• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯರು ಹೆಚ್ಚು ಚಿಂತೆಗೀಡಾಗಿರುವುದು ಯಾವುದರ ಬಗ್ಗೆ ಗೊತ್ತೇ?

|

ನವದೆಹಲಿ, ಸೆಪ್ಟೆಂಬರ್ 28: ದಿನವೂ ಒಂದಲ್ಲ ಒಂದು ಸಮಸ್ಯೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ವೈಯಕ್ತಿಕ ಸಮಸ್ಯೆಗಳದ್ದು ಒಂದು ಸ್ವರೂಪವಾದರೆ, ಸಾಮುದಾಯಿಕ ಮಟ್ಟದಲ್ಲಿ ಅಧ್ಯಯನ ನಡೆಸಿದಾಗ ಸಿಗುವ ಫಲಿತಾಂಶವೇ ಇನ್ನೊಂದು.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಜಗತ್ತಿನಾದ್ಯಂತ ನಡೆದ ಸಮೀಕ್ಷೆಯೊಂದರ ಪ್ರಕಾರ, ಅರ್ಧದಷ್ಟು ಭಾರತೀಯರನ್ನು ತೀವ್ರವಾಗಿ ಚಿಂತೆಗೆ ಈಡುಮಾಡಿರುವ ಸಮಸ್ಯೆಯೇ ನಿರುದ್ಯೋಗ.

ನಿವೃತ್ತ ಜೀವನದ ಬಗ್ಗೆ ಯೋಚನೆಯೇ ಮಾಡದ ಭಾರತೀಯರು, ಇಲ್ಲಿದೆ ಲೆಕ್ಕಾಚಾರ

ನಿರುದ್ಯೋಗ ಭತ್ಯೆ ಕೊಡಲು ಸರ್ಕಾರಕ್ಕೆ ಏಕೆ ಮನಸ್ಸಿಲ್ಲ?

ನಿರುದ್ಯೋಗದ ಕುರಿತ ಚಿಂತೆ ಭಾರತ ಮತ್ತು ನೈಜೀರಿಯಾದಲ್ಲಿ ಅತ್ಯಧಿಕವಾಗಿದೆ ಎನ್ನುತ್ತದೆ ಗೋಲ್‌ಕೀಪರ್ಸ್ ಗ್ಲೋಬಲ್ ಯೂತ್ ಔಟ್‌ಲುಕ್ ನಡೆಸಿದ ಸಮೀಕ್ಷೆ.

ಜಗತ್ತಿನಾದ್ಯಂತ 40 ಸಾವಿರ ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ 2,800 ಮಂದಿ ಭಾರತೀಯರಿದ್ದರು.

ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!

ಅಲ್ಲದೆ ಜಗತ್ತಿನಾದ್ಯಂತ ಜನರಲ್ಲಿ ಅತಿ ಹೆಚ್ಚು ಚಿಂತೆ ಸೃಷ್ಟಿಸಿರುವುದು ಭದ್ರತಾ ಸಮಸ್ಯೆ. ಭಾರತ ಮತ್ತು ವಿಶ್ವದಲ್ಲಿ ಇರುವ ಪ್ರಮುಖ ಸಮಸ್ಯೆಗಳು ಇಲ್ಲಿವೆ.

ನಿರುದ್ಯೋಗ

ನಿರುದ್ಯೋಗ

ಭಾರತೀಯರಿಗೆ ಇತರೆ ಎಲ್ಲ ಸಮಸ್ಯೆಗಳಿಗಿಂತಲೂ ಉದ್ಯೋಗದ ಕೊರತೆ ತೀವ್ರವಾದಿ ಬಾಧಿಸಿದೆ. ಸಮೀಕ್ಷೆಯಲ್ಲಿ ಒಳಪಟ್ಟವರಲ್ಲಿ ಶೇ 48ರಷ್ಟು ಭಾರತೀಯರು ನಿರುದ್ಯೋಗವೇ ತಮ್ಮ ಬಹುದೊಡ್ಡ ಚಿಂತೆ ಎಂದು ಹೇಳಿದ್ದಾರೆ.

ಇನ್ನು ಜಗತ್ತಿನ ಇತರೆ ದೇಶಗಳಲ್ಲಿ ಶೇ 25ರಷ್ಟು ಮಂದಿ ಮಾತ್ರ ನಿರುದ್ಯೋಗದ ಸಮಸ್ಯೆ ಕುರಿತು ಪ್ರಸ್ತಾಪಿಸಿದ್ದಾರೆ.

