• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಕುರಿತಾದ ಸುಳ್ಳು ಸುದ್ದಿ: ಮುಂಚೂಣಿಯಲ್ಲಿ ಭಾರತ

|
Google Oneindia Kannada News

ನವದೆಹಲಿ, ಆಗಸ್ಟ್ 11: ಕೊರೊನಾ ವೈರಸ್ ಚೀನಾದಲ್ಲಿ ಲಗ್ಗೆ ಇಟ್ಟು, ಇನ್ನೂ ಭಾರತಕ್ಕೆ ಕಾಲಿಡುವ ಮುನ್ನವೇ ಅದರ ಸುತ್ತ ನೂರಾರು ಕಥೆಗಳು ಹುಟ್ಟಿಕೊಂಡಿದ್ದವು. ಕೊರೊನಾ ವೈರಸ್ ಬಂದವರು ರಸ್ತೆಯಲ್ಲಿಯೇ ಬಿದ್ದು ಸಾಯುತ್ತಾರಂತೆ ಎಂಬುದರಿಂದ ಹಿಡಿದು ಕಷಾಯ ಮಾಡಿ ಕುಡಿದರೆ ಸಾಕು ಯಾವ ವೈರಸ್ ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆವರೆಗೆ ವಿವಿಧ ಬಗೆಯ ವದಂತಿಗಳು ಓಡಾಡುತ್ತಿದ್ದವು. ವೈರಸ್ ಭಾರತಕ್ಕೆ ಪ್ರವೇಶಿಸಿ ಲಾಕ್ ಡೌನ್ ಜಾರಿ ತಂದ ನಂತರವಂತೂ ಮತ್ತಷ್ಟು ಕಥೆಗಳು ಸೃಷ್ಟಿಯಾದವು. ಈಗಲೂ ಆಗುತ್ತಲೇ ಇವೆ.

   ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

   87 ದೇಶಗಳಲ್ಲಿ ಕನಿಷ್ಠ 25 ಭಾಷೆಗಳಲ್ಲಿ ಕೋವಿಡ್ 19 ಪಿಡುಗಿನ ಕುರಿತು ತಪ್ಪು ಮಾಹಿತಿ, ರೂಮರ್‌ಗಳು, ಕಳಂಕ ಮತ್ತು ಸಂಚಿ ಸಿದ್ಧಾಂತಗಳು ಹರಿದಾಡುತ್ತಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇವುಗಳಲ್ಲಿ ಅತಿ ಹೆಚ್ಚಿನ ರೂಮರ್‌ಗಳು ಭಾರತದಲ್ಲಿ ನಡೆಯುತ್ತಿದ್ದರೆ, ಅಮೆರಿಕ, ಚೀನಾ ಸ್ಪೇನ್, ಇಂಡೋನೇಷ್ಯಾ ಮತ್ತು ಬ್ರೆಜಿಲ್‌ಗಳದ್ದು ಕೂಡ ಒಂದಷ್ಟು ಪಾಲು ಇದೆ.

   ಬೆಂಗಳೂರು ನಗರದ 5 ಕೋವಿಡ್ ಆರೈಕೆ ಕೇಂದ್ರಗಳಿಗೆ ಬೀಗಬೆಂಗಳೂರು ನಗರದ 5 ಕೋವಿಡ್ ಆರೈಕೆ ಕೇಂದ್ರಗಳಿಗೆ ಬೀಗ

