ಕೊರೊನಾ ವೈರಸ್‌ಗೆ ಆಯುರ್ವೇದ ಔಷಧ: 1 ವಾರದಲ್ಲಿ ಪ್ರಯೋಗ ಆರಂಭ

ನವದೆಹಲಿ, ಮೇ 14: ಕೊರೊನಾ ವೈರಸ್ ಭಾರತದಲ್ಲಿಯೂ ಮರಣಮೃದಂಗ ಬಾರಿಸುತ್ತಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುವ 4 ರೀತಿ ಆಯುರ್ವೇದ ಔಷಧವನ್ನು ಸಂಶೋಧಿಸಲಾಗುತ್ತಿದೆ.

ಇನ್ನೊಂದು ವಾರದಲ್ಲಿ ಪ್ರಯೋಗ ಆರಂಭವಾಗುತ್ತದೆ ಎಂದು ಆಯುಷ್ ಮಂತ್ರಿ ಟ್ವೀಟ್ ಮಾಡಿದ್ದಾರೆ.ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ದೇಶದ ಸಾಂಪ್ರದಾಯಿಕ ಔಷಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ಲಾಸ್ಮಾ ಥೆರಪಿ ಕೂಡ ಉತ್ತಮ ಮಾರ್ಗವಾಗಿದೆ. ಕೊರೊನಾದಿಂದ ಗುಣಮುಖರಾದವರ ರಕ್ತವನ್ನು ಕೊರೊನಾ ಸೋಂಕಿತ ವ್ಯಕ್ತಿಗೆ ಕೊಡುವುದರಿಂದ ವೈರಸ್‌ನಿಂದ ಗುಣಮುಖರಾಗಲಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆ ಕೊರೊನಾ ವೈರಸ್‌ಗೆ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಾಲ್ಕು ರೀತಿಯ ಆಯುರ್ವೇದ ಔಷಧ

ನಾಲ್ಕು ರೀತಿಯ ಆಯುರ್ವೇದ ಔಷಧ

ನಾಲ್ಕು ಬಗೆಯ ಆಯುರ್ವೇದ ಔಷಧವನ್ನು @moayush ಹಾಗೂ @CSRI_IND ಜೊತೆಗೂಡಿ ಸಂಶೋಧನೆ ನಡೆಸುತ್ತಿವೆ. ಒಂದೇ ವಾರದಲ್ಲಿ ಪ್ರಯೋಗ ಆರಂಭವಾಗಲಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಗುಣಮುಖರಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.

ಸಿಎಸ್ಆರ್‌ಐ ಕುರಿತು ಮಾಹಿತಿ

ಸಿಎಸ್ಆರ್‌ಐ ಕುರಿತು ಮಾಹಿತಿ

ಕೌನ್ಸಿಲ್ ಆಫ್ ಸೈಂಟಿಫಿಕ್ ರಿಸರ್ಚ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಹಾಗೂ ಆಯುಷ್ ಸಚಿವಾಲಯವು ಸಾಮಪ್ರದಾಯಿಕ ಔಷಧದ ಪ್ರಯೋಗ ನಡೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದು ಸಾರ್ವಜನಿಕ ಧನಸಹಾಯ ಪಡೆದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ.

ಸಾಂಪ್ರದಾಯಿಕ ಔಷಧ ಪದ್ಧತಿ ಬಗ್ಗೆ ನಂಬಿಕೆ ಇದೆ

ಸಾಂಪ್ರದಾಯಿಕ ಔಷಧ ಪದ್ಧತಿ ಬಗ್ಗೆ ನಂಬಿಕೆ ಇದೆ

ಸಾಂಪ್ರದಾಯಿಕ ಔಷಧ ಪದ್ಧತಿಯಿಂದ ಕೊರೊನಾ ವೈರಸ್ ನಿವಾರಣೆ ಸಾಧ್ಯ ಎಂದು ನಾನು ನಂಬಿದ್ದೇನೆ, ಉತ್ತಮ ಮಾರ್ಗವನ್ನು ತೋರಿಸುತ್ತದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಹಿಂದೆಂದೂ ಕಂಡಿರದ ವೈರಸ್

ಹಿಂದೆಂದೂ ಕಂಡಿರದ ವೈರಸ್

ಕೊರೊನಾ ಹಿಂದೆಂದೂ ಕಂಡಿರದ ವೈರಸ್ ಆಗಿದೆ. ಇಂಗ್ಲಿಷ್ ಔಷಧ ಜೊತೆಗೆ ಆಯುರ್ವೇದ ಔಷಧವನ್ನೂ ಕೂಡ ನೀಡುವ ಕುರಿತು ಸಂಶೋಧನೆ ನಡೆಯುತ್ತಿದೆ. ಬೇರೆ ಬೇರೆ ರೀತಿಯ ಔಷಧ ಸಂಶೋಧನೆಯೂ ನಡೆಯುತ್ತಿದೆ ಆದರೆ ಆಯರ್ವೇದ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ನಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+