ಜಮ್ಮು ಬಳಿ ಪಾಕ್‌ ಬಳಸುತ್ತಿದ್ದ ಡ್ರೋನ್‌ ಲಾಂಚ್‌ ಪ್ಯಾಡ್‌ಗಳು ಉಡೀಸ್‌!

ಭಾರತವು ಪಾಕಿಸ್ತಾನದ ಹೆಡೆಮುರಿ ಕಟ್ಟುವ ಕೆಲಸ ಮುಂದುವರಿಸಿದೆ. ಜಮ್ಮು ಬಳಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಭಾರತೀಯ ಸೇನೆ ನಾಶಪಡಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಟ್ಯೂಬ್-ಲಾಂಚ್ಡ್ ಡ್ರೋನ್‌ಗಳನ್ನು ಹಾರಿಸಲು ಬಳಸಲಾಗುತ್ತಿದ್ದ ಸ್ಥಳಗಳು ಸೇರಿವೆ. ಪಾಕ್‌ ಭಯೋತ್ಪಾದಕರು ಡ್ರೋನ್‌ಗಳನ್ನು ಉಡಾಯಿಸಲು ಈ ಲಾಂಚ್ ಪ್ಯಾಡ್‌ಗಳನ್ನು ಜಮ್ಮು ಬಳಿ ಇರಿಸಿತ್ತು ಎನ್ನಲಾಗಿದೆ.

ಉತ್ತರದ ಲೇಹ್‌ನಿಂದ ದಕ್ಷಿಣದ ಸರ್ ಕ್ರೀಕ್‌ವರೆಗಿನ 26 ಸ್ಥಳಗಳಲ್ಲಿನ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಾಬಾದ್‌ನಿಂದ ಸಂಘಟಿತ ಡ್ರೋನ್ ದಾಳಿಯ ನಂತರ ಭಾರತ ಈ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನವು ಭಾರತದ ಗಡಿಯುದ್ದಕ್ಕೂ ರಾತ್ರಿಯಿಡೀ ಶೆಲ್ ದಾಳಿಯನ್ನು ಮುಂದುವರಿಸಿತು. ಕುಪ್ವಾರಾದಲ್ಲಿ ನಿರ್ಬಂಧವೂ ಹೇರಲಾಯಿತು. ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟಿರುವ ವರದಿಯಾಗಿದೆ. ಶೆಲ್ ಅವರ ಮನೆಗೆ ಬಡಿದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೃಢಪಡಿಸಿದ್ದಾರೆ.

Indian Army Destroys Pakistani Posts Drone Launch Pads Near Jammu

ಪೂಂಚ್, ರಾಜೌರಿ, ಉರಿ, ತಂಗ್ಧರ್ ಮತ್ತು ಇತರ ಹಲವು ಸ್ಥಳಗಳನ್ನು ಧ್ವಂಸಗೊಳಿಸಲು ಪಾಕಿಸ್ತಾನ ಬಳಸುತ್ತಿರುವ ಎಲ್ಲಾ ಶಸ್ತ್ರಾಸ್ತ್ರಗಳಿಗೆ ಐಎಂಎಫ್ ಮೂಲಭೂತವಾಗಿ ಮರುಪಾವತಿ ಮಾಡಿದಾಗ, ಇಲ್ಲ ಪ್ರಸ್ತುತ ಉದ್ವಿಗ್ನತೆ ಹೇಗೆ ಕಡಿಮೆಯಾಗುತ್ತದೆ ಎಂದು ನನಗೆ ಖಚಿತವಿಲ್ಲ ಎಂದು ಒಮರ್ ಖಂಡಿಸಿದ್ದಾರೆ.