   ಅಮೆರಿಕದ ಟ್ರಾಪಿಕಲ್ ಆಂಡ್ ಹೈಜೀನ್ ಎಂಬ ನಿಯತಕಾಲಿಕೆಯಲ್ಲಿ ಸೋಮವಾರ ಈ ಅಧ್ಯಯನ ಪ್ರಕಟವಾಗಿದೆ. ಕೊರೊನಾ ವೈರಸ್ ಕುರಿತಂತೆ 2,278 ಬರಹ ರೂಪದ ವರದಿಗಳು ಲಭ್ಯವಾಗಿದ್ದು, ಅವುಗಳಲ್ಲಿ 1,865 ವರದಿಗಳು (ಶೇ 82) ಸುಳ್ಳಾಗಿರುವುದು ಪತ್ತೆಯಾಗಿದೆ. ನಾವೆಲ್ ಕೊರೊನಾ ವೈರಸ್‌ಗೆ ಸಂಬಂಧಿಸಿದ 2,311 ವರದಿಗಳಲ್ಲಿ ಶೇ 89ರಷ್ಟು ವದಂತಿಗಳೆಂದು ಪರಿಗಣಿಸಲಾಗಿದೆ. ಶೇ 7.8ರಷ್ಟು ಸಂಚಿನ ಸಿದ್ಧಾಂತಗಳು ಮತ್ತು ಶೇ 3.5ರಷ್ಟು ಕಳಂಕ ಹೊರಿಸುವ ವರದಿಗಳಾಗಿವೆ ಎಂದು ಅದು ತಿಳಿಸಿದೆ. ಮುಂದೆ ಓದಿ.

   ಶೇಕಡಾವಾರು ರೂಮರ್‌ಗಳು

   ಶೇಕಡಾವಾರು ರೂಮರ್‌ಗಳು

   ಕಾಯಿಲೆ, ಪ್ರಸರಣ ಮತ್ತು ಮರಣಕ್ಕೆ ಸಂಬಂಧಿಸಿದಂತೆ ಶೇ 24, ನಿಯಂತ್ರಣ ಕ್ರಮಗಳ ಕುರಿತು ಶೇ 21, ಚಿಕಿತ್ಸೆ ಹಾಗೂ ಗುಣಮುಖದ ವಿಚಾರವಾಗಿ ಶೇ 19, ಮೂಲ ಸೇರಿದಂತೆ ಕಾಯಿಲೆಯ ಕಾರಣ ಶೇ 15, ಹಿಂಸಾಚಾರ ಶೇ 1 ಮತ್ತು ಇತರೆ ವಿಷಯಗಳಲ್ಲಿ ಶೇ 20ರಷ್ಟು ಸುಳ್ಳು ಸುದ್ದಿಗಳು ಹರಿದಾಡಿವೆ.

   ಭಾರತ ಮುಂಚೂಣಿಯಲ್ಲಿ

   ಭಾರತ ಮುಂಚೂಣಿಯಲ್ಲಿ

   ಭಾರತ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ವದಂತಿಗಳು ಅಧಿಕ ಪ್ರಮಾಣದಲ್ಲಿದ್ದರೆ, ಸಂಚಿನ ಸಿದ್ಧಾಂತಗಳು ಕೂಡ ನಡೆದಿವೆ. ಎರಡನೆಯ ಸ್ಥಾನದಲ್ಲಿರುವ ಅಮೆರಿಕದಲ್ಲಿ ಕಳಂಕ ತರುವ ಚಟುವಟಿಕೆಗಳು ಸಹ ಹೆಚ್ಚಿದೆ. 2019ರ ಡಿಸೆಂಬರ್‌ 31ರಿಂದ 2020ರ ಏಪ್ರಿಲ್ 5ರವರೆಗಿನ ಅವಧಿಯಲ್ಲಿ ಈ ಅಧ್ಯಯನ ನಡೆದಿದೆ. ಸಾಮಾಜಿಕ ವಿಜ್ಞಾನಿಗಳು, ವೈದ್ಯಕೀಯ ಡಾಕ್ಟರ್‌ಗಳು ಮತ್ತು ಬಾಂಗ್ಲಾದೇಶ, ಆಸ್ಟ್ರೇಲಿಯಾ, ಥೈಲ್ಯಾಂಡ್ ಹಾಗೂ ಜಪಾನ್‌ನ ವಿವಿಧ ಸಂಸ್ಥೆಗಳ ಸೋಂಕುತಜ್ಞರ ತಂಡ ಸಂಗ್ರಹಿಸಿ ಪರಾಮರ್ಶಿಸಿದ ಮಾಹಿತಿಗಳನ್ನು ಇಲ್ಲಿ ಬಳಸಲಾಗಿದೆ.

   ವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

   ವಿವಿಧ ಮೂಲಗಳಿಂದ ಸಂಗ್ರಹ

   ವಿವಿಧ ಮೂಲಗಳಿಂದ ಸಂಗ್ರಹ

   ಸತ್ಯಾಂಶ ಪರಿಶೀಲನಾ ಸಂಸ್ಥೆಯ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್, ಆನ್‌ಲೈನ್ ನ್ಯೂಸ್ ಪೇಪರ್‌ಗಳು ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿರುವ ಕೊರೊನಾ ಸಂಬಂಧ ಹೇಳಿಕೆಗಳನ್ನು ಮತ್ತು ಸಾರ್ವಜನಿಕ ಆರೋಗ್ಯದ ಮೇಲಿನ ಅವುಗಳ ಪರಿಣಾಮವನ್ನು ಪರಿಶೀಲಿಸಲಾಗಿದೆ.

   ಗೋಮೂತ್ರ ಕುಡಿದರೆ ಕೊರೊನಾ ಬರೊಲ್ಲ

   ಗೋಮೂತ್ರ ಕುಡಿದರೆ ಕೊರೊನಾ ಬರೊಲ್ಲ

   ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೊರೊನಾ ವೈರಸ್ ಕುರಿತು ಸತ್ಯಾಂಶವಿಲ್ಲದ, ಅಧಿಕೃತ ಮೂಲಗಳಿಲ್ಲದ ಹೇಳಿಕೆಗಳನ್ನು ರೂಮರ್ ಎಂದು ವ್ಯಾಖ್ಯಾನಿಸಲಾಗಿದೆ. ಕೊರೊನಾ ವೈರಸ್ ಒಂದು ಹಾವಿನ ಫ್ಲೂ, ಮೊಬೈಲ್ ಫೋನ್‌ಗಳು ವೈರಸ್ ಹರಡುತ್ತವೆ, ಹಸುವಿನ ಗಂಜಲ ಮತ್ತು ಸಗಣಿ ಕೊರೊನಾ ವೈರಸ್ ಗುಣಪಡಿಸಬಲ್ಲದು ಎಂಬಂತಹ ವದಂತಿ ಹರಿದಾಡಿದ್ದವು. ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ಹಪ್ಪಳ ತಿಂದರೆ ಕೊರೊನಾ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಬಳಿಕ ಅವರೂ ಸೋಂಕಿಗೆ ತುತ್ತಾಗಿದ್ದು ದೃಢಪಟ್ಟಿತ್ತು.

   ಆಲ್ಕೋಹಾಲ್, ಸ್ಯಾನಿಟೈಸರ್ ಕುಡಿದು ಸಾವು

   ಆಲ್ಕೋಹಾಲ್, ಸ್ಯಾನಿಟೈಸರ್ ಕುಡಿದು ಸಾವು

   ಆರೋಗ್ಯ ಕಾರ್ಯಕರ್ತರು, ಏಷ್ಯಾ ಮೂಲದ ಜನರು, ಕ್ವಾರೆಂಟೈನ್‌ನಲ್ಲಿರುವ ಜನರ ಮೇಲೆ ಮತ್ತು ವುಹಾನ್‌ನಿಂದ ಸ್ಥಳಾಂತರಗೊಂಡ ವ್ಯಕ್ತಿಗಳ ಮೇಲೆ ದೈಹಿಕ ಕಿರುಕುಳ ಮತ್ತು ಹಿಂಸಾಚಾರದಂತಹ ಘಟನೆಗಳು ವರದಿಯಾಗಿವೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ತಪ್ಪು ತಿಳಿವಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗಿವೆ. ಹಾಗೆಯೇ ಅಧಿಕ ಸಾಂದ್ರತೆಯ ಆಲ್ಕೋಹಾಲ್ ಕೊರೊನಾ ವೈರಸ್ ಕೊಲ್ಲುತ್ತದೆ ಎಂದು ನಂಬಿ ಕುಡಿದು ಜಗತ್ತಿನಾದ್ಯಂತ 800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

   English summary
   A Study says India, US and China are on the top in speading misinformation, rumours, stigma and conspiracy theories related to coronavirus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X