India vs Pakistan War: ಪಾಕಿಸ್ತಾನ ದಾಳಿ: ಯೋಧ ಹುತಾತ್ಮ, 12 ಜನ ಭಾರತೀಯರು ಸಾವು, 50 ಜನರಿಗೆ ಗಾಯ!

India vs Pakistan War: ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪ್ರಚೋದಿತ ಗುಂಡಿನ ದಾಳಿಯನ್ನು ಮಾಡುತ್ತಿದೆ. ಅಲ್ಲದೇ ಕಳೆದ ಎರಡು ದಿನಗಳಿಂದ ನಿಂತರವಾಗಿ ಪಾಕ್‌ ಶೆಲ್‌ ದಾಳಿಗಳನ್ನು ನಡೆಸುತ್ತಿದೆ. ಪಾಕ್‌ ನಡೆಸಿದ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ. 12 ಜನ ಭಾರತೀಯರು ಮೃತಪಟ್ಟಿದ್ದು. 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವವರು ಹಾಗೂ ಅವರ ಕುಟುಂಬದವರಿಗೆ ನ್ಯಾಯ ಕೊಡಿಸುವುದು ಹಾಗೂ ಭಯೋತ್ಪಾದಕ ಕೃತ್ಯಗಳನ್ನು ಸಹಿಸುವುದಿಲ್ಲ ಎನ್ನುವ ಸ್ಪಷ್ಟವಾದ ಸಂದೇಶವನ್ನು ಭಾರತೀಯ ಸೇನೆ ಕೊಟ್ಟಿದೆ. ಆದರೆ, ಪಾಕ್‌ ತನ್ನ ನರಿಬುದ್ಧಿ ಪ್ರದರ್ಶನವನ್ನು ಮುಂದುವರಿಸಿದೆ. ಗಡಿಭಾಗದಲ್ಲಿ ಶೆಲ್‌ ದಾಳಿ ಹೆಚ್ಚಿಸಿದೆ.

ಪಾಕ್‌ ಪ್ರತಿ ಬಾರಿಯೂ ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ ಭಾಗದಲ್ಲಿ ಶೆಲ್‌ ದಾಳಿಗಳನ್ನು ನಡೆಸುವ ಮೂಲಕ ಈ ಭಾಗದ ಜನರನ್ನು ಗುರಿಯಾಸಿಕೊಂಡಿದೆ. ಭಾರತೀಯ ಸೇನೆಯು ದೊಡ್ಡ ಮಟ್ಟದ ಕ್ಷಿಪಣಿ ದಾಳಿ ನಡೆಸಿದರೂ. ಭಾರತೀಯ ಸೇನೆಯು ಪಾಕಿಸ್ತಾನದ ಯಾವುದೇ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಲ್ಲ. ಅಲ್ಲದೇ ಸೇನೆಯನ್ನಾಗಲಿ ಅಥವಾ ಪಾಕ್‌ನ ಆಸ್ತಿಯನ್ನಾಗಲಿ ಗುರಿಯಾಗಿಸಿಕೊಂಡು ನಾವು ದಾಳಿ ಮಾಡಿಲ್ಲ. ನಾವು ಕೇವಲ ಉಗ್ರರ ಅಡಗುತಾಣಗಳನ್ನು ಮಾತ್ರ ಟಾರ್ಗೆಟ್‌ ಮಾಡಿದ್ದೇವೆ ಎಂದು ಹೇಳಿದೆ. ಆದರೆ, ಪಾಕ್‌ ಮಾತ್ರ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದನ್ನು ಮುಂದುವರಿಸಿದೆ.

India vs Pakistan War Pakistan attack Soldier martyred 12 Indians killed 50 injured

ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆಯು ಏರ್‌ಸ್ಟ್ರೈಕ್ ಮಾಡಿದ ಕೂಡಲೇ ನಿಯಂತ್ರಣ ರೇಖೆ ಭಾಗದಲ್ಲಿ ಶೆಲ್‌ಗಳ ಸುರಿಮಳೆಯನ್ನೇ ಸುರಿಸಿದೆ. ಪಾಕಿಸ್ತಾನದ ಈ ನಡೆಯಿಂದ ಎರಡೂ ದೇಶಗಳ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ. ಭಾರತೀಯರು ಸಾವನ್ನಪ್ಪಿದ್ದು. ಗಡಿಭಾಗದಲ್ಲಿರುವ ಮನೆಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.

ಪಾಕ್‌ ನಡೆಸಿದ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ (32) ಅವರು ಗುರುವಾರ ಹುತಾತ್ಮರಾಗಿದ್ದಾರೆ. ಯೋಧ ದಿನೇಶ್ ಕುಮಾರ್ ಶರ್ಮಾ ಅವರು ಹರಿಯಾಣದ ಪಲ್ವಾಲ್‌ನ ಮೊಹಮ್ಮದ್‌ಪುರ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಈ ಬಗ್ಗೆ ವೈಟ್ ನೈಟ್ ಕಾರ್ಪ್ಸ್ ಬುಧವಾರ ಸೋಷಿಯಲ್‌ ಮೀಡಿಯಾದ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದೆ.

ಬುಧವಾರ ತಡರಾತ್ರಿ ಪಾಕ್‌ನಿಂದ ಶೆಲ್ ದಾಳಿ ಪ್ರಾರಂಭವಾಗಿದ್ದು. ಭಾರತದ ಮುಂಚೂಣಿ ಪಡೆಗಳಲ್ಲಿದ್ದ ಶರ್ಮಾ ಅವರು ಶೆಲ್‌ ದಾಳಿಗೆ ಮೃತಪಟ್ಟಿದ್ದಾರೆ. ಇದನ್ನು ಪಾಕ್‌ ಉದ್ದೇಶ ಪೂರ್ವಕವಾಗಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮಾಡಿದೆ.

ವಿವಿಧ ಸುಧಾರಿತ ಶಸ್ತ್ರಾಸ್ತ್ರಗಳಾದ ಮೋರ್ಟರ್ ಗುಂಡು ಹಾಗೂ ಫಿರಂಗಿ ಗುಂಡಿನ ದಾಳಿಗಳು ನಡೆದಿವೆ. ಗಡಿಭಾಗದ ಹಳ್ಳಿಗಳ ಸಮೀಪದಲ್ಲಿ ಅಪಾಯಕಾರಿಯಾಗಿ ಬಿದ್ದಿವೆ. ಭಾರತವು ಮೇ 5ರ ತಡರಾತ್ರಿ ನಡೆಸಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಈ ದೃಶ್ಯಕೃತ್ಯವನ್ನು ನಡೆಸಲಾಗಿದೆ. ಇದು ಸ್ಪಷ್ಟ ಕದನ ವಿರಾಮ ಉಲ್ಲಂಘನೆಯಾಗಿದೆ. ಅಲ್ಲದೇ ಉದ್ದೇಶಪೂರ್ವಕ ಪ್ರಚೋದನೆ ಎಂದು ಭಾರತೀಯ ಅಧಿಕಾರಿಗಳು ಘಟನೆಯನ್ನು ಖಂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+