ಭಾರತ Vs ಪಾಕಿಸ್ತಾನ್: ಅಚ್ಚರಿಯ ಟ್ವೀಟ್ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್!
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ - ಪಾಕಿಸ್ತಾನ ಮುಖಾಮುಖಿಯಾಗಿ, ಭಾರತ ಗೆಲುವು ಸಹ ಸಾಧಿಸಿದೆ. ಆದರೆ, ಇದಕ್ಕೆ ಲಕ್ಷಾಂತರ ಜನ ವಿರೋಧ ವ್ಯಕ್ತಪಡಿಸಿದ್ದರು. ಭಾರತ ಯಾವುದೇ ಕಾರಣಕ್ಕೂ ಮ್ಯಾಚ್ ಆಡಬಾರದು ಎಂದು ಆಗ್ರಹಿಸಿದ್ದರು. ಈ ನಡುವೆ ಕಾಂಗ್ರೆಸ್‌ನ ಪ್ರಮುಖ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು ಮಾಡಿರುವ ಟ್ವೀಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಭಾರತಕ್ಕೆ ನಾನು ವಿಶ್ ಮಾಡುತ್ತೇನೆ ಎಂದು ಶಶಿ ತರೂರ್ ಅವರು ಮಾಡಿರುವ ಟ್ವೀಟ್ ಹೊಸ ಸಂಚಲನ ಹಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನು ಸಂಸದ ಶಶಿತರೂರ್ ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ವಿಚಾರವು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ. ರಾಜಕೀಯವಾಗಿ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡಿರುವ ಶಶಿ ತರೂರ್ ಅವರು ಬಿಜೆಪಿಗೆ ಸೇರುವ ಕಾಲ ಸನ್ನಿಹಿತವಾಗಿದೆ. ಇದೇ ಕಾರಣಕ್ಕೆ ಅವರು ಬಿಜೆಪಿಯ ಕೆಲವೊಂದು ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ, ಅದೇ ಸಂದರ್ಭದಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ಶಶಿ ತರೂರ್ ಅವರು ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಗ್ರೇಟ್ ಜಾಬ್ ಟೀಮ್ ಇಂಡಿಯಾ! 🇮🇳 (ನಾನು ಕ್ರಿಕೆಟ್ ಬಗ್ಗೆ ಮಾತನಾಡುತ್ತಿಲ್ಲ!)
ಡೇವಿಸ್ ಕಪ್ ವಿಶ್ವ ಗ್ರೂಪ್ I ಟೈನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ 3-1 ಅಂತರದ ಐತಿಹಾಸಿಕ ಗೆಲುವಿನ ಸುದ್ದಿಯನ್ನು ಈಗಷ್ಟೇ ನೋಡಿದೆ. 1993 ರ ನಂತರ ಯುರೋಪಿಯನ್ ರಾಷ್ಟ್ರದ ವಿರುದ್ಧ ಭಾರತವು ವಿದೇಶದಲ್ಲಿ ಗೆದ್ದ ಮೊದಲ ಗೆಲುವು ಇದು. 2026ರ ಅರ್ಹತಾ ಸುತ್ತಿಗೆ! ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತೀಯ ಪುರುಷರ ಕ್ರಿಕೆಟ್ ತಂಡ ಸಹ ಭಾನುವಾರದ ಪಂದ್ಯದಲ್ಲಿ ಅತ್ಯುತ್ತಮ ಗೆಲುವು ಸಾಧಿಸಿದೆ. ಆದರೆ, ಆ ಗೆಲುವಿನ ಬಗ್ಗೆ ಸಂಸದ ಶಶಿ ತರೂರ್ ಅವರು ಯಾವುದೇ ಟ್ವೀಟ್ ಮಾಡಿಲ್ಲ.
ಇದಕ್ಕೆ ಹಲವರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ನೀವು ಅದ್ಭುತ ಟೆನಿಸ್ ವಿಜಯೋತ್ಸವವನ್ನು ಆಚರಿಸಬಹುದಿತ್ತು. ಆದರೆ ಅದರಲ್ಲಿ ಕ್ರಿಕೆಟ್ ವಿಷಯವನ್ನು ಸೇರಿಸುವ ಅಗತ್ಯತೆ ಇರಲಿಲ್ಲ. ಗೌರವದಿಂದ ಹೇಳಬೇಕೆಂದರೆ, ಗಮನ ಸೆಳೆಯುವ ಕಲೆ ಜೀವಂತವಾಗಿದೆ ಮತ್ತು ಚೆನ್ನಾಗಿದೆ ಎಂದು ನೆಟ್ಟಿಗರೊಬ್ಬರು ರಿಯಾಕ್ಟ್ ಮಾಡಿದ್ದಾರೆ.
ಅದ್ಭುತವಾಗಿ ಹೇಳಿದ್ದೀರಿ ಸರ್! 🙌 ಕ್ರಿಕೆಟ್‌ನಿಂದ ಟೆನಿಸ್‌ಗೆ ನಮ್ಮ ಆಲೋಚನೆಗಳನ್ನು ಕೊಂಡೊಯ್ಯುವ ಅದ್ಭುತ ಮಾರ್ಗ ಒಪ್ಪಬೇಕು. ಭಾರತ ಕೇವಲ ಕ್ರಿಕೆಟ್‌ನ ಭೂಮಿ ಅಲ್ಲ ಎಂಬುದನ್ನು ನೆನಪಿಸುತ್ತದೆ. ಬಿಸಿಸಿಐ ಹಣ ಹೂಡುವಲ್ಲಿ ನಿರತವಾಗಿರುವಾಗ, ನಾವು ಇತರ ಶ್ರಮಶೀಲ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಮಯ. 🎾🇮🇳 ಎಂದು ಮತ್ತೊಬ್ಬ ನೆಟ್ಟಗರು ರಿಯಾಕ್ಟ್ ಮಾಡಿದ್ದಾರೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು












Click it and Unblock the Notifications