India Weather: ಮಾರ್ಚ್ 1ರಂದು ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ; ಈ ಭವಿಷ್ಯ ನಿಜವಾಗಲಿದ್ಯಾ?
India weather: ಚಳಿಗಾಲ ಮುಗಿಯುವ ಹಂತದಲ್ಲಿದ್ದು, ಬಿರು ಬಿಸಿಲಿನ ವಾತಾವರಣ ನಿರ್ಮಾಣವಾಗುತ್ತಿದೆ. ಇನ್ನು ಉತ್ತರ ಭಾರತದ ಕಡೆ ಮಾತ್ರ ಚಳಿಯ ಪ್ರಯಾಣ ಇರುತ್ತಿದೆ. ಮತ್ತೊಂದೆಡೆ ಇಂತಹ ವಾತಾವರಣದ ನಡುವೆಯೂ ದೇಶದ ಬಹುತೇಕ ಭಾಗಗಳಲ್ಲಿ (ಮಾರ್ಚ್ 01) ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಹಾಗಾದರೆ ಯಾವೆಲ್ಲ ಕಡೆಗಳಲ್ಲಿ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೀಗ ಫೆಬ್ರವರಿ ತಿಂಗಳು ಮುಗಿದು ಮಾರ್ಚ್ ಎಂಟ್ರಿ ಕೊಡಲು ಇನ್ನು ಕೆಲವೇ ಕ್ಷಣಗಳು ಬಾಕಿಯಿದೆ. ಇನ್ನು ಮಾರ್ಚ್ ತಿಂಗಳ ಆರಂಭದಲ್ಲಿ ಈ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾಗಲಿದೆಯಾ ಎಂದು ಕಾದುನೋಡಬೇಕಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎಂದು ತಿಳಿಯಿರಿ.

ಮಾರ್ಚ್ 1ರಂದು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲೇಹ್‌ನಲ್ಲಿ ತೀವ್ರ ಹಿಮಪಾತ ಮತ್ತು ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಯಾವ್ಯಾವಾಗ ಮಳೆ?
ಮಾರ್ಚ್ 1ರಂದು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲೇಹ್‌ನಲ್ಲಿ ತೀವ್ರ ಹಿಮಪಾತ ಮತ್ತು ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
1. ಮಾರ್ಚ್ 1ರಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಪ್ರತ್ಯೇಕವಾದ ಭಾರೀ ಮಳೆ/ಹಿಮಪಾತ (64.5-115.5 ಮಿಮೀ) ಮತ್ತು ಮಾರ್ಚ್ 2, 2024ರಂದು ಭಾರೀ ಮಳೆ/ಹಿಮಪಾತ (115.5-204.4 ಮಿಮೀ) ಬೀಳುವ ಸಾಧ್ಯತೆಯಿದೆ.
2. ಮಾರ್ಚ್ 1 ಮತ್ತು 2ರಂದು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ/ಹಿಮಪಾತ (64.5-115.5 ಮಿಮೀ) ಸಾಧ್ಯತೆ ಇದೆ.
3. ಹಿಮಾಚಲ ಪ್ರದೇಶವು ಮಾರ್ಚ್ 1ರಂದು ಪ್ರತ್ಯೇಕ ಭಾರೀ ಮಳೆ/ಹಿಮಪಾತವನ್ನು (64.5-115.5 ಮಿಮೀ) ಪಡೆಯುವ ಸಾಧ್ಯತೆಯಿದೆ. ಇನ್ನು ಮಾರ್ಚ್ 2ರಂದು ರಾಜ್ಯದಲ್ಲಿ 115.5-204.4 ಮಿಮೀ ಮಳೆ/ಹಿಮಪಾತ ಅನುಭವಿಸುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶವು ಚಳಿಗಾಲದ ಅವಧಿಯಲ್ಲಿ 105 ಸೆಂ.ಮೀ ಮಳೆಯನ್ನು ಪಡೆದಿದೆ. ಸಾಮಾನ್ಯವಾಗಿ ಮಳೆ 166.6 ಮಿಮೀ, ಜನವರಿ 1ರಿಂದ ಫೆಬ್ರವರಿ 24ರವರೆಗೆ 37ರಷ್ಟು ಕೊರತೆಯಾಗಿದೆ.
4. ಇನ್ನು ಹವಾಮಾನ ಇಲಾಖೆಯ ಪ್ರಕಾರ, ಮಾರ್ಚ್ 1 ಮತ್ತು 2ರಂದು ಹಿಮಾಚಲ ಪ್ರದೇಶದಲ್ಲಿ ಅಲ್ಲಲ್ಲಿ ಪ್ರತ್ಯೇಕವಾದ ಆಲಿಕಲ್ಲು ಸಹಿತ ಮಳೆ ಬೀಳುವ ಸಾಧ್ಯೆತೆಯಿದೆ.
5. ಮಾರ್ಚ್ 1 ಮತ್ತು 2ರಂದು ಪಂಜಾಬ್‌ನಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ.
6. ಮಾರ್ಚ್ 2ರಂದು ಹರಿಯಾಣ ಮತ್ತು ಚಂಡೀಗಢದಲ್ಲಿ ಅಲ್ಲಿ ಆಲಿಕಲ್ಲು ಮಳೆ ಸಾಧ್ಯತೆ.
7. ಮಾರ್ಚ್ 2ರಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆ ಬೀಳುವ ಸಾಧ್ಯತೆಯಿದೆ.












Click it and Unblock the Notifications