Lok Sabha Election 2024, Opinion Poll: ನರೇಂದ್ರ ಮೋದಿ ನಾಗಾಲೋಟಕ್ಕೆ I.N.D.I.A ತಡೆ ಒಡ್ಡುತ್ತಾ?

ಸತತವಾಗಿ ಎರಡು ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ, ಮುಂದಿನ ವರ್ಷದ ಮೇ ತಿಂಗಳೊಳಗೆ ನಡೆಯಬೇಕಾಗಿರುವ ಲೋಕಸಭಾ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ. ಪ್ರಧಾನಿ ಮೋದಿಯವರು ಮತ್ತೆ ಅಧಿಕಾರಕ್ಕೇರುವ ಖಚಿತ ವಿಶ್ವಾಸದಲ್ಲಿದ್ದಾರೆ.

ಕಳೆದ ಮಾನ್ಸೂನ್ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಮುಂದಿನ ಐದು ವರ್ಷದ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ, ಮುಂದಿನ ವರ್ಷವೂ ನಾನೇ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ಎಂದು ಹೇಳಿದ್ದಾರೆ.

India TV Opinion Poll, Lok Sabha Election 2024: BJP Led NDA Alliance Will Get Clear Majority

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 2019ರ ಚುನಾವಣೆಯಲ್ಲಿ ಇರುವಂತೆ ಪೂರಕ ವಾತಾವರಣವಿಲ್ಲ ಎನ್ನುವುದು ನಿರ್ವಿವಾದ. ಇದಲ್ಲದೇ, ಸುಮಾರು 25ಕ್ಕೂ ಹೆಚ್ಚು ಪಕ್ಷಗಳು I.N.D.I.A ಮೈತ್ರಿಕೂಟದ ಅಡಿಯಲ್ಲಿ ಚುನಾವಣೆ ಎದುರಿಸಲು ಸಿದ್ದವಾಗಿದೆ.

ಈಗ ಚುನಾವಣೆ ನಡೆದರೆ ಯಾರಿಗೆ ಬಹುಮತ ಸಿಗಲಿದೆ ಎನ್ನುವ ಸಮೀಕ್ಷೆಯನ್ನು ಈಗಾಗಲೇ ಎರಡು ಸಂಸ್ಥೆಗಳು ನಡೆಸಿವೆ. ಒಂದು ಸಮೀಕ್ಷೆಯಲ್ಲಿ ಮತ್ತೆ ಮೋದಿ ಮೇನಿಯಾ ಎನ್ನುವ ಫಲಿತಾಂಶ ಬಂದಿದ್ದರೆ, ಇನ್ನೊಂದರಲ್ಲಿ ಅತಂತ್ರ ಲೋಕಸಭೆ ಎನ್ನುವ ರಿಸಲ್ಟ್ ಬಂದಿದೆ. ಈ ನಡುವೆ ಇನ್ನೊಂದು ಸಮೀಕ್ಷೆ ಹೊರಬಿದ್ದಿದ್ದು, ಮೋದಿ ನಾಗಾಲೋಟಕ್ಕೆ ಬ್ರೇಕ್ ಇಲ್ಲ ಎನ್ನುವ ವರದಿ ಬಂದಿದೆ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಜಂಟಿ ಸಮೀಕ್ಷೆ

ಇಂಡಿಯಾ ಟಿವಿ-ಸಿಎನ್ಎಕ್ಸ್ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿದೆ. 44,548 ಜನರನ್ನು ಸಂಪರ್ಕಿಸಿ 292 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಈ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ ಎಂದು ಇಂಡಿಯಾ ಟಿವಿ ಹೇಳಿಕೊಂಡಿದೆ. ಸಮೀಕ್ಷೆಯಲ್ಲಿ 23, 871 ಪುರುಷರ ಮತ್ತು 20,677 ಮಹಿಳೆಯರ ಅಭಿಪ್ರಾಯದ ಸ್ಯಾಂಪಲ್ ಅನ್ನು ಪಡೆಯಲಾಗಿದೆ.

ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದ ಎಂಬತ್ತು ಸ್ಥಾನಗಳ ಪೈಕಿ, ಎಪ್ಪತ್ತು ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಸೀಟು ಸಿಗಲಿದೆ. ಇದು ಕಳೆದ ಬಾರಿಗಿಂತ ನಾಲ್ಕು ಸ್ಥಾನ ಹೆಚ್ಚು ಎನ್ನುವುದು ಗಮನಿಸಬೇಕಾದ ವಿಚಾರ. ಇನ್ನು, ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿಗೆ 20, ಕಾಂಗ್ರೆಸ್ಸಿಗೆ 7 ಮತ್ತು ಜೆಡಿಎಸ್ಸಿಗೆ ಒಂದು ಸ್ಥಾನ ಸಿಗಲಿದೆ.

ಸಮೀಕ್ಷೆಯ ಪ್ರಕಾರ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಸಾಧನೆ

ಸಮೀಕ್ಷೆಯ ಪ್ರಕಾರ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಸಾಧನೆ ಗಣನೀಯವಾಗಿಯೇನೂ ಇರುವುದಿಲ್ಲ. ಆದರೆ, ಬಿಜೆಪಿಯ ಖಚಿತ ಮತಬ್ಯಾಂಕ್ ಇರುವ ರಾಜ್ಯಗಳಲ್ಲಿನ ಫಲಿತಾಂಶವೇ ಪಕ್ಷಕ್ಕೆ ನಿರ್ಣಾಯಕವಾಗಲಿದೆ ಎನ್ನುವುದು ಸಮೀಕ್ಷೆಯಲ್ಲಿ ಬಂದ ಮತ್ತೊಂದು ಮಾಹಿತಿ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಬಾರಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು, ಆದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಎಲ್ಲಾ ಏಳು ಸ್ಥಾನವನ್ನು ಗೆಲ್ಲುವುದು ಅನುಮಾನ. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಮತ್ತು ಪಂಜಾಬಿನಲ್ಲಿ ತನ್ನ ಕರಾಮತ್ತನ್ನು ತೋರಿಸಲಿದೆ.

ಈಗ ಚುನಾವಣೆ ನಡೆದರೆ ಯಾವ ಮೈತ್ರಿಕೂಟಕ್ಕೆ ಎಷ್ಟು ಸಿಗಬಹುದು:

ಒಟ್ಟು ಸ್ಥಾನಗಳು: 543
ಎನ್ಡಿಎ ಮೈತ್ರಿಕೂಟ: 318
ಯುಪಿಎ ಮೈತ್ರಿಕೂಟ: 175
ಇತರರು: 50

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+