಿನಿಂದ ಶೋಧ ಕಾರ್ಯ ನಡೆಯುತ್ತಿತ್ತಾದರೂ ಇದುವರೆಗೂ ಕಾರ್ಮಿಕರು ಜೀವಂತವಾಗಿಯೂ ಪತ್ತೆಯಾಗಿರಲಿಲ್ಲ, ಶವವೂ ಪತ್ತೆಯಾಗಿರಲಿಲ್ಲ. ರಕ್ಷಣಾ ಕಾರ್ಯವೇ ಸರಿಯಾಗಿ ನಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಛಿಮಾರಿ ಹಾಕಿತ್ತು. ಆದರೆ ಇದೀಗ ಓರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಉಳಿದ ಕಾರ್ಮಿಕರ ಶವವೂ ಹತ್ತಿರದಲ್ಲೇ ಸಿಕ್ಕಬಹುದು ಎಂದು ಅಂದಾಜಿಸಲಾಗಿದೆ.

ಭಾರತೀಯ ನೌಕಾದಳವು ಅತ್ಯಾಧುನಿಕ ತಂತ್ರಜ್ಞಾನದ ROV(remotely operated underwater vehicle) ಬಳಸುವ ಮೂಲಕ ಗಣಿಯಾಳದ ನೀರಿನಲ್ಲಿ ಓರ್ವ ಕಾರ್ಮಿಕ ಶವ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
#WATCH: Search operations underway in a mine at Ksan near Lyteiñ River in East Jaintia Hills for miners who are trapped since December 13. Today morning one body was recovered. (Visuals of Navy's underwater remotely operated vehicle) #Meghalaya. pic.twitter.com/gg1NwtjFOY
— ANI (@ANI) January 17, 2019
ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಡಿ.12 ರಂದು 15 ಕಾರ್ಮಿಕರು ಗಣಿಯೊಳಗೆ ಸಿಲುಕಿ ನಂತರ ನಾಪತ್ತೆಯಾಗಿದ್ದರು. ಅಂದಿನಿಂದಲೂ ಅವರ ಶೋಧ ಕಾರ್ಯು ನಡೆಯುತ್ತಿದ್ದು ಗಣಿಯ ನಕ್ಷೆಯೇ ಇಲ್ಲದ ಕಾರಣ, ಕಾರಿಕರು ಎಲ್ಲಿ ಸಿಲುಕಿರಬಹುದು ಮತ್ತು ಎಷ್ಟು ಆಳದಲ್ಲಿರಬಹುದು ಎಂಬ ಮಾಹಿತಿ ಲಭ್ಯವಾಗಿರಲಿಲ್ಲ.
ಮೇಘಾಲಯದಲ್ಲಿ ಇಲಿಯ ಬಿಲದಂಥ ಈ ಗಣಿಗಳು ಸರ್ವೇಸಾಮಾನ್ಯವಾಗಿದ್ದು, ಇದನ್ನು ಸ್ಥಳೀಯರೇ ಅಗೆದು ಮಾಡಿರುವುದರಿಂದ ಸಾಕಷ್ಟು ಅಪಾಯಕಾರಿಯೂ ಆಗಿದೆ.












Click it and Unblock the Notifications