ಭದ್ರತಾ ಸಮಸ್ಯೆ

ಭದ್ರತಾ ಸಮಸ್ಯೆ

ಭಯೋತ್ಪಾದನೆ, ಆಂತರಿಕ ಚಟುವಟಿಕೆಗಳು ಜನರಲ್ಲಿ ಅಭದ್ರತೆಯ ಭಾವವನ್ನು ಹೆಚ್ಚಿಸುತ್ತಿವೆ. ದೇಶದ ಎಲ್ಲೆಡೆಯ ಜನರಲ್ಲಿ ಭದ್ರತೆ ಕುರಿತಂತೆ ಆತಂಕವಿದೆ. ಜಗತ್ತಿನ ಶೇ 28ರಷ್ಟು ಜನರು ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಚಿಂತೆ ವ್ಯಕ್ತಪಡಿಸಿದ್ದಾರೆ.

ಶೇ 26ರಷ್ಟು ಭಾರತೀಯರಿಗೆ ಭದ್ರತೆ ಕೂಡ ಪ್ರಮುಖ ಸಮಸ್ಯೆಯಾಗಿ ಕಂಡಿದೆ.

ಸ್ಯಾಮ್ ಸಂಗ್ ಸಮೀಕ್ಷೆ : ವ್ಯವಹಾರ ಪರಿಕಲ್ಪನೆ ಬೆಂಗಳೂರಿಗರೇ ಬೆಸ್ಟ್

ಆರ್ಥಿಕ ಅಸ್ಥಿರತೆ

ಆರ್ಥಿಕ ಅಸ್ಥಿರತೆ

ಆರ್ಥಿಕ ಅಸ್ಥಿರತೆ ಕೂಡ ಜಗತ್ತನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಶೇ 25ರಷ್ಟು ಭಾರತೀಯರಿಗೆ ಆರ್ಥಿಕತೆಯ ಏರಿಳಿತ ಆತಂಕ ಮೂಡಿಸಿದೆ. ಜಗತ್ತಿನ ಶೇ 18ರಷ್ಟು ಮಂದಿಯಲ್ಲಿ ದೇಶದ ಹಣಕಾಸು ಚಟುವಟಿಕೆ, ಕರೆನ್ಸಿ ಮೌಲ್ಯ, ಹಣದುಬ್ಬರ ಮುಂತಾದವು ತೀವ್ರ ಸಮಸ್ಯೆಯಾಗಿ ತೋರಿದೆ.

ಪರಿಸರದ ನಾಶ

ಪರಿಸರದ ನಾಶ

ಹೆಚ್ಚುತ್ತಿರುವ ನಗರೀಕರಣ ಪ್ರಕ್ರಿಯೆ, ಕೈಗಾರೀಕರಣ, ಮಾಲಿನ್ಯ ಮುಂತಾದವು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಪರಿಸರದ ಅಸಮತೋಲನ ಮತ್ತು ಜಾಗತಿಕ ತಾಪಮಾನ ಭವಿಷ್ಯದ ಬಗ್ಗೆ ಕಳವಳ ಮೂಡಿಸಿದೆ. ಪರಿಸರದ ಮಾಲಿನ್ಯ ಪ್ರಮುಖ ಸಮಸ್ಯೆಯಾಗಿ ಬೆಳೆದಿದೆ ಎಂದು ಶೇ 23ರಷ್ಟು ಭಾರತೀಯರು ಹೇಳಿದ್ದಾರೆ. ಜಗತ್ತಿನ ಇತರೆ ಶೇ 18 ಮಂದಿಗೆ ಪರಿಸರದ ಸಮಸ್ಯೆ ಕಾಡುತ್ತಿದೆ.

ಭ್ರಷ್ಟಾಚಾರದ ಸಮಸ್ಯೆ

ಭ್ರಷ್ಟಾಚಾರದ ಸಮಸ್ಯೆ

ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವವಾಡುತ್ತಿರುವ ಸಮಸ್ಯೆ. ಅದರ ನಿಯಂತ್ರಣಕ್ಕೆ ಯಾವ ಕಾನೂನು ಕಟ್ಟಳೆಗಳಿಂದಲೂ ಪರಿಹಾರ ಸಿಗುತ್ತಿಲ್ಲ. ಭಾರತದಲ್ಲಿ ಈ ಸಮಸ್ಯೆ ಮಿತಿ ಮೀರಿದೆ. ಇದನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 23ರಷ್ಟು ಭಾರತೀಯರು ಒಪ್ಪಿಕೊಂಡಿದ್ದಾರೆ. ಆದರೆ ಭಾರತ ಹೊರತುಪಡಿಸಿ ಜಗತ್ತಿನ ಶೇ 6ರಷ್ಟು ಮಂದಿಗೆ ಮಾತ್ರ ಭ್ರಷ್ಟಾಚಾರ ದೊಡ್ಡ ಸಮಸ್ಯೆಯಾಗಿ ಕಾಣಿಸಿದೆ.

English summary
Most of the Indians are worried on unemployment, a recent worldwide poll said. Here is the report on the result of that poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X