Indian Monsoon: ಮೊದಲಾರ್ಧದಲ್ಲಿ ದೇಶದಲ್ಲಿ ಸಾಮಾನ್ಯ ಮಳೆ, ಆಗಸ್ಟ್‌-ಸೆಪ್ಟ್ಂಬರ್ ಮಳೆ ಮುನ್ಸೂಚನೆ

ಬೆಂಗಳೂರು, ಆಗಸ್ಟ್ 01: ಮುಂಗಾರು ಮಳೆ ನಾಲ್ಕು ತಿಂಗಳ ಪೈಕಿ ಮೊದಲ ಅರ್ಧ ಅವಧಿಯನ್ನು ಕಂಡಿರುವ ಭಾರತದಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆ ದಾಖಲಾಗಿದೆ. ಮುಂದಿನ ಇನ್ನೆರಡು ತಿಂಗಳ ಸಹ ಇದೇ ರೀತಿ ಸಾಮಾನ್ಯ ಮಳೆ ಆಗಲಿದೆ ಎಂದು ಭಾರತ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಜೂನ್‌ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗಿ ಸೆಪ್ಟಂಬರ್‌ಗೆ ಕೊನೆಗೊಳ್ಳುತ್ತದೆ. ಸದ್ಯ ಮುಂಗಾರು ಮಳೆ ಅವಧಿಯ ಮೊದಲಾರ್ಧದಲ್ಲಿ (ಜೂನ್, ಜುಲೈ) ಭಾರತವು ಸಾಮಾನ್ಯ ಮಳೆ ಸ್ವೀಕರಿಸಿದೆ. ಇನ್ನೂ ಮುಂದಿನ ದ್ವಿತೀಯಾರ್ಧ (ಆಗಸ್ಟ್,ಸೆಪ್ಟೆಂಬರ್) ನಲ್ಲಿ ಸಹ ಸಾಮಾನ್ಯ ಮಳೆ ಮುನ್ಸೂಚನೆ ಇದೆ ಎಂದು ಹೇಳಲಾಗಿದೆ. ಆದಾಗಿಯೂ ಜುಲೈ ತಿಂಗಳಲ್ಲಿ ಬಿದ್ದ ಮಳೆಗೆ ಕೆಲವು ರಾಜ್ಯಗಳಲ್ಲಿ ಪ್ರವಾಹ ವಾತಾವರಣ ಸೃಷ್ಟಿಯಾಗಿತ್ತು. ಆದಾಗ್ಯೂ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳು ಜುಲೈನಲ್ಲಿ ಕಡಿಮೆ ಮಳೆ ಬಿದ್ದಿದೆ.

Indian Monsoon Updates in Kannada

ಭಾರತದ ಒಟ್ಟು 718 ವಿಭಾಗಗಳಲ್ಲಿ ಪೈಕಿ ಪೂರ್ವ ಮತ್ತು ಈಶಾನ್ಯ ರಾಜ್ಯಗಳ 240 ಜಿಲ್ಲೆಗಳು ಅಧಿಕ ಮಳೆಯೆ ಆಗದೇ ಕೊರತೆ ಕಂಡಿವೆ. ಬಿಹಾರ, ಜಾರ್ಖಂಡ್, ಗಂಗಾನದಿ ಪಶ್ಚಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳು ಮತ್ತು ಕೇರಳದಲ್ಲಿ ಸಹ ಮೊದಲ ಎರಡು ತಿಂಗಳು ಸಾಮಾನ್ಯ ಮಳೆ ಆಗಿದ್ದು, ಶೇಕಡಾ 25 ರಷ್ಟು ಅಧಿಕ ಮಳೆ ಕೊರತೆ ಆಗಿದೆ ಎಂದು ಐಎಂಡಿ ತಿಳಿಸಿದೆ.

ಈ ರಾಜ್ಯಗಳಲ್ಲಿ ಅತೀ ಕಡಿಮೆ ಮಳೆ

ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಳೆದ ಮೂರು ದಶಕಗಳಲ್ಲಿ (1901 ರಿಂದಲೂ) ಜುಲೈನಲ್ಲಿ ಅತೀ ಕಡಿಮೆ ಮಳೆ (280.9 ಮಿಮೀ) ಆಗಿದ್ದು ಇದು ಮೂರನೇ ಬಾರಿ ಎನ್ನಲಾಗಿದೆ. ಈ ಹಿಂದೆ 2022 ರಲ್ಲಿ ಈ ಭಾಗದಲ್ಲಿ 234.8 ಮಿ.ಮೀ. ಹಾಗೂ 1903ರಲ್ಲಿ 249.5 ಮಿ.ಮೀ. ಅತೀ ಕಡಿಮೆ ಮಳೆ ದಾಖಲಾಗಿತ್ತು.

