• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗತಿಕ ಪ್ರಜಾಪ್ರಭುತ್ವ ಸ್ಥಾನದಲ್ಲಿ ಹಿಂಬಡ್ತಿ ಪಡೆದ ಭಾರತ

|

ನವದೆಹಲಿ, ಜನವರಿ 23: ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರ ಎನಿಸಿಕೊಂಡಿರುವ ಭಾರತವು ಜಾಗತಿಕ ಪ್ರಜಾಪ್ರಭುತ್ವ ಯಾದಿಯಲ್ಲಿ 51 ನೇ ಸ್ಥಾನಕ್ಕೆ ಕುಸಿದಿದೆ.

ಇದಲ್ಲದೆ ಅಂಕ ಶ್ರೇಣಿಯಲ್ಲಿ ದೋಷಪೂರಿತ ಪ್ರಜಾಪ್ರಭುತ್ವ ಎನ್ನುವ ಪಟ್ಟಿಗೆ ಸೇರಿಕೊಂಡಿದೆ. ಎಕನಾಮಿಸ್ಟ್‌ ಇಂಟಲಿಜೆನ್ಸ್ ಯೂನಿಟ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ.

ಜಮ್ಮು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದತಿ ಬಳಿಕದ ಪರಿಸ್ಥಿತಿ ಹಾಗೂ ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ವಿಚಾರಗಳ ಪ್ರತಿಭಟನೆಗಳು ಈ ಸ್ಥಾನಗಳ ಕುಸಿತಕ್ಕೆ ಕಾರಣವಾಗಿದೆ.

ಒಟ್ಟು 10 ಅಂಕಗಳಲ್ಲಿ ಭಾರತ 6.9 ಅಂಕವನ್ನು ಪಡೆದಿದೆ. 2006ರಿಂದ ಈ ಪಟ್ಟಿ ಬಿಡುಗಡೆಯಾಗುತ್ತಿದ್ದು, ಇದು ಭಾರತದ ಅತಿ ಕಡಿಮೆ ಅಂಕವಾಗಿದೆ. ಈ ಹಿಂದಿನ ವರ್ಷ ಭಾರತವು 7.23 ಅಂಕವನ್ನು ಹೊಂದಿತ್ತು.

ಸುಮಾರು 167 ದೇಶಗಳನ್ನು ಒಳಗೊಂಡು ಈ ಪಟ್ಟಿ ತಯಾರಿಸಲಾಗಿದ್ದು, ಸರ್ಕಾರಗಳಿಗೆ ಮೂರು ರೀತಿಯ ಪ್ರತ್ಯೇಕ ಶ್ರೇಣಿಗಳನ್ನು ನೀಡಲಾಗಿದೆ. ಎಂಟಕ್ಕಿಂತ ಹೆಚ್ಚು ಅಂಕ ಗಳಿಸಿದ್ದಲ್ಲಿ, ಸಂಪೂರ್ಣ ಪ್ರಜಾಪ್ರಭುತ್ವ 6-8 ನಡುವಿನ ಅಂಕ ಹೊಂದಿದ್ದಲ್ಲಿ ದೋಷಪೂರಿತ ಪ್ರಜಾಪ್ರಭುತ್ವ, 4-6 ಅಂಕ ಗಳಿಸಿದ್ದಲ್ಲಿ ಅತಿ ಸಂಕೀರ್ಣ ಪ್ರಜಾಪ್ರಭುತ್ವ ಹಾಗೂ 4ಕ್ಕಿಂತ ಕಡಿಮೆ ಅಂಕ ಹೊಂದಿದ್ದಲ್ಲಿ, ಸರ್ವಾಧಿಕಾರ ವಿಂಗಡಿಸಲಾಗಿಲ್ಲ.

ಭಾರತದ ಅಂಕ ಕುಸಿತಕ್ಕೆ ಕಾರಣವೇನು?

ಭಾರತದ ಅಂಕ ಕುಸಿತಕ್ಕೆ ಕಾರಣವೇನು?

ವರದಿಯಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಕುರಿತು ಯಾವುದೇ ವಿಷಯ ಪ್ರಸ್ತಾಪಿಸಲಾಗಿಲ್ಲ, ಆದರೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಸ್ಥಳೀಯ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿದೆ ಎನ್ನುವುದು ವರದಿಯಲ್ಲಿನ ಪ್ರಮುಖ ಅಂಶವಾಗಿದೆ. ಇದಲ್ಲದೆ ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹತ್ತಾರು ಜನರು ಸಾವನ್ನಪ್ಪಿರುವುದನ್ನು ಕೂಡ ವರದಿ ಗಂಭೀರವಾಗಿ ಪರಿಗಣಿಸಿದೆ. ಇವೆರಡೂ ಅಂಶಗಳಿಂದ ಭಾರತದ ಕೀರ್ತಿ ಕಸಿದುಕೊಂಡಿದೆ.

ಪಾಕಿಸ್ತಾನ ಸ್ಥಾನ ಎಷ್ಟು?

ಪಾಕಿಸ್ತಾನ ಸ್ಥಾನ ಎಷ್ಟು?

ಭಾರತದ ಶತ್ರು ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಪಾಕಿಸ್ತಾನ ತಾನು 108ನೇ ಸ್ಥಾನ ಪಡೆದಿದೆ. ಒಟ್ಟು ಹತ್ತು ಅಂಕಗಳಿಗೆ ಕೇವಲ 4.25 ಅಂಕಗಳನ್ನು ಪಡೆದಿದೆ. ಪಕ್ಕದ ಶ್ರೀಲಂಕಾ 69ನೇ ಸ್ಥಾನ ಪಡೆದಿದ್ದರೆ , ಬಾಂಗ್ಲಾದೇಶ 80 ನೇ ಸ್ಥಾನ ಪಡೆದಿದೆ. ಇವೆಲ್ಲ ದೇಶಗಳು ಕ್ರಮವಾಗಿ 6.27 ಹಾಗೂ 5.88 ಅಂಕ ಪಡೆದಿವೆ.

ಅಗ್ರಗಣ್ಯ ದೇಶಗಳಾವುವು?

ಅಗ್ರಗಣ್ಯ ದೇಶಗಳಾವುವು?

1) ನಾರ್ವೆ

2) ಐಲ್ಯಾಂಡ್

3) ಸ್ವೀಡನ್

4) ನ್ಯೂಜಿಲೆಂಡ್

5) ಫಿನ್‌ಲೆಂಡ್

6)ಐರ್‌ಲ್ಯಾಂಡ್‌

7)ಡೆನ್‌ಮಾರ್ಕ್

8)ಕೆನಡಾ

9) ಆಸ್ಟ್ರೇಲಿಯಾ

10)ಸ್ವಿಡ್ಜರ್‌ಲೆಂಡ್

ಪಟ್ಟಿಯ ಕೊನೆಯ ಸ್ಥಾನದಲ್ಲಿ ಉತ್ತರ ಕೊರಿಯಾ, ಚೀನಾ

ಪಟ್ಟಿಯ ಕೊನೆಯ ಸ್ಥಾನದಲ್ಲಿ ಉತ್ತರ ಕೊರಿಯಾ, ಚೀನಾ

ಒಟ್