Breaking; ಭಾರತೀಯ ಸೇನೆ ಚೀತಾ ಹೆಲಿಕಾಪ್ಟರ್‌ ಪತನ, ಪೈಲೆಟ್ ಸಾವು

ನವದೆಹಲಿ, ಅಕ್ಟೋಬರ್ 05; ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಪತನಗೊಂಡಿದೆ. ಒಬ್ಬರು ಪೈಲೆಟ್ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಭಾರತೀಯ ಸೇನೆಯು ಹೆಲಿಕಾಪ್ಟರ್ ಪತನದ ಕುರಿತು ಮಾಹಿತಿ ನೀಡಿದೆ. ಇಬ್ಬರು ಪೈಲೆಟ್‌ಗಳು ಇದ್ದ ಸೇನಾ ಹೆಲಿಕಾಪ್ಟರ್ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪತನಗೊಂಡಿದೆ ಎಂದು ತಿಳಿಸಿದೆ.

ಚೀತಾ ಹೆಲಿಕಾಪ್ಟರ್‌ ಪ್ರತಿದಿನದ ಗಸ್ತಿನಲ್ಲಿತ್ತು ಎಂದು ಸೇನೆ ತಿಳಿಸಿದೆ. ಇಬ್ಬರು ಪೈಲೆಟ್‌ಗಳು ಹೆಲಿಕಾಪ್ಟರ್‌ನಲ್ಲಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ಸುಭಾಷ್ ಯಾದವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

indian army

ಹೆಲಿಕಾಪ್ಟರ್‌ನಲ್ಲಿದ್ದ ಮತ್ತೊಬ್ಬರು ಪೈಲೆಟ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸೇನೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+