ಇನ್ನೂ ಭಾರತದಲ್ಲಿ ಕಳೆದ ಜುಲೈ ತಿಂಗಳಲ್ಲಿ ಬಿದ್ದ ಮಳೆಯು ಕಳೆದ ಐದು ವರ್ಷಗಳ ದಾಖಲೆಗಳನ್ನು ಮುರಿಯದಿದೆ. ಈ ತಿಂಗಳಲ್ಲಿ ನಿರಂತರ ಧಾರಾಕಾರ ಮಳೆಗೆ ಸಾಕ್ಷಿ ಆಯಿತು. ಈ ಬಾರಿಯ ಜುಲೈನಲ್ಲಿ ಒಟ್ಟು 1,113 ಅತ್ಯಧಿಕ ಮಳೆ ದಾಖಲಾಗಿದ್ದು, ಒಟ್ಟು 200ಕ್ಕೂ ಹೆಚ್ಚು ಕಡೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಈ ಮಹಾಮಳೆಯು ಕೆಲವು ರಾಜ್ಯಗಳಲ್ಲಿ ನೆರೆ, ಪ್ರವಾಹ ಸ್ಥಿತಿ ಉಂಟಾಗಲು ಕಾರಣವಾಯಿತು.

Indian Monsoon Updates in Kannada

ಜುಲೈನಲ್ಲಿ ಸಾರ್ವಕಾಲಿಕ ದಾಖಲೆ ಮಳೆ

ಯಾವ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದೆ ಎಂದು ನೋಡುವುದಾದರೆ ಅಂಬಾಲಾ, ಜುಲೈನಲ್ಲಿ ಚಂಡೀಗಢ ಹಾಗೂ ಹಿಮಾಚಲ ಪ್ರದೇಶಗಳು ಸೇರಿದಂತೆ ಐಎಂಡಿ ಕೇಂದ್ರಗಳ ಸೋಲನ್, ಶಿಮ್ಲಾ, ಕುಲು ಸೇರಿದಂತೆ ಇನ್ನಿತರ ಹಲವು ನಗರಗಳಲ್ಲಿ ಒಂದೇ ದಿನ ವ್ಯಾಪಕ ಮಳೆ ದಾಖಲಾಗಿ ಈ ಹಿಂದಿನ ಎಲ್ಲ ಸಾರ್ವಕಾಲಿಕ ದಾಖಲೆಯನ್ನು ಪುಡಿ ಮಾಡಿತು.

2001ರಿಂದ ವಾಯುವ್ಯ ಭಾರತದ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ದಾಖಲಾಗುತ್ತಿದೆ. ಈ ಭಾಗದಲ್ಲಿ ವಾಡಿಕೆಗಿಂತ ಶೇಕಡಾ 6ರಷ್ಟ ಮಾತ್ರ ಅಧಿಕ ಮಳೆ ಕಂಡಿದೆ. ಜೂನ್ ಅಂತ್ಯದಲ್ಲಿ ಶೇಕಡಾ 10ರಷ್ಟು ಮಳೆ ಕೊರತೆ ಎದುರಿಸಿತ್ತು.

1901ರ ನಂತರ ಈವರೆಗಿನ ಅಂಕಿ ಸಂಖ್ಯೆ ನೋಡುವುದಾದರೆ, ಜುಲೈನಲ್ಲಿ ಇಷ್ಟು ಮಳೆ ದಾಖಲಾದರೂ ಜುಲೈ ಎಂಟನೇ ಚೆಚ್ಚಗಿನ ತಿಂಗಳು ಹಾಗೂ ಎರಡನೇ ಅತೀ ಶೀತ ತಿಂಗಳಾಗಿದೆ ಎಂದು ವರದಿ ತಿಳಿಸಿದೆ.

ಆಗಸ್ಟ್‌-ಸೆಪ್ಟಂಬರ್‌ ದ್ವಿತೀಯಾರ್ಧದಲ್ಲಿ ಸಾಮಾನ್ಯ ಮಳೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂಗಾರಿನ ದ್ವಿತೀಯಾರ್ಧ ಅಂದರೆ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಅತ್ಯಧಿಕ ಮಳೆಗಿಂತ ಸಾಮಾನ್ಯ ನಿರೀಕ್ಷೆಯಷ್ಟು ಮಳೆ ದಾಖಲಾಗುವ ಸಂಭವವಿದೆ. ಆಗಸ್ಟ್‌ನಲ್ಲಿ ಸಹ ಸಾಮಾನ್ಯ ಮಳೆಯ ಸಂಭವವಿದೆ. ಹಿಮಾಲಯ ಸೇರಿದಂತೆ ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳು ಮುಂದಿನ ಎರಡು ತಿಂಗಳು ಸಾಮಾನ್ಯ ಮಳೆಗೆ ಸಾಕ್ಷಿಯಾಗಲಿವೆ ಎಂದು ಐಎಂಡಿ ತನ್ನ ಮಾಸಿಕ ಮಳೆ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.

ಇನ್ನೂ ಜುಲೈ ತಿಂಗಳಲ್ಲಿ ದೆಹಲಿ, ಮೆಘಾಲಯ, ಕರ್ನಾಟಕದ ಕರಾವಳಿ ಭಾಗದಲ್ಲಿ ವಾರಗಳ ಕಾಲ ಧಾರಾಕಾವರವಾಗಿ ಮಳೆ ಸುರಿಯಿತು. ಇದರಿಂದ ಜನಜೀವನ ಅಸ್ತವೆಸ್ತವಾಗಿದ್ದು, ಕೆಲವೆಡೆ ಮಳೆಗೆ ಜೀವಗಳೇ ಬಲಿಯಾಗಿವೆ. ನದಿಗಳು ಮೈದುಂಬಿ ಹರಿದ ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಎಲ್ಲೆಡೆ ಮುಂಗಾರಿನ ಅಬ್ಬರ ತುಸು ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+