ಪಾಕ್‌ ವಾಯುನೆಲೆಗಳ ಮೇಲೂ ಭಾರತ ದಾಳಿ

ನಿನ್ನೆ ರಾತ್ರಿ ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಶನಿವಾರ ಮುಂಜಾನೆ ಭಾರತ ಕೂಡ ಪ್ರತೀಕಾರದ ಉತ್ತರ ನೀಡಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ. ಚಕ್ವಾಲ್‌ನ ಮುರಿದ್ ವಾಯುನೆಲೆ ಮೇಲೆ ದಾಳಿ ನಡೆಸಲಾಗಿದ್ದು, ಈ ನೆಲೆಯು ಭಾರತದ ಮೇಲೆ ಇತ್ತೀಚಿನ ದಾಳಿಗಳು ಸೇರಿದಂತೆ ಪಾಕಿಸ್ತಾನದ ಡ್ರೋನ್ ಕಾರ್ಯಾಚರಣೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು.

Indian Army Destroys Pakistani Posts Drone Launch Pads Near Jammu

ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಯನ್ನು ಕೂಡ ಉಡೀಸ್‌ ಮಾಡಿದೆ. ಇದು ಜೆಎಫ್-17 ಮತ್ತು ಮಿರಾಜ್ ಫೈಟರ್ ಜೆಟ್‌ಗಳಿಗೆ ನೆಲೆಯಾಗಿದ್ದು, ಪಂಜಾಬ್ ಪ್ರಾಂತ್ಯದಲ್ಲಿರುವ ಈ ನೆಲೆಯು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಭಾರತದ ಮೇಲೆ ಇತ್ತೀಚಿನ ವಾಯುದಾಳಿಗಳಿಗೆ ಸಾಥ್‌ ನೀಡಿತ್ತು. ರಾವಲ್ಪಿಂಡಿ ನೂರ್ ಖಾನ್ ವಾಯುನೆಲೆಯು ಇಸ್ಲಾಮಾಬಾದ್‌ನಿಂದ ಕೇವಲ 10 ಕಿ.ಮೀ ದೂರದಲ್ಲಿ ಮತ್ತು ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಂತೆ ಇದೆ. ಇದು ಪಾಕ್‌ನ ಹೆಚ್ಚಿನ ಭದ್ರತೆಯ ವಾಯುನೆಲೆಗಳಲ್ಲಿ ಒಂದಾಗಿದೆ.

ಶಾಂತಿ ಕಾಪಾಡುವಂತೆ ಜಿ7 ರಾಷ್ಟ್ರಗಳ ಮನವಿ

ಭಾರತ ಮತ್ತು ಪಾಕಿಸ್ತಾನ ಗರಿಷ್ಠ ಸಂಯಮವನ್ನು ಕಾಯ್ದುಕೊಳ್ಳುವಂತೆ ಜಿ7 ರಾಷ್ಟ್ರಗಳು ಒತ್ತಾಯಿಸಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮತ್ತಷ್ಟು ಮಿಲಿಟರಿ ಉಲ್ಬಣವು ಪ್ರಾದೇಶಿಕ ಸ್ಥಿರತೆಗೆ ಗಂಭೀರ ಬೆದರಿಕೆಯನ್ನುಯೊಡ್ಡುತ್ತವೆ. ಎರಡೂ ಕಡೆಯ ನಾಗರಿಕರ ಸುರಕ್ಷತೆಯ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ತಕ್ಷಣ ಈ ಉಲ್ಬಣವನ್ನು ಕಡಿಮೆ ಮಾಡಲು ನಾವು ಕರೆ ನೀಡುತ್ತೇವೆ, ಶಾಂತಿ ಕಡೆಗೆ ಭಾರತ ಮತ್ತು ಪಾಕಿಸ್ತಾನ ನೇರ ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದೆ. ನಾವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮುಂದುವರಿಸುತ್ತೇವೆ. ತ್ವರಿತ, ಶಾಶ್ವತ ರಾಜತಾಂತ್ರಿಕ ಪರಿಹಾರಕ್ಕಾಗಿ ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದೂ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+