ಯುದ್ಧ ನೌಕೆಗಳನ್ನು ಧ್ವಂಸಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ,ಡಿಸೆಂಬರ್ 1: ಯುದ್ಧನೌಕೆಗಳನ್ನು ಧ್ವಂಸಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತೀಯ ಸೇನೆ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

ಲಡಾಖ್‌ ಗಡಿಯಲ್ಲಿ ನಿತ್ಯ ಒಂದಲ್ಲಾ ಒಂದು ಖ್ಯಾತೆ ತೆಗೆಯುತ್ತಿರುವ ಚೀನಾಗೆ ಭಾರವು ತನ್ನ ಕಾರ್ಯದಿಂದಲೇ ಉತ್ತರವನ್ನು ನೀಡಿದೆ.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ-ಅಭಿವೃದ್ಧಿಪಡಿಸಿರುವ ಈ ಬ್ರಹ್ಮೋಸ್ ಕ್ಷಿಪಣಿಯ ಗುರಿಯ ವ್ಯಾಪ್ತಿಯನ್ನು 298 ಕಿ.ಮೀ ನಿಂದ 450 ಕಿ.ಮೀ.ಗೆ ಹೆಚ್ಚಿಸಲಾಗಿದೆ.

India Testfires Anti-Ship Version Of BrahMos Supersonic Cruise Missile

ಭಾರತ ಹಾಗೂ ರಷ್ಯಾ ಜಂಟಿ ಸಂಶೋಧನೆಯಾದ ಈ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಬ್‌ಮೆರಿನ್, ಹಡಗು, ವಿಮಾನ ಅಥವಾ ಭೂಮಿಯಿಂದಲೂ ಉಡಾಯಿಸಬಹುದಾಗಿದೆ. ಭಾರತ ಸೇನೆ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಹಾಗೂ ಚೀನಾ ನಡುವ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಅಳವಡಿಸಿದೆ. ಲಡಾಖ್, ಅರುಣಾಚಲ ಪ್ರದೇಶ ಸೇರಿದಂತೆ ಹಲವೆಡೆ ಈ ಕ್ಷಿಪಣಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದ್ದು, ಈ ಮಾದರಿಯ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವು ಭಾರತ ಸಾಧಿಸಿದ ಅತಿದೊಡ್ಡ ಮೈಲುಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದಲ್ಲೇ ಈ ಪ್ರಯೋಗ ನಡೆದಿತ್ತು. ಇದೀಗ ಇದೇ ದ್ವೀಪ ಸಮೂಹದಲ್ಲೇ ಹಡಗು ನಿರೋಧಕ ಕ್ಷಿಪಣಿಗಳನ್ನು ಉಡಾಯಿಸಿ ನೌಕಾಪಡೆ ಯಶಸ್ವಿಯಾಗಿದೆ.

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರತೀಯ ನೌಕಾ ಪಡೆ ಈ ಪ್ರಯೋಗವನ್ನು ನಡೆಸಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಳೆದ ವಾರವಷ್ಟೇ ಭಾರತ ಬ್ರಹ್ಮೋಸ್‌ ಸೂಪರ್‌ ಸಾನಿಕ್ ಕ್ಷಿಪಣಿಗಳ 'ಲೈವ್ ಆಪರೇಷನಲ್ ಫೈರಿಂಗ್' ನಡೆಸಿ ಯಶಸ್ವಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+