India Airports: ಒಂದೇ ವರ್ಷದಲ್ಲಿ 1,019ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ, ಅಕ್ಟೋಬರ್‌ನಲ್ಲಿ ಅಧಿಕ..
ಬೆಂಗಳೂರು, ಜೂನ್ 07: ಭಾರತೀಯ ವಿಮಾನಯಾನ ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸೇರಿದಂತೆ ದೇಶದ ವಿವಿಧ ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈದು ಸಂತಸದ ವಿಷಯವಾದರೂ ಆಗಾಗ ಎದುರಾಗಿ ಬಾಂಬ್ ಬೆದರಿಕೆ ಕರೆಗಳು, ಸಂದೇಶಗಳು ಅನೇಕ ವಿಮಾನಗಳ ಅಡಚರಣೆಗೆ, ಭದ್ರತೆಗೆ, ಪ್ರಯಾಣಿಕರಿಗೆ ತಲೆನೋವು ತಂದಿಡುತ್ತಿದೆ. ಭಾರತದಲ್ಲಿ ಒಂದೇ ವರ್ಷದಲ್ಲಿ 1000ಕ್ಕೂ ಹೆಚ್ಚು ಬೆದರಿಕೆ ಕರೆಗಳು ಏರ್‌ಪೋರ್ಟ್‌ಗಳಿಗೆ ಬಂದಿವೆ ಎಂದು ವರದಿ ಆಗಿದೆ.
ಭಾರತದ ನಾಗರಿಕ ವಿಮಾನಯಾನ ವಲಯವು ಒಂದೇ ವರ್ಷದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಸ್ವೀಕರಿಸಿದೆ. 2024 ರಲ್ಲಿ 1,019 ಸುಳ್ಳು ಬಾಂಬ್ ಬ್ಲಾಸ್ಟ್ ಕರೆಗಳು ಅನೇಕ ವಿಮಾನ ನಿಲ್ದಾಣಗಳಿಗೆ ಬಂದಿವೆ. ಅದಕ್ಕೂ ಹಿಂದಿನ ಆರು ವರ್ಷಗಳಲ್ಲಿ ಕೇವಲ 330 ಹಸಿ ಬಾಂಬ್ ಕರೆಗಳು ಬಂದಿದ್ದವು. ಇದೀಗ ಒಂದೇ ವರ್ಷ ಅದರ ದುಪ್ಪಟ್ಟು ಕರೆಗಳು ಬಂದಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಇದರಲ್ಲಿ ಬಹುತೇಕ ಬಾಂಬ್ ಬೆದರಿಕೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಿಂದ ಅನಾಮಧೇಯ ಪೋಸ್ಟ್‌ಗಳಿಂದ ಬಂದಿವೆ. ಈ ಹುಸಿಬಾಂಬ್ ಬೆದರಿಕೆಯಿಂದ ನಿರಂತರವಾಗಿ ವಿಮಾನಯಾನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

2024ರಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 687 ಬೆದರಿಕೆಗಳು ಏರ್‌ಪೋರ್ಟ್‌ಗೆ ಬಂದಿವೆ. ಈ ತಿಂಗಳು ಸಾಕಷ್ಟು ವಿಮಾನಯಾನಗಳ ಅಡಚರಣೆಗೆ ಕಾರಣವಾಯಿತು ಎಂದು ವಾಯುಯಾನ ಭದ್ರತಾ ಸಂಸ್ಥೆಗಳ ಆಂತರಿಕ ವರದಿ ತಿಳಿಸಿದೆ. ಇನ್ನು ಅದೇ ವರ್ಷದಲ್ಲಿ ಜೂನ್ ತಿಂಗಳಲ್ಲಿ 96, ಏಪ್ರಿಲ್‌ನಲ್ಲಿ 57 ಬೆದರಿಕೆ ಕರೆಗಳು/ಸಂದೇಶಗಳನ್ನು ಏರ್‌ಪೋರ್ಟ್ ಸಿಬ್ಬಂದಿ ಸ್ವೀಕರಿಸಿದ್ದಾರೆ.
ಇನ್ನೂ ಎಲ್ಲ ಪ್ರಕರಣಗಳಲ್ಲಿ 611 ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ, 281 ಹುಸಿಬಾಂಬ್ ಬೆದರಿಕೆ ಇಮೇಲ್ ಮೂಲಕ ಒಂದಷ್ಟು ಪ್ರಮಾಣ ಬೆದರಿಕೆಗಳು ಪಠ್ಯ, ಧ್ವನಿಮೇಲ್, ಕೈಬರಹದ ಟಿಪ್ಪಣಿಗಳು ಮತ್ತು ಫೋನ್ ಕರೆಗಳ ಮೂಲಕ ಬಂದಿವೆ. ಈ ಬೆದರಿಕೆಗಳಿಂದ 600 ಕ್ಕೂ ಹೆಚ್ಚು ದೇಶೀಯ ಮತ್ತು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬಂದಿವೆ. ಈ ಬೆಳವಣಿಗೆಯಿಂದ ಒಂದೇ ವರ್ಷದಲ್ಲಿ ಒಟ್ಟು ವಿಮಾನಯಾನ ಸಂಸ್ಥೆಗಳಿಗೆ ಆಗಿದ್ದು ಬರೋಬ್ಬರಿ 3 ಕೋಟಿ ರೂಪಾಯಿ ನಷ್ಟ ಎಂದು ಸಂಸ್ಥೆ ತಿಳಿಸಿದೆ.
ನಿರಂತರ ಸಾವಿರಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದ ಬಳಿಕ ಕಳೆದ ವರ್ಷಾಂತ್ಯಕ್ಕೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ತನ್ನ ಮಾರ್ಗಸೂಚಿಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿತು. ಸೂಕ್ತ ಭದ್ರತಾ ಕ್ರಮಗಳನ್ನು ಜರುಗಿಸಿತು. ಬಾಂಬ್ ಬೆದರಿಕೆ ಬಂದ ಕೂಡಲೇ ಅದಕ್ಕಾಗಿ ಇರುವ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (BTAC) ವಿವಿಧ ಹಂತಗಳಲ್ಲಿ ಪರಿಶೀಲಿಸಿ, ಅತ್ಯಾಧುನಿಕ ವಿಧಾನ ಬಳಸುತ್ತದೆ. ಪ್ರಯಾಣಿಕರಲ್ಲಿನ ಆತಂಕ ಹೋಗಲಾಡಿಸುವ ಕೆಲಸ ಮಾಡುತ್ತದೆ.
ಇಂತಹ ಬೆದರಿಕೆಗಳಿಂದ ವಾಯುಯಾನ ಉದ್ಯಮಕ್ಕೆ ಅಡಚರಣೆ, ತೊಂದರೆ, ನಷ್ಟ ಮಾತ್ರವಲ್ಲದೇ ಭದ್ರತ್ತೆ ಒತ್ತಡ ಉಂಟಾಗುತ್ತದೆ. ವಿದೇಶದಲ್ಲಿ ದೇಶದ ಸ್ಥಾನಮಾನ ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿಶ್ಲೇಷಿಸಲಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications