ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡೇ ಮೂರು ಔಟ್‌ಲೆಟ್ ಮಾಲೀಕನಾದ ವ್ಯಕ್ತಿ: ಆಸ್ಟ್ರೇಲಿಯಾದಲ್ಲಿ ಮಿಂಚುತ್ತಿರುವ ಭಾರತೀಯ
ಆಸ್ಟ್ರೇಲಿಯಾದಲ್ಲಿ ಭಾರತೀಯ ವ್ಯಕ್ತಿಯೊಬ್ಬನ ಕಠಿಣ ಪರಿಶ್ರಮ ಮತ್ತು ಯಶಸ್ಸಿನ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆ ವ್ಯಕ್ತಿ 11 ವರ್ಷಗಳ ಕಾಲ ಕಷ್ಟಪಟ್ಟು ದುಡಿದು ನಂತರ ಕ್ರಮೇಣ ಆಸ್ಟ್ರೇಲಿಯಾದಲ್ಲಿ ತನ್ನದೇ ಆದ ವ್ಯವಹಾರವನ್ನು ಶುರು ಮಾಡುತ್ತಾನೆ. ಈ ವ್ಯಕ್ತಿ ಸುಮಾರು 11 ವರ್ಷಗಳ ಹಿಂದೆ, ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ.
ಅಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕೆಲಸಕ್ಕಾಗಿ ಹುಡುಕಾಟ ಶುರು ಮಾಡುತ್ತಾರೆ. ನಂತರ, ಅವರು ಪಿಜ್ಜಾ ಅಂಗಡಿಯಲ್ಲಿ ಫುಲ್ ಟೈಂ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಪಿಜ್ಜಾಗಳನ್ನು ತಯಾರಿಸಿ ಗ್ರಾಹಕರಿಗೆ ಕೊಡುತ್ತಾರೆ. ಈ ವ್ಯಕ್ತಿಯ ಜರ್ನಿಯನ್ನು ಅವರ ಸಂಬಂಧಿ ಮತ್ತು ಉದ್ಯಮಿ ವಿನೀತ್ ಎನ್ನುವವರು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಕಥೆ ಇದೀಗ ವೈರಲ್ ಆಗುತ್ತಿದೆ.

ಮೂರು ಪಿಜ್ಜಾ ಔಟ್‌ಲೆಟ್ ಓಪನ್
ಇವರ ಈ ಬ್ಯುಸಿನೆಸ್ ಜರ್ನಿ ಸುಲಭವಾಗಿರಲಿಲ್ಲ. ಆರಂಭದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿತ್ತು. ಆದರೂ ಛಲ ಬಿಡಲಿಲ್ಲ. ಒಂದಲ್ಲ ಒಂದು ದಿನ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಅವರಿಗಿತ್ತು. ಹಾಗಾಗಿ ಕೆಲಸ ಮುಂದುವರೆಸಿಕೊಂಡೇ ಹೋಗುತ್ತಾರೆ. ಸುಮಾರು ಮೂರು ವರ್ಷಗಳ ಕಾಲ ಪಿಜ್ಜಾ ಅಂಗಡಿಯಲ್ಲಿಯೇ ಕೆಲಸ ಮಾಡುತ್ತಾರೆ. ನಂತರ, ಇನ್ನು ತನ್ನದೇ ಸ್ವಂತ ಉದ್ಯಮ ಶುರು ಮಾಡಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಹೀಗಾಗಿ ಸ್ವಂತ ಹೂಡಿಕೆ ಮಾಡಿ ಪಾಲುದಾರಿಕೆಯಲ್ಲಿ ಪಿಜ್ಜಾ ಫ್ರಾಂಚೈಸ್ ಅನ್ನು ಖರೀದಿಸುತ್ತಾರೆ. ಅಲ್ಲಿಂದ, ಅವನ ವೃತ್ತಿಪರ ಜೀವನವು ಕ್ರಮೇಣ ತನ್ನದೇ ಆದ ವ್ಯವಹಾರವಾಗಿ ಬದಲಾಗುತ್ತದೆ. ಹೀಗಾಗಿ ಮತ್ತೆ ಎರಡು ಪಿಜ್ಜಾ ಫ್ರಾಂಚೈಸಿಗಳನ್ನು ಖರೀದಿಸುತ್ತಾರೆ.
ಕೊರೊನಾ ಸಮಯದಲ್ಲಿ ಭಾರತಕ್ಕೆ ವಾಪಸ್
ಈ ಸಮಯದಲ್ಲಿ, ಅವರ ವೈಯಕ್ತಿಕ ಜೀವನದಲ್ಲಿ ಅನೇಕ ಬದಲಾವಣೆಗಳು ಎದುರಾಗುತ್ತವೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಅವರು ಭಾರತಕ್ಕೆ ವಾಪಾಸಾಗುತ್ತಾರೆ.ಇದೇ ಅವಧಿಯಲ್ಲಿ ಮದುವೆಯೂ ಆಗುತ್ತದೆ. ನಂತರ ತಮ್ಮ ಪತ್ನಿಯ ಜೊತೆ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. ಅವರಿಗೆ ಇಬ್ಬರು ಮಕ್ಕಳೂ ಆಗುತ್ತಾರೆ. ಇದಾದ ನಂತರ ಆಸ್ಟ್ರೇಲಿಯಾದಲ್ಲಿ ಸ್ವಂತ ಮನೆ ಮತ್ತು BMW ಕಾರನ್ನು ಖರೀದಿ ಮಾಡುತ್ತಾರೆ. ಆ ವ್ಯಕ್ತಿ ಹೈದರಾಬಾದ್‌ನಲ್ಲಿ ಮನೆ ಕಟ್ಟುತ್ತಾರೆ. ಹೆತ್ತವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಳ್ಳುತ್ತಾರೆ. ಅವರು ಮತ್ತು ಅವರ ಕುಟುಂಬವು ಆಸ್ಟ್ರೇಲಿಯಾದ ಪೌರತ್ವವನ್ನು ಪಡೆಯುತ್ತಾರೆ. ಪಿಜ್ಜಾ ವಿತರಣೆಯೊಂದಿಗೆ ಪ್ರಾರಂಭವಾದ ಅವರ ಈ ಪ್ರಯಾಣವು ಇವತ್ತು ಯಶಸ್ವಿ ವ್ಯಾಪಾರ ಜೀವನವನ್ನು ತಲುಪಿದೆ.
ಈ ಪೋಸ್ಟ್‌ಗೆ ಅನೇಕ ಜನರು ಪ್ರತಿಕ್ರಿಯಿಸಿದ್ದಾರೆ :
ಒಬ್ಬ ಬಳಕೆದಾರರು ಆಸ್ಟ್ರೇಲಿಯಾದಲ್ಲಿನ ಅವರ ಕೆಲಸದ ಬಗ್ಗೆ ಪ್ರಶ್ನಿದ್ದಾರೆ. ವಿದ್ಯಾರ್ಥಿ ವೀಸಾದಲ್ಲಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಆಸ್ಟ್ರೇಲಿಯಾದ ಪಿಜ್ಜಾ ಅಂಗಡಿಯಲ್ಲಿ ಫುಲ್ ಟೈಂ ಕೆಲಸ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ. ಯಾಕೋ ಇದು ಅನುಮಾನಾಸ್ಪದವಾಗಿದೆ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ಅವರು ಈಗ ಆಸ್ಟ್ರೇಲಿಯಾದ ಪ್ರಜೆಯಾಗಿದ್ದು, ಅಲ್ಲಿ ಶಾಶ್ವತವಾಗಿ ವಾಸಿಸುತ್ತಿದ್ದರೆ, ಅವರಿಗೆ ಭಾರತದಲ್ಲಿ ಮನೆ ಏಕೆ ಬೇಕು ಎದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಇಂತಹ ಕಥೆಗಳು ಭಾರತದಲ್ಲಿ ಕೆಲಸ ಮಾಡುವ ಯುವಜನರಿಗೆ ಭರವಸೆ ನೀಡುತ್ತವೆ. ವಿಶೇಷವಾಗಿ ಪಂಜಾಬ್‌ನಂತಹ ರಾಜ್ಯಗಳಲ್ಲಿ, ಬರ್ಗರ್ ಕಿಂಗ್ ಉದ್ಯೋಗಿ ದಿನಕ್ಕೆ ಒಂಭತ್ತು ಗಂಟೆ ಕೆಲಸ ಮಾಡುತ್ತಾನೆ. ಕೆನಡಾದಲ್ಲಿ, ಅದೇ ಒಂಬತ್ತು ಗಂಟೆಗಳಿಗೆ ಕನಿಷ್ಠ ಐದು ಪಟ್ಟು ಹೆಚ್ಚು ಸಂಪಾದಿಸಬಹುದು ಎನ್ನುವುದೂ ಆತನಿಗೆ ತಿಳಿದಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.


Click it and Unblock the Notifications
