• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಮೋದಿಗೆ ಹೊಡೆಯುತ್ತೀರಾ, ನನಗೆ ಭಾರತೀಯ ತಾಯಂದಿರ ಆಶೀರ್ವಾದವಿದೆ"

|
   MTB ನಾಗರಾಜ್ ಗೆ ಮತ್ತೆ ತಲೆನೋವು ತಂದಿಟ್ಟ ಶಾಸಕ | BJP | MLA | Karnataka

   ದೀಸ್ ಪುರ್, ಫೆಬ್ರವರಿ.07: ಕೇಂದ್ರ ಸರ್ಕಾರದ ಕಾನೂನುಗಳಿಂದ ಕೆರಳಿದ ದೆಹಲಿಯ ಯುವಕರು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಹೊಡೆಯಲು ದಂಡ ಹಿಡಿದು ನಿಲ್ಲುತ್ತಾರೆ ಎಂದ ಎಐಸಿಸಿ ಮಾಜಿ ಅಧ್ಯಕ್ಷ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

   ಬೋಡೋ ಒಪ್ಪಂದಕ್ಕೆ ಸಹಿ ಹಾಕಿದ ಒಂದೇ ವಾರದಲ್ಲಿ ಅಸ್ಸಾಂನ ಕಕ್ರೋಜ್ ಹಾರ್ ಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅಸ್ಸಾಂ ಜನತೆಯ ಅಭಿವೃದ್ಧಿ ಮತ್ತು ಸುಭದ್ರತೆಗೆ ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಹೇಳಿದರು.

   ಬೋಡೋ ದಂಗೆಕೋರರಿಗೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

   ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಅಸ್ಸಾಂನಲ್ಲಿ ಶಾಂತಿ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೋಡೋ ಸಂಘಟನೆಗಳ ಜೊತೆಗೆ ಕಳೆದ ಜನವರಿ.27ರಂದು ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.

   ದಂಡಕ್ಕೆ ಹೆದರುವುದಿಲ್ಲ ಎಂದ ಪ್ರಧಾನಿ ಮೋದಿ

   ದಂಡಕ್ಕೆ ಹೆದರುವುದಿಲ್ಲ ಎಂದ ಪ್ರಧಾನಿ ಮೋದಿ

   ದಂಡ ಹಿಡಿದು ಬರುವ ಜನರಿಗೆ ನಾನು ಹೆದರುವುದಿಲ್ಲ ಎನ್ನುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದರು. ನನ್ನ ಮೇಲೆ ಭಾರತದ ಕೋಟ್ಯಂತರ ತಾಯಂದಿರ ಆಶೀರ್ವಾದವಿದೆ. ಹೀಗಿರುವಾಗ ದಂಡಕ್ಕೆ ಭಯಪಡುವ ಅಗತ್ಯ ನನಗಿಲ್ಲ ಎಂದು ಮೋದಿ ಮಾತಿನ ಪಟ್ಟು ಕೊಟ್ಟರು.

   ಮೋದಿಗೆ ಹೊಡೆಯುವ ಬಗ್ಗೆ ರಾಹುಲ್ ಮಾತು

   ಮೋದಿಗೆ ಹೊಡೆಯುವ ಬಗ್ಗೆ ರಾಹುಲ್ ಮಾತು

   ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಯೋಜನೆಗಳಿಂದ ದೇಶದ ಯುವಕರು ಕೆರಳುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರವು ಸೋತಿದೆ. ಇನ್ನು 6 ತಿಂಗಳಿನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯುವಕರು ದಂಡ ಹಿಡಿದು ನಿಲ್ಲುತ್ತಾರೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.

   ಸಂಸತ್ ಕೆಳಮನೆಯಲ್ಲಿ ಸದ್ದು ಮಾಡಿದ ಅದೇ 'ರಾಗಾ'

   ಸಂಸತ್ ಕೆಳಮನೆಯಲ್ಲಿ ಸದ್ದು ಮಾಡಿದ ಅದೇ 'ರಾಗಾ'

   ಪ್ರಧಾನಿ ವಿರುದ್ಧ ಯುವಕರು ದಂಡ ಹಿಡಿದು ನಿಲ್ಲುತ್ತಾರೆ ಎಂಬ ಹೇಳಿಕೆಗೆ ಲೋಕಸಭೆಯಲ್ಲಿ ಶುಕ್ರವಾರ ಕೂಡ ತೀವ್ರ ಖಂಡನೆ ವ್ಯಕ್ತವಾಯಿತು. ರಾಹಲ್ ಗಾಂಧಿ ವಿರುದ್ಧ ಹೇಳಿಕೆ ಖಂಡಿಸುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ವಿರುದ್ಧ ಪ್ರತಿಪಕ್ಷ ಸದಸ್ಯರು ಪ್ರತಿಭಟನೆಗೆ ಮುಂದಾದರು. ಪರಸ್ಪರ ವಾಗ್ವಾದ ನಡೆದಿದ್ದು, ಸದನದ ಬಾವಿಗಿಳಿದು ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.

   ಟ್ಯೂಬ್ ಲೈಟ್ ಗಳೆಲ್ಲ ಹೀಗೆ ಎಂದು ಪ್ರಧಾನಮಂತ್ರಿ

   ಇನ್ನು, ಗುರುವಾರ ಕೂಡಾ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾತಿನ ಏಟು ಕೊಟ್ಟಿದ್ದರು. ನನ್ನ ಹೊಡೆಯಲು ಬರುವವರಿಗೆ ನಾನೆಂದೂ ಭಯ ಪಡುವುದಿಲ್ಲ. ಹೊಡೆತ ತಿನ್ನುವುದಕ್ಕೆ ನಾನು ದೇಹವನ್ನು ಮತ್ತಷ್ಟು ಹುರಿಗೊಳಿಸಬೇಕಿದೆ. ಅದಕ್ಕಾಗಿ ಸೂರ್ಯನಮಸ್ಕಾರವನ್ನು ಮಾಡುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಲು ರಾಹುಲ್ ಗಾಂಧಿ ಎದ್ದು ನಿಂತರು. ನಾನು 30 ನಿಮಿಷಗಳಿಂದ ಅದೇ ವಿಚಾರ ಮಾತನಾಡುತ್ತಿದ್ದೇನೆ. ಈಗ ಪ್ರತಿಕ್ರಿಯೆ ನೀಡಲು ಮುಂದಾಗಿದ್ದಾರೆ, ಕಲವು ಟ್ಯೂಬ್ ಲೈಟ್ ಗಳು ಹೀಗೆ ಎಂದು ಮಾತಿನಲ್ಲೇ ತಿವಿದರು. ಈಗದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

   English summary
   Indian Mother's Bless Protect Me, From Who Come To Beat Me. Prime Minister Narendra Modi React In Assam About Rahul Gandhi Danda Remark.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X