ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾ ಸೇನೆ ಸೇರಿದ 'ಭೀಮ' ಬಲದ ವಿಶೇಷಗಳೇನು?

By ಒನ್ಇಂಡಿಯಾ ಸ್ಟಾಫ್
|
Google Oneindia Kannada News

ಮುಂಬೈ, ಏ. 20: ಭಾರತದ ನೌಕಾಸೇನೆ ಮತ್ತೊಂದು ಮಹಾ ಸಾಧನೆ ಮಾಡಿದೆ. ಪರಮಾಣು, ಜೈವಿಕ ಹಾಗೂ ರಾಸಾಯನಿಕ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬಲ್ಲ ಭಾರತದ ಅತಿದೊಡ್ಡ ಸಮರ ನೌಕೆ ಐಎನ್ಎಸ್ ವಿಶಾಖಪಟ್ಟಣದಲ್ಲಿ ಸೋಮವಾರ ಸೇನೆಯನ್ನು ಸೇರಿಕೊಂಡಿತು.

ನೌಕಾ ಸೇನೆಯ ಅಡ್ಮಿರಲ್ ಆರ್ ಕೆ ಧವನ್ ಮತ್ತು ಸೇನೆಯ ಪ್ರಮುಖ ಅಧಿಕಾರಿಗಳು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[ಭಾರತೀಯ ನೌಕಾ ಸೇನೆಗೆ 'ಸ್ಕಾರ್ಪಿಯನ್' ಶಕ್ತಿ]

navy

ಸದ್ಯ ಇದಕ್ಕೆ ಐಎನ್ ಎಸ್ ವಿಶಾಖಪಟ್ಟಣ ಎಂದು ನಾಮಕರಣ ಮಾಡಲಾಗಿದ್ದು, 2018 ರ ನಂತರ ಅಧಿಕೃತ ಹೆಸರು ನೀಡಲಾಗುವುದು.

ಬೃಹತ್ ನೌಕೆಯ ಸಾಮರ್ಥ್ಯವೇನು?
* ಸುಮಾರು 29.600 ಕೋಟಿ ವೆಚ್ಚದಲ್ಲಿ ಈ ಬೃಹತ್ ಸಮರನೌಕೆಯನ್ನು ನಿರ್ಮಿಸಲಾಗಿದ್ದು, ಪ್ರಸ್ತುತ ಭಾರತದಲ್ಲಿರುವ ಸಮರ ನೌಕೆಗಳಲ್ಲೇ ಇದು ಅತಿ ದೊಡ್ಡ ಸಮರ ನೌಕೆ.[ನೌಕಾ ಸೇನೆ ಸೇರಿದ ಯುವತಿಯರು ಹೇಳಿದ್ದೇನು?]
* 7,300 ಟನ್ ತೂಕವಿರುವ ಐಎನ್ಎಸ್ ವಿಶಾಖಪಟ್ಟಣ ಸಮರ ನೌಕೆಯನ್ನು ಮುಂಬೈನ ಡಾಕ್ ಯಾರ್ಡ್ ನಲ್ಲಿ ನಿರ್ಮಾಣ ಮಾಡಲಾಗಿದೆ.

navy 1

* ಅತಿದೊಡ್ಡ ಗನ್ ವ್ಯವಸ್ಥೆ(127), ನೌಕೆಗೆ ಇಸ್ರೇಲಿ ಬಹುವಿಧ ಸರ್ವೇಕ್ಷಣಾ ಮತ್ತು ಅಪಾಯ ಎಚ್ಚರಿಕೆ ವ್ಯವಸ್ಥೆ ಇರುವ ರಾಡಾರ್ ಇದರ ವಿಶೇಷ.
* ಅತ್ಯಾಧುನಿಕ ಎಕೆ 630 ಕ್ಷಿಪಣಿ ನಿರೋಧಕ ಗನ್ ವ್ಯವಸ್ಥೆ ಹೊಂದಿರುವ ನೌಕೆ 2018 ರಲ್ಲಿ ಅಧಿಕೃತ ಕೆಲಸ ಆಂರಂಭಿಸಲಿದೆ.
navy 2

ರಕ್ಷಣಾ ಸಚಿವರು ಏನು ಹೇಳಿದರು?
ಎನ್ ಡಿಎ ಸರ್ಕಾರದ ಪ್ರಮುಖ ಆಶಯ ರಕ್ಷಣಾ ವ್ಯವಸ್ಥೆಯನ್ನು ಭದ್ರ ಮಾಡುವುದು. ಉಳಿದಿರುವ ಕೆಲಸವನ್ನು ಶೀಘ್ರವೇ ಮುಗಿಸಿ ರಕ್ಷಣಾ ಕ್ಷೇತ್ರವನ್ನು ಶಕ್ತಿಶಾಲಿ ಮಾಡಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದರು.

ನೌಕೆ ಹೇಗಿದೆ? ವಿಡಿಯೋ ನೋಡಿ

English summary
Indian Navy achieved yet another milestone on Monday, April 20 when the first of P15-B stealth destroyers Visakhapatnam was put to sea from Mazagaon Docks Limited (MDL) in Mumbai. Chief of Naval Staff Admiral R K Dhowan and a host of senior naval officials were present during the occasion. The majestic ceremony saw Visakhapatnam being launched from Slip Way No 2 of MDL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X