ಹೊರಬಿತ್ತು ಮತ್ತೊಂದು ಸಮೀಕ್ಷೆ:ಎಲ್ಲಿ ನೋಡಿದರಲ್ಲಿ ’ಕಮಲ’
ನವದೆಹಲಿ, ನ 12: ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಸಿಎನ್ಎನ್ - ಐಬಿಎನ್ ನಡೆಸಿದ ಸಮೀಕ್ಷೆಗಿಂತ ಭಿನ್ನವಾಗಿರುವ ಈ ಸಮೀಕ್ಷೆಯಲ್ಲಿ ಬಿಜೆಪಿ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಮೇಲುಗೈ ಸಾಧಿಸಲಿದೆ. (CNN - IBN ಚುನಾವಣಾಪೂರ್ವ ಸಮೀಕ್ಷೆ: ಹ್ಯಾಟ್ರಿಕ್ ಸಾಧನೆಯತ್ತ ಬಿಜೆಪಿ)
ಅಸೆಂಬ್ಲಿ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಾದ ಛತ್ತೀಗಢ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಮಿಜೋರಾಂ ಪೈಕಿ ಮಿಜೋರಾಂ ಹೊರತು ಪಡಿಸಿ ಇಂಡಿಯಾ ಟುಡೆ - ಓಆರ್ಜಿ (ORG) ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಎರಡು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡರೆ ಇನ್ನೆರಡು ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೇರಲಿದೆ.
ಕಳೆದ ಎರಡು ವರ್ಷಗಳಲ್ಲಿನ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ, ಭ್ರಷ್ಟಾಚಾರ, ಸಾಲು ಸಾಲು ಹಗರಣಗಳಿಂದ ಮತದಾರ ಕಾಂಗ್ರೆಸ್ ನಿಂದ ದೂರ ಸರಿಯುತ್ತಿದ್ದು, ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾನೆಂದು ಸರ್ವೇಯಲ್ಲಿ ಹೇಳಲಾಗಿದೆ.
ಇದರ ಜೊತೆಗೆ ಈ ನಾಲ್ಕೂ ರಾಜ್ಯಗಳಲ್ಲಿ ನರೇಂದ್ರ ಮೋದಿ ವರ್ಚಸ್ಸು ಮತದಾರರಲ್ಲಿ ಸಾಕಷ್ಟು ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗುತ್ತಿದೆ. ಹೀಗಾಗಿ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಸಿಗಲಿದೆ ಎನ್ನುತ್ತದೆ ಇಂಡಿಯಾ ಟುಡೆ ಸರ್ವೇ.
ಸರ್ವೇ ಫಲಿತಾಂಶ ಸ್ಲಡಿನಲ್ಲಿ...

ಯಾರು ಉತ್ತಮ ಮುಖ್ಯಮಂತ್ರಿ?
ಮಧ್ಯಪ್ರದೇಶ: ಶಿವರಾಜ್ ಸಿಂಗ್ (ಬಿಜೆಪಿ). ನಂತರದ ಸ್ಥಾನ ಜ್ಯೋತಿರಾದಿತ್ಯ ಸಿಂಧ್ಯಾ, ದಿಗ್ವಿಜಯ್ ಸಿಂಗ್ , ಕಮಲನಾಥ್ (ಎಲ್ಲಾ ಕಾಂಗ್ರೆಸ್)
ದೆಹಲಿ: ಶೀಲಾ ದೀಕ್ಷಿತ್ (ಕಾಂಗ್ರೆಸ್) ನಂತರದ ಸ್ಥಾನ ಅರವಿಂದ್ ಕೇಜ್ರಿವಾಲ್ (ಆಮ್ ಆದ್ಮಿ), ಡಾ.ಹರ್ಷವರ್ಧನ್ ಮತ್ತು ವಿಜಯ್ ಗೋಯಲ್ (ಬಿಜೆಪಿ)
ರಾಜಸ್ಥಾನ : ಅಶೋಕ್ ಗೆಹ್ಲೋಟ್ (ಕಾಂಗ್ರೆಸ್), ನಂತರದ ಸ್ಥಾನ ವಸುಂಧರರಾಜೇ (ಬಿಜೆಪಿ)
ಛತ್ತೀಸಗಢ : ಡಾ.ರಮಣ್ ಸಿಂಗ್ (ಬಿಜೆಪಿ), ನಂತರದ ಸ್ಥಾನ ಅಜಿತ್ ಜೋಗಿ (ಕಾಂಗ್ರೆಸ್)

ಮಧ್ಯಪ್ರದೇಶ
ಮಧ್ಯಪ್ರದೇಶ (ಆವರಣದಲ್ಲಿ ಹಾಲಿ ಬಲಾಬಲ)
ಒಟ್ಟು ಸ್ಥಾನಗಳು : 230
ಬಿಜೆಪಿ : 143 (143)
ಕಾಂಗ್ರೆಸ್: 78 (71)
ಇತರರು: 9 (16)

ರಾಜಸ್ಥಾನ
ರಾಜಸ್ಥಾನ (ಆವರಣದಲ್ಲಿ ಹಾಲಿ ಬಲಾಬಲ)
ಒಟ್ಟು ಸ್ಥಾನಗಳು : 200
ಬಿಜೆಪಿ : 105 (78)
ಕಾಂಗ್ರೆಸ್: 76 (96)
ಇತರರು: 19 (26)

ದೆಹಲಿ
ದೆಹಲಿ (ಆವರಣದಲ್ಲಿ ಹಾಲಿ ಬಲಾಬಲ)
ಒಟ್ಟು ಸ್ಥಾನಗಳು : 70
ಬಿಜೆಪಿ : 36 (23)
ಕಾಂಗ್ರೆಸ್: 22 (43)
ಆಮ್ ಆದ್ಮಿ : 8 (0)
ಇತರರು: 4 (4)

ಛತ್ತೀಸಗಢ
ಛತ್ತೀಸಗಢ (ಆವರಣದಲ್ಲಿ ಹಾಲಿ ಬಲಾಬಲ)
ಒಟ್ಟು ಸ್ಥಾನಗಳು : 90
ಬಿಜೆಪಿ : 46 (50)
ಕಾಂಗ್ರೆಸ್: 42 (38)
ಇತರರು: 2 (2)












Click it and Unblock the Notifications