ಭಾರತ-ಚೀನಾ ಗಡಿಯಲ್ಲಿ ಘರ್ಷಣೆ ನಂತರದಲ್ಲಿ ಏನೆಲ್ಲಾ ಆಯ್ತು?

ನವದೆಹಲಿ, ಡಿಸೆಂಬರ್ 13: ಅರುಣಾಚಲ ಪ್ರದೇಶದ ಮೇಲೆ ಭಾರತೀಯ ವಾಯುಪಡೆಯು ಚೀನೀ ವಾಯು ಪಡೆಯ ಚಟುವಟಿಕೆಯನ್ನು ಪತ್ತೆಹಚ್ಚಿದ ನಂತರ ಸಕ್ರಿಯ ಯುದ್ಧ ಗಸ್ತುಗಳನ್ನು ಪ್ರಾರಂಭಿಸಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾವನ್ನು ತಡೆಯಲು ಇತ್ತೀಚಿನ ವಾರಗಳಲ್ಲಿ ಫೈಟರ್ ಜೆಟ್‌ಗಳನ್ನು "ಎರಡು-ಮೂರು ಬಾರಿ" ಸ್ಕ್ರಾಂಬಲ್ ಮಾಡಬೇಕಾಯಿತು ಎಂದು ಸೇನಾ ಮೂಲಗಳು ಬಹಿರಂಗಪಡಿಸಿವೆ.

ಭಾರತ ಮತ್ತು ಚೀನಾ ಸೈನಿಕರು ಗಡಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9 ರಂದು ಭಾರತೀಯ ಮತ್ತು ಚೀನಾದ ಸೈನಿಕರು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಘರ್ಷಣೆ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತಾದ ಪ್ರಮುಖ ಬೆಳವಣಿಗೆಗಳನ್ನು ಮುಂದೆ ಓದಿ.

ಭಾರತದ ಗಡಿಯಲ್ಲಿ ಚೀನಾ ತಂಟೆ:

* ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಚೀನಾ ಜೆಟ್‌ಗಳು ಹಾರುತ್ತಿರುವುದನ್ನು ಗಮನಿಸಿದ ವಾಯುಪಡೆಯು ವಾಯು ಗಸ್ತು ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿಸೆಂಬರ್ 9 ರಂದು ಎಲ್ಎಸಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆಯ ನಂತರ ಇದು ಸಂಭವಿಸುತ್ತದೆ.

* ಸಂಸತ್ತಿನಲ್ಲಿ ಭಾರೀ ವಿರೋಧದ ಪ್ರತಿಭಟನೆಯ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಳೆದ ವಾರದ ಘರ್ಷಣೆಯಲ್ಲಿ ಎರಡು ಕಡೆಯ ನಡುವೆ ದೈಹಿಕ ಘರ್ಷಣೆ ನಡೆದಿತ್ತು. ಆದರೆ ಭಾರತೀಯ ಸೈನಿಕರು "ಚೀನಾದ ಸೈನಿಕರನ್ನು ತಮ್ಮ ವ್ಯಾಪ್ತಿಯ ಗಡಿಗೆ ಮರಳುವಂತೆ ಒತ್ತಾಯಿಸಿದರು. ಭಾರತೀಯ ಸೈನಿಕರು ದೃಢವಾಗಿ ನಿಂತು ಚೀನೀ ಯೋಧರನ್ನು ಹಿಂದೆ ಕಳುಹಿಸಿದರು. ಈ ಘರ್ಷಣೆಯಲ್ಲಿ ಎರಡೂ ಕಡೆಯಿಂದ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದರು.

* ಚೀನಾದ ಪಡೆಗಳು "ಯಾಂಗ್ಸೆ, ತವಾಂಗ್‌ನಲ್ಲಿ ಎಲ್ಎಸಿ ಅನ್ನು ಉಲ್ಲಂಘಿಸಲು ಪ್ರಯತ್ನಿಸಿದವು. ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದವು" ಎಂದು ರಾಜನಾಥ್ ಸಿಂಗ್ ಹೇಳಿದರು. "ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ ಚೀನಾದ ಸೈನಿಕರು ತಮ್ಮ ಸ್ಥಳಗಳಿಗೆ ಮರಳಿದರು." ನಂತರ ಕಮಾಂಡರ್‌ಗಳ ಸಭೆಯಲ್ಲಿ, "ಇಂತಹ ಕ್ರಮಗಳಿಂದ ದೂರವಿರಿ ಮತ್ತು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಚೀನಿಯರು ಕೇಳಿಕೊಂಡರು, ಈ ಘಟನೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕವೂ ತೆಗೆದುಕೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

* "ನಮ್ಮ ಸೈನಿಕರಲ್ಲಿ ಯಾರೂ ಸತ್ತಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ" ಎಂದು ರಕ್ಷಣಾ ಸಚಿವರು ತಮ್ಮ ಸಂಕ್ಷಿಪ್ತ ಹೇಳಿಕೆಯಲ್ಲಿ ಹೇಳಿದರು, ಅದರ ನಂತರ ಪ್ರತಿಪಕ್ಷಗಳ ಹೊರ ನಡೆದವು.

* ಭಾರತ-ಚೀನಾ ಯೋಧರ ಘರ್ಷಣೆಯ ಬಗ್ಗೆ ಪ್ರತಿಕ್ರಿಯಿಸದೆ ಗಡಿಯಲ್ಲಿ ಪರಿಸ್ಥಿತಿ "ಸಾಮಾನ್ಯವಾಗಿ ಸ್ಥಿರವಾಗಿದೆ" ಎಂದು ಚೀನಾ ಹೇಳಿದೆ. "ನಾವು ಅರ್ಥಮಾಡಿಕೊಂಡಂತೆ, ಚೀನಾ-ಭಾರತ ಗಡಿ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ. ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಚಾನೆಲ್‌ಗಳ ಮೂಲಕ ಗಡಿ ಸಮಸ್ಯೆಯ ಕುರಿತು ಅಡೆತಡೆಯಿಲ್ಲದ ಸಂವಾದವನ್ನು ಮುಂದುವರೆಸಿದ್ದಾರೆ. ಭಾರತವು ಚೀನಾದ ಹಾದಿಯಲ್ಲಿ ಮುನ್ನಡೆಯುತ್ತದೆ ಎಂದು ಭಾವಿಸಲಾಗಿದೆ, "ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ.

Indian Air Force fighter jets flying combat air patrols over Arunachal Pradesh Amid China Tension

* ಸಂಸತ್ತಿನಲ್ಲಿ ಹೇಳಿಕೆ ನೀಡುವ ಮೊದಲು, ಗೃಹ ಸಚಿವ ರಾಜನಾಥ್ ಸಿಂಗ್, ಎಲ್ಲಾ ಮೂರು ಸೇನಾ ಮುಖ್ಯಸ್ಥರೊಂದಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸರ್ಕಾರದ ಪ್ರತಿಕ್ರಿಯೆಯನ್ನು ಚರ್ಚಿಸಲು ಪ್ರತ್ಯೇಕ ಸಭೆಯನ್ನು ನಡೆಸಿದರು.

* ವಿಭಿನ್ನ ಗ್ರಹಿಕೆಗಳಿಂದ 2006ರಿಂದ ಗಡಿಯ ಇಂತಹ ಘರ್ಷಣೆಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳಿದೆ. "ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್ಎಸಿ ಉದ್ದಕ್ಕೂ ಇರುವ ಕೆಲವು ಪ್ರದೇಶಗಳಲ್ಲಿ ವಿಭಿನ್ನ ಗ್ರಹಿಕೆಯ ಪ್ರದೇಶಗಳಿವೆ, ಇದರಲ್ಲಿ ಎರಡೂ ಕಡೆಯವರು ತಮ್ಮ ಹಕ್ಕು ರೇಖೆಗಳವರೆಗೆ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ," ಎಂದು ಮೂಲಗಳು ತಿಳಿಸಿವೆ.

* "ಶಾಂತಿ ಮತ್ತು ನೆಮ್ಮದಿಯನ್ನು ಮರುಸ್ಥಾಪಿಸಲು ರಚನಾತ್ಮಕ ಕಾರ್ಯವಿಧಾನಗಳನ್ನು" ಅನುಸರಿಸಲು ಪ್ರದೇಶದಲ್ಲಿ ಭಾರತೀಯ ಕಮಾಂಡರ್ ತನ್ನ ಚೀನೀ ಸಹವರ್ತಿಯೊಂದಿಗೆ ಧ್ವಜ ಸಭೆಯನ್ನು ನಡೆಸಿದರು ಎಂದು ಸರ್ಕಾರ ಹೇಳಿದೆ.

* ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 2020ರಂದು ಘರ್ಷಣೆಗಳು ನಡೆದಿದ್ದವು. ಅಂದು ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ವ್ಯಾಪಕವಾಗಿ ಉಲ್ಬಣಗೊಂಡವು, ಇದರಲ್ಲಿ ದೇಶಕ್ಕಾಗಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು 40ಕ್ಕೂ ಹೆಚ್ಚು ಚೀನೀ ಸೈನಿಕರು ಮೃತಪಟ್ಟಿದ್ದರು.

* ಇದರ ನಂತರ ಎರಡು ರಾಷ್ಟ್ರಗಳ ನಡುವೆ ಹಲವಾರು ಘರ್ಷಣೆಗಳು ನಡೆದವು. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿ ಒಂದು, ಲಡಾಖ್‌ನ ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಸೇರಿದಂತೆ ಪ್ರಮುಖ ಸ್ಥಳಗಳಿಂದ ಭಾರತ ಮತ್ತು ಚೀನಾದ ಪಡೆಗಳು ಹಿಂದೆ ಸರಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+