India weather: ಮೈಚಾಂಗ್ ಚಂಡಮಾರುತ ಹಿನ್ನೆಲೆ ಈ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಅಬ್ಬರದ ಮಳೆ ಮುನ್ಸೂಚನೆ
ನವದೆಹಲಿ, ಡಿಸೆಂಬರ್, 07: ಮೈಚಾಂಗ್ ಚಂಡಮಾರುತ ಹಿನ್ನೆಲೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸುನಾಮಿಯಂತಹ ಮಳೆಯಾಗಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಅದರಲ್ಲೂ ಕೇರಳ, ತಮಿಳುನಾಡು ರಾಜ್ಯಗಳ ಬಹುತೇಕ ಭಾಗಗಳಲ್ಲಿ ದೊಡ್ಡ ದೊಡ್ಡ ಅನಾವುತಗಳನ್ನೇ ಸೃಷ್ಟಿಸಿದೆ. ಹಾಗೆಯೇ ಇಂದಿನಿಂದ 2 ದಿನಗಳ ಕಾಲ ಹಲವೆಡೆ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೈಚಾಂಗ್ ಚಂಡಮಾರುತದ ಪ್ರಭಾವವು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಲೇ ಇದ್ದು, ಇನ್ನೂ ಇದು ವಿಸ್ತರಣೆಗೊಳ್ಳುತ್ತಿರುವ ಪರಿಣಾಮ ಇದರಿಂದ ದೇಶದ ಅನೇಕ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆಯೂ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ತಮಿಳುನಾಡು, ಕೇರಳ ಮತ್ತು ಸೇರಿದಂತೆ ಹಲವು ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ದೇಶದ ವಿವಿಧ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರತ್ಯೇಕವಾದ ಭಾರೀ ಸುರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 8-9ರಂದು ಕೇರಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಆದರೆ ತಮಿಳುನಾಡಿನಲ್ಲಿ ಡಿಸೆಂಬರ್ 9ರಂದು ಮತ್ತೆ ಅಬ್ಬರದ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಅಲ್ಲದೆ ಇಂದು (ಡಿಸೆಂಬರ್ 7) ಪಂಜಾಬ್ ಮತ್ತು ಹರಿಯಾಣ-ಚಂಡೀಗಢದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ ಸಮಯದಲ್ಲಿ ದಟ್ಟವಾದ ಮಂಜು ಕವಿಯಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಮುನ್ಸೂಚನೆ ನೀಡಿದೆ.
ತೆಲಂಗಾಣದ ಹಲವೆಡೆ ಭಾರೀ ಮಳೆ
ಇನ್ನು ಕಳೆದ 24 ಗಂಟೆಗಳಲ್ಲಿ ತೆಲಂಗಾಣದ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಭದ್ರಾದ್ರಿ ಕೊತಗುಡೆಂ ಮತ್ತು ಖಮ್ಮಂ ಜಿಲ್ಲೆಗಳೆರಡೂ ಹೆಚ್ಚಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹೆಚ್ಚಾಗಿ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಸುರಿದಿದೆ ಎಂದು ತಿಳಿಸಿದೆ.
ಹಾಗೆಯೆ ಡಿಸೆಂಬರ್ 6 ರಂದು ತೆಲಂಗಾಣದ ಕೆಲವು ಸ್ಥಳಗಳಲ್ಲಿ ಮಳೆಯಾಗಿದ್ದರೆ, ಡಿಸೆಂಬರ್ 7ರಂದು ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಹವಾಮಾನ ಕೇಂದ್ರ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಡಾ.ಮೃತ್ಯುಂಜಯ್ ಮಹಾಪಾತ್ರ ಅವರು, ಸೈಕ್ಲೋನಿಕ್ ಚಂಡಮಾರುತವು ಮೈಚಾಂಗ್ ಆಗಿ ಪರಿವರ್ತನೆಗೊಂಡಿದೆ. ಮತ್ತು ಯಾವುದೇ ಇದು ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನದ ಭೂಕುಸಿತದ ನಂತರ, ಸೈಕ್ಲೋನಿಕ್ ಸ್ಟಾರ್ಮ್ ಮೈಚಾಂಗ್ ಕ್ರಮೇಣ ದುರ್ಬಲಗೊಂಡಿತು ಎಂದರು.
ಹಾಗೆಯೇ ಇಂದು ಮಧ್ಯಾಹ್ನ ಇದು ಈಶಾನ್ಯ ತೆಲಂಗಾಣ ಮತ್ತು ಪಕ್ಕದ ದಕ್ಷಿಣ ಛತ್ತೀಸ್‌ಗಢ-ದಕ್ಷಿಣ ಒಳಭಾಗ ಒಡಿಶಾ-ಕರಾವಳಿ ಆಂಧ್ರಪ್ರದೇಶದ ಮೇಲೆ ಹೆಚ್ಚಾಗಿ ಪ್ರಭಾವ ಬೀರುವ ಸಾಧ್ಯತೆಯಿದ ಎನ್ನಲಾಗಿದೆ.
ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನಿಕ್ ಉತ್ತರ-ಈಶಾನ್ಯ ದಿಕ್ಕಿನಲ್ಲಿ ಚಲಿಸುವ ನಿರೀಕ್ಷೆಯಿದೆ. ಆದರೆ ತೀವ್ರತೆಯು ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಛತ್ತೀಸ್‌ಗಢ, ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದಂತಹ ಪ್ರದೇಶಗಳಲ್ಲಿ 7ಸೆಂ.ಮೀಟರ್‌ನಿಂದ 11 ಸೆಂ.ಮೀಟರ್‌ವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಡಿಸೆಂಬರ್ 2023ರಿಂದ ಫೆಬ್ರವರಿ 2024ರವರೆಗೆ ದೇಶದಾದ್ಯಂತ ಚಳಿಗಾಲ ಇರುತ್ತದೆ. ಉತ್ತರ, ವಾಯುವ್ಯ, ಮಧ್ಯ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಶೀತ ಅಲೆಗಳು ಸಾಮಾನ್ಯ ತೀವ್ರತೆ ಮತ್ತು ಆವರ್ತನವು ಸರಾಸರಿಗಿಂತ ಕಡಿಮೆಯಿರುತ್ತದೆ ಎಂದು ಮುನ್ಸೂಚನೆ ನೀಡಿದೆ.
ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಕನಿಷ್ಠ ತಾಪಮಾನವು ಸಾಧ್ಯತೆಯಿದೆ ಮತ್ತು ಮಧ್ಯ ಮತ್ತು ವಾಯುವ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ನಿರೀಕ್ಷಿಸಲಾಗಿದೆ.












Click it and Unblock the Notifications