3 ಉಗ್ರರನ್ನು ಗಡಿಯಲ್ಲಿ ಹೊಡೆದುರುಳಿಸಿದ ಸೇನಾಪಡೆ

Written By:
Subscribe to Oneindia Kannada

ಶ್ರೀನಗರ, ಆಗಸ್ಟ್, 21: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದು ಸೈನ್ಯದ ಎದುರು ಹತರಾಗಿದ್ದಾರೆ. ಭಾನುವಾರ ಮಧ್ಯಾಹ್ನ ಕುಪ್ವಾರದಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿದ್ದಾರೆ ಎನ್ನಲಾಗಿದ್ದು ಸೇನಾ ಪಡೆ ತಂಡ ರಚಿಸಿ ಹುಡುಕಾಟದಲ್ಲಿ ನಿರತವಾಗಿದೆ. ಭಾನುವಾರ ಬೆಳಗಿನ ಜಾವ ಉಗ್ರರ ಇರುವಿಕೆ ಕಂಡು ಬಂದ ಕಾರಣ ಸೇನಾ ಪಡೆ ಕಾರ್ಯಾಚರಣೆ ಆರಂಭ ಮಾಡಿತ್ತು.[ಚೀನಾ ಮೇಲೆ ಕಣ್ಣಿಡಲು ಗಡಿಯಲ್ಲಿ ಸುಖೋಯ್ ಹಾರಾಟ]

army

ಕೆಲ ದಿನದ ಹಿಂದೆ ಇದೇ ಪ್ರದೇಶದಲ್ಲಿ ಉಗ್ರರು ಅತಿಕ್ರಮ ಪ್ರವೇಶ ಮಾಡಲು ಮುಂದಾಗಿದ್ದರು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.[8 ತಿಂಗಳ ರಜೆ ಹಾಕಿದ ವಿಕ್ರಮಾದಿತ್ಯ, ಪರಿಹಾರ ಏನು?]

ಆಗಸ್ಟ್ 15 ರ ನಂತರ ಗಡಿಯಲ್ಲಿ ಉಗ್ರರ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಶ್ಮೀರ ಪ್ರತ್ಯೇಕತಾವಾದಿಗಳ ಕೂಗಿನ ನಡುವೆಯೂ ಭಾರತೀಯ ಸೇನೆ ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ದೇಶ ಕಾಯುವ ಸೈನಿಕರಿಗೆ ವಂದನೆಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three terrorists are said to have been killed in an encounter with the jawans from the 4 Para regiment of the Indian Army in the Tangdhar area of Kupwara district in Jammu and Kashmir on Sunday morning.
Please Wait while comments are loading...