ಅಗ್ನಿ-ಪಿ ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ: ಮಾಹಿತಿ
ದೇಶವು ಅಗ್ನಿ-ಪಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಬಾಲಾಸೋರ್‌ನ ಕರಾವಳಿಯಲ್ಲಿ ಶನಿವಾರ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಅಗ್ನಿ-ಪಿ ಅಗ್ನಿ ವರ್ಗದ ಕ್ಷಿಪಣಿಗಳ ಹೊಸ ಪೀಳಿಗೆಯ ಸುಧಾರಿತ ರೂಪಾಂತರವಾಗಿದೆ. ಇದು 1,000 ಮತ್ತು 2,000 ಕಿಮೀ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಯಾನಿಸ್ಟರೈಸ್ಡ್ ಕ್ಷಿಪಣಿಯಾಗಿದೆ. ಕ್ಷಿಪಣಿಯ ಚಲನೆಯನ್ನು ಪರಿಶೀಲಿಸಲು ಹಾಗೂ ನಿಗಾ ವಹಿಸಲು ಪೂರ್ವ ಕರಾವಳಿಯ ಉದ್ದಕ್ಕೂ ವಿವಿಧ ದೂರಸ್ಥಮಾಪಕ ಮತ್ತು ರೇಡಾರ್ ಸ್ಟೇಷನ್‌ಗಳನ್ನು ಅಳವಡಿಸಲಾಗಿದೆ.
ಅತ್ಯಧಿಕ ಮಟ್ಟದ ನಿಖರತೆಯೊಂದಿಗೆ ಕ್ಷಿಪಣಿ ಪರೀಕ್ಷೆಯು ತನ್ನ ಎಲ್ಲಾ ಯೋಜನಾ ಧ್ಯೇಯೋದ್ದೇಶಗಳನ್ನು ಈಡೇರಿಸಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಅಗ್ನಿ ಪ್ರೈಮ್ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಬಾಲಸೋರ್‌ನ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಪರಮಾಣು ಸಾಮರ್ಥ್ಯದ ಕಾರ್ಯತಂತ್ರದ ಕ್ಷಿಪಣಿ ಅಗ್ನಿ ಪ್ರೈಮ್‌ಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ.
"ಕ್ಷಿಪಣಿ ಪರೀಕ್ಷೆಯು ಅದರ ಎಲ್ಲಾ ಮಿಷನ್ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ" ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ. ಮೊದಲ ಪರೀಕ್ಷೆಯನ್ನು ಜೂನ್ 28 ರಂದು ಅದೇ ಸ್ಥಳದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಶಸ್ವಿ ಹಾರಾಟ ಪರೀಕ್ಷೆಗಾಗಿ ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO) ಯನ್ನು ಅಭಿನಂದಿಸಿದರು ಮತ್ತು ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಅಗ್ನಿ-ಪಿ ಇದು ಅಗ್ನಿ ದರ್ಜೆಯ ಕ್ಷಿಪಣಿಗಳಲ್ಲಿನ ಹೊಸ ಪೀಳಿಗೆಯ ಆಧುನಿಕ ಪ್ರಭೇದವಾಗಿದೆ. ಇದು ಎರಡು ಹಂತಗಳ ಸಣ್ಣ ಕಂಟೇನರ್‌ಗಳ ಘನವಾದ ಖಂಡಾಂತರ ಕ್ಷಿಪಣಿಯಾಗಿದ್ದು, ಡ್ಯುವಲ್ ರೆಡುಂಡಂಟ್ ನೇವಿಗೇಷನ್ ಮತ್ತು ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ರೈಲು ಮತ್ತು ರಸ್ತೆಯಿಂದಲೂ ಉಡಾವಣೆ ಮಾಡಬಹುದಾಗಿದೆ.
ಅಷ್ಟೇ ಅಲ್ಲದೆ, ಸುದೀರ್ಘ ಅವಧಿಯವರೆಗೆ ಸಂಗ್ರಹಿಸಿ ಇರಿಸಬಹುದಾಗಿದೆ. ಅಗತ್ಯಕ್ಕೆ ತಕ್ಕಂತೆ ಇದನ್ನು ದೇಶದ ಉದ್ದಗಲಕ್ಕೂ ಸಾಗಿಸಬಹುದಾಗಿದೆ. ಕ್ಷಿಪಣಿಯ ಉಡಾವಣೆ ವೇಳೆ ಬೇಕಾಗುವ ಸಮಯವನ್ನು ತಗ್ಗಿಸಲು, ಅದರ ಸಂಗ್ರಹಣೆ ಹಾಗೂ ಚಲನೆಶೀಲತೆಗಳನ್ನು ಸುಧಾರಿಸುವಂತೆ ಇದನ್ನು ರೂಪಿಸಲಾಗಿದೆ.
ಟೆಲಿಮೆಟ್ರಿ, ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಸ್ಟೇಷನ್‌ಗಳು ಮತ್ತು ಡೌನ್‌ರೇಂಜ್ ಹಡಗುಗಳು ಪೂರ್ವ ಕರಾವಳಿಯುದ್ದಕ್ಕೂ ಕ್ಷಿಪಣಿ ಪಥ ಮತ್ತು ಪ್ಯಾರಾಮೀಟರ್‌ಗಳನ್ನು ಟ್ರ್ಯಾಕ್ ಮಾಡಿದ್ದೂ ಮೇಲ್ವಿಚಾರಣೆ ನಡೆಸಿವೆ. ಕ್ಷಿಪಣಿಯು ಯೋಜನೆಯಂತೆ ಸರಿಯಾದ ಪಥವನ್ನು ಅನುಸರಿಸಿತು, ಉನ್ನತ ಮಟ್ಟದ ನಿಖರತೆಯೊಂದಿಗೆ ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸಿದೆ, "ಎಂದು DRDO ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಯು ಅಗ್ನಿ 3 ಗಿಂತ 50 ಪ್ರತಿಶತ ಕಡಿಮೆ ತೂಗುತ್ತದೆ ಮತ್ತು ರೈಲು ಮತ್ತು ರಸ್ತೆಯಿಂದ ಉಡಾವಣೆ ಮಾಡಬಹುದು. ಜತೆಗೆ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಮತ್ತು ಕಾರ್ಯಾಚರಣೆಯ ಅಗತ್ಯತೆಗಳಿಗೆ ಅನುಗುಣವಾಗಿ ದೇಶಾದ್ಯಂತ ಸಾಗಿಸಬಹುದು.
ಡಿಸೆಂಬರ್ 7 ರಂದು, ದೇಶವು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ವಾಯು ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು, ಇದನ್ನು ರಕ್ಷಣಾ ಸಚಿವಾಲಯವು ಬ್ರಹ್ಮೋಸ್ ಅಭಿವೃದ್ಧಿಯಲ್ಲಿ 'ಪ್ರಮುಖ ಮೈಲಿಗಲ್ಲು' ಎಂದು ಬಣ್ಣಿಸಿದೆ.
ಅಗ್ನಿ ಪ್ರೈಮ್ ಕ್ಷಿಪಣಿ ಬಗ್ಗೆ ಕೆಲವು ಮಾಹಿತಿ
*ಅಗ್ನಿ ಪಿ ಡಿಆರ್‌ಡಿಒ ಉಡಾವಣೆ ಮಾಡಿರುವ ಅಗ್ನಿ ಕ್ಷಿಪಣಿಯ ಹೊಸ ವರ್ಗದ ಮೊದಲನೆಯ ಕ್ಷಿಪಣಿಯಾಗಿದೆ. ಇದು ಅಗ್ನಿ 3 ಗಿಂತ ಶೇಕಡಾ 50 ರಷ್ಟು ಕಡಿಮೆ ತೂಗುತ್ತದೆ ಮತ್ತು ಹೊಸ ಮಾರ್ಗದರ್ಶನ ಮತ್ತು ಹೊಸ ತಲೆಮಾರನ ಪ್ರೊಪಲ್ಷನ್ ಹೊಂದಿದೆ.
*ಅಗ್ನಿ ಪಿ ಅನ್ನು ಡಬ್ಬಿಯಲ್ಲಿ ಹಾಕಲಾಗಿರುವುದರಿಂದ, ಇದನ್ನು ರೈಲು ಮತ್ತು ರಸ್ತೆಯಿಂದ ಉಡಾವಣೆ ಮಾಡಬಹುದು. ಇದನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಬಹುದು ಮತ್ತು ಕಾರ್ಯಾಚರಣೆಯ ಅಗತ್ಯತೆಗಳ ಪ್ರಕಾರ ದೇಶಾದ್ಯಂತ ಸಾಗಿಸಬಹುದು.
*DRDO ಪ್ರಕಾರ, ಇದು ಡ್ಯುಯಲ್ ರಿಡಂಡೆಂಟ್ ನ್ಯಾವಿಗೇಷನ್ ಮತ್ತು ಗೈಡೆನ್ಸ್ ವ್ಯವಸ್ಥೆಯನ್ನು ಹೊಂದಿರುವ ಎರಡು-ಹಂತದ ಕ್ಯಾನಿಸ್ಟರೈಸ್ಡ್ ಸಾಲಿಡ್-ಪ್ರೊಪೆಲ್ಲೆಂಟ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ.
4 ಸಾವಿರ ಕಿಮೀ ಸಾಮರ್ಥ್ಯದ ಅಗ್ನಿ-4 ಮತ್ತು 5 ಸಾವಿರ ಕಿಮೀ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿಗಳಲ್ಲಿ ಇರುವ ತಂತ್ರಜ್ಞಾನಗಳು ಇದರಲ್ಲಿವೆ. ಇಂಡೋ-ಪೆಸಿಫಿಕ್‌ನಲ್ಲಿ ಶತ್ರುಗಳ ಯುದ್ಧನೌಕೆಗಳನ್ನು ಗುರಿಯಾಗಿಸಲು ಅಗ್ನಿ ಪಿ ಕ್ಷಿಪಣಿಯನ್ನು ಬಳಸಬಹುದಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-ಪಿ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದೇ ಜೂನ್ 28ರಂದು ಮೊದಲು ಯಶಸ್ವಿಯಾಗಿ ಪ್ರಯೋಗಿಸಿತ್ತು. ಡಿಸೆಂಬರ್ 7ರಂದು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ವಾಯು ಆವೃತ್ತಿಯನ್ನು ಕೂಡ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.












Click it and Unblock the Notifications