ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಲಸಿಕೆ ಸಾಮರ್ಥ್ಯ ಪ್ರಬಲವಾಗಿದೆ: ವಿಶ್ವಸಂಸ್ಥೆಗೆ ಭಾರತದ ಮಾಹಿತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಬ್ರಿಟನ್ ಬಳಿಕ ಫೈಜರ್-ಬಯೋಎನ್‌ಟೆಕ್‌ನ ಲಸಿಕೆಯ ಬಳಕೆಯನ್ನು ಅಮೆರಿಕ ಮತ್ತು ಕೆನಡಾಗಳು ಆರಂಭಿಸಿವೆ. ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಫೈಜರ್ ಲಸಿಕೆಯನ್ನು ನೀಡುವ ಕಾರ್ಯವನ್ನು ಅಮೆರಿಕ ಮತ್ತು ಕೆನಡಾಗಳು ಶುರುಮಾಡಿವೆ.

ಈ ನಡುವೆ ತನ್ನ ಬೃಹತ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಸಾಮರ್ಥ್ಯವು ಕೊರೊನಾ ವೈರಸ್ ಬಿಕ್ಕಟ್ಟನ್ನು ಎದುರಿಸಲು ಜಗತ್ತಿಗೆ ನೆರವಾಗಲಿದೆ. ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಲ್ಲಿ ಇತರೆ ದೇಶಗಳಿಗೂ ಭಾರತ ನೆರವಾಗುತ್ತಿದೆ ಎಂದು ವಿಶ್ವಸಂಸ್ಥೆಗೆ ಭಾರತ ಸರ್ಕಾರ ತಿಳಿಸಿದೆ.

ಬ್ರಿಟನ್‌ನಲ್ಲಿ ಕೋವಿಡ್‌ನ ಹೊಸ ತಳಿಯಿಂದ ಹೆಚ್ಚಿದ ಆತಂಕಬ್ರಿಟನ್‌ನಲ್ಲಿ ಕೋವಿಡ್‌ನ ಹೊಸ ತಳಿಯಿಂದ ಹೆಚ್ಚಿದ ಆತಂಕ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕಾಸ್ ಸ್ವರೂಪ್, 'ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವು ಈ ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಮನುಕುಲಕ್ಕೆ ಸಹಾಯವಾಗುವಂತೆ ಬಳಕೆಯಾಗಲಿದೆ. ಇತರೆ ಎಲ್ಲ ದೇಶಗಳಿಗೂ ತಮ್ಮ ಶೈತ್ಯೀಕರಿಸಿದ ವ್ಯವಸ್ಥೆ ಮತ್ತು ಸಂಗ್ರಹ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಲು ಕೂಡ ಭಾರತ ನೆರವು ನೀಡುತ್ತಿದೆ' ಎಂದು ತಿಳಿಸಿದರು.

India Tells United Nations Its Vaccine Capacity Will Be Used To Help Fight Crisis

'ಭಾರತವು ಆರೋಗ್ಯ ಭದ್ರತೆಯ ಪ್ರಮುಖ ಸೇವಾದಾರನಾಗಿ ಬೆಳೆದಿದೆ. ಜಗತ್ತಿನ ಔಷಧ ಕ್ಷೇತ್ರದ ಜವಾಬ್ದಾರಿಯನ್ನು ಯಶಸ್ವಿಯಾಗಿ ತನ್ನ ಹೆಗಲ ಮೇಲೆ ಇರಿಸಿಕೊಂಡಿದೆ. ಸುಮಾರು 150 ಪಾಲುದಾರ ದೇಶಗಳಿಗೆ ಔಷಧಗಳು ಮತ್ತು ಔಷಧೀಯ ವಸ್ತುಗಳ ಪೂರೈಕೆಯನ್ನು ಮಾಡುತ್ತಿದೆ' ಎಂದು ಹೇಳಿದರು.

ಅಮೆರಿಕದಲ್ಲಿ ನ್ಯೂಯಾರ್ಕ್‌ನ ದಾದಿಯೊಬ್ಬರು ದೇಶದ ಮೊದಲ ಫೈಜರ್ ಲಸಿಕೆಯನ್ನು ಪಡೆದುಕೊಂಡರು. ಹಲವು ತಿಂಗಳ ಕಾಲ ಕೋವಿಡ್ 19ರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ದಾದಿ ಸಂಡ್ರಾ ಲಿಂಡ್ಸೆ ಅವರಿಗೆ ಸೋಮವಾರ ಫೈಜರ್ ಲಸಿಕೆ ನೀಡಲಾಯಿತು. ಈ ಪ್ರಕ್ರಿಯೆಗೆ ಗವರ್ನರ್ ಸೇರಿದಂತೆ ಅನೇಕರು ನೇರ ಪ್ರಸಾರದಲ್ಲಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ರಷ್ಯಾದ ಕೋವಿಡ್ ಲಸಿಕೆ 'ಸ್ಪುಟ್ನಿಕ್ ವಿ' ಶೇ. 91.4ರಷ್ಟು ಪರಿಣಾಮಕಾರಿ!ರಷ್ಯಾದ ಕೋವಿಡ್ ಲಸಿಕೆ 'ಸ್ಪುಟ್ನಿಕ್ ವಿ' ಶೇ. 91.4ರಷ್ಟು ಪರಿಣಾಮಕಾರಿ!

ಕೆನಡಾದಲ್ಲಿ ಟೊರಾಂಟೋದ ವೃದ್ಧಾಶ್ರಮದ ಲಾಭರಹಿತ ನರ್ಸಿಂಗ್ ಹೋಮ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಅನಿತಾ ಕ್ಯುಡಂಗೆನ್ ಅವರಿಗೆ ಫೈಜರ್‌ನ ಮೊದಲ ಲಸಿಕೆ ನೀಡಲಾಯಿತು. ಇದನ್ನು ಟಿವಿಗಳಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

English summary
India informed the United Nations that its vaccine capacity will be used to help humanity in fighting this crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X