ಪಾಕಿಸ್ತಾನದ 11 ಖೈದಿಗಳನ್ನು ಬಿಡುಗಡೆ ಮಾಡಲಿರುವ ಭಾರತ
ನವದೆಹಲಿ, ಜೂನ್ 12: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಕ್ಷೆಯ ಅವಧಿಯನ್ನು ಮುಗಿಸಿದ ಪಾಕಿಸ್ತಾನದ 11 ಖೈದಿಗಳನ್ನು ಭಾರತ ಸೋಮವಾರ (ಜೂನ್ 12) ಬಿಡುಗಡೆ ಮಾಡಲಿದೆ.
ಕಜಕಿಸ್ತಾನದ ರಾಜಧಾನಿಯಾದ ಆಸ್ತಾನಾದಲ್ಲಿ ನಡೆಯುತ್ತಿರುವ ಶಾಂಘೈ ಒಕ್ಕೂಟ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಪರಸ್ಪರ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ ನಂತರ ನಡೆದ ಈ ಬೆಳವಣಿಗೆ ಉಭಯ ದೇಶದ ಜನರಲ್ಲೂ ಕುತೂಹಲ ಮೂಡಿಸಿದೆ.

ಇದರೊಂದಿಗೆ, ಪಾಕಿಸ್ತಾನದಲ್ಲಿರುವ ಭಾರತೀಯ ಖೈದಿಗಳಿಗೂ ಬಿಡುಗಡೆಯ ಭಾಗ್ಯ ಸಿಗುವ ನಿರೀಕ್ಷೆಯನ್ನು ಭಾರತ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ನವಾಜ್ ಷರೀಫ್ ಅವರ ಆರೋಗ್ಯದ ಕುರಿತು ಪ್ರಧಾನಿ ಮೋದಿ ವಿಚಾರಿಸಿದ್ದಾರರೆ. ಹಾಗೆಯೇ ಅವರ ತಾಯಿ ಮತ್ತು ಕುಟುಂಬದ ಬಗ್ಗೆಯೂ ವಿಚಾರಿಸಿದ್ದಾರೆ.
ಪಾಕಿಸ್ತಾನದ ಜೈಲಿನಲ್ಲಿ ಈಗಾಗಲೇ 132 ಖೈದಿಗಳಿದ್ದು, ಅವರಲ್ಲಿ 57 ಜನರ ಶಿಕ್ಷಾ ಅವಧಿ ಮುಕ್ತಾಯಗೊಂಡಿದೆ. ಆದರೆ ಆ ಎಲ್ಲ ಖೈದಿಗಳ ರಾಷ್ಟ್ರೀಯತೆಯನ್ನು ಸಾಬೀತುಪಡಿಸದೆ, ಅವರನ್ನು ಬಿಡುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಜೊತೆಗೆ ಕುಲಭೂಷಣ್ ಜಾಧವ್ ಪ್ರಕರಣ ಸಹ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುತ್ತಿರುವಾಗ ಭಾರತದ ಈ ನಡೆ ಹಲವರಲ್ಲಿ ಬೇಸರ ಮೂಡಿಸಿದೆ.











Click it and Unblock the Notifications