ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಟೂ ಬಾಂಗ್ಲಾದೇಶ ಬಸ್‌ ಸೇವೆ ಪುನಾರಂಭ

|
Google Oneindia Kannada News

ಅಗರ್ತಲಾ, ಜೂ. 10: ಎರಡು ವರ್ಷಗಳ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಸ್ ಸೇವೆ ಶುಕ್ರವಾರ ಪುನರಾರಂಭವಾಗಿದೆ. ತ್ರಿಪುರ ಸಾರಿಗೆ ಸಚಿವ ಪ್ರಣಜಿತ್ ಸಿಂಘ ಅವರು ಅಖೌರಾದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಬಸ್ ಸೇವೆಗೆ ಚಾಲನೆ ನೀಡಿದರು.

ಫೇಸ್ ಬುಕ್ ಪ್ರೀತಿಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿಕೊಂಡು ಬಂದ ಮಹಿಳೆಫೇಸ್ ಬುಕ್ ಪ್ರೀತಿಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಈಜಿಕೊಂಡು ಬಂದ ಮಹಿಳೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಗಡಿಯಾಚೆಗಿನ ಬಸ್ ಸೇವೆಯು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಹಕಾರವನ್ನು ಹೆಚ್ಚಿಸುತ್ತದೆ ಎಂದರು. ಢಾಕಾ ಮೂಲಕ ಅಗರ್ತಲಾ- ಕೋಲ್ಕತ್ತಾ 40 ಆಸನಗಳ ಬಸ್ ಸೇವೆಯು ಒಟ್ಟಾರೆಯಾಗಿ 28 ಪ್ರಯಾಣಿಕರನ್ನು ಹೊಂದಿತ್ತು. ವಾರದಲ್ಲಿ ಆರು ದಿನಗಳ ಕಾಲ ಬಸ್‌ ಸೇವೆ ಲಭ್ಯವಿರುತ್ತದೆ. ಈ ಬಸ್ ಸುಮಾರು 19 ಗಂಟೆಗಳಲ್ಲಿ ಅಗರ್ತಲಾದಿಂದ ಢಾಕಾ ಮೂಲಕ ಕೋಲ್ಕತ್ತಾಗೆ ಸುಮಾರು 500 ಕಿಮೀ ದೂರವನ್ನು ಕ್ರಮಿಸುತ್ತದೆ. ಗುವಾಹಟಿ ಮೂಲಕ ಎರಡು ಸ್ಥಳಗಳ ನಡುವಿನ ರೈಲು ಪ್ರಯಾಣವು ಸುಮಾರು 35 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗವು 2020 ರ ಮಾರ್ಚ್‌ನಲ್ಲಿ ಈ ಬಸ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.

India to Bangladesh Bus Service Restarted

ಅಗರ್ತಲಾದಿಂದ ಢಾಕಾ ಮೂಲಕ ಕೋಲ್ಕತ್ತಾಗೆ ಪ್ರಯಾಣದ ತೆರಿಗೆ ಸೇರಿದಂತೆ ಪ್ರತಿ ಪ್ರಯಾಣಿಕರಿಗೆ 2,300 ರುಪಾಯಿಗಳಾಗಿದ್ದು, ತ್ರಿಪುರಾ ರಾಜಧಾನಿಯಿಂದ ಢಾಕಾಕ್ಕೆ 1,000 ರೂಪಾಯಿ ಇದೆ. ನೆರೆಯ ಅಸ್ಸಾಂನಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ದೂರದ ರೈಲುಗಳ ರದ್ದತಿ ಮತ್ತು ವಿಮಾನಗಳಿಗೆ ಹೆಚ್ಚಿನ ಬೇಡಿಕೆಯ ಪರಿಣಾಮವಾಗಿ ವಿಮಾನ ದರದಲ್ಲಿ ತೀವ್ರ ಹೆಚ್ಚಳದ ಹಿನ್ನೆಲೆಯಲ್ಲಿ ನೇರ ಬಸ್ ಸೇವೆಯು ಜನರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಪ್ರಣಜಿತ್ ಸಿಂಘ ಹೇಳಿದರು.

India to Bangladesh Bus Service Restarted

ಮುಂದಿನ ದಿನಗಳಲ್ಲಿ ಬಸ್ ಸಂಚಾರ ಪುನರಾರಂಭಗೊಳ್ಳುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ವಿದೇಶಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗಡಿಯಾಚೆಗಿನ ಮಾರ್ಗದಲ್ಲಿ ಬಸ್ಸುಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ದೇಶದ ಇತರ ಭಾಗಗಳೊಂದಿಗೆ ರಾಜ್ಯದ ಸಂಪರ್ಕ ಸುಧಾರಿಸಿದೆ ಎಂದು ಅವರು ರಾಯ್‌ ಪ್ರತಿಪಾದಿಸಿದರು.

(ಒನ್ಇಂಡಿಯಾ ಸುದ್ದಿ)

English summary
Bus service between India and Bangladesh resumed on Friday after two years. Tripura Transport Minister Pranajit Singha has launched an international bus service between India and Bangladesh at the check post in Akhaura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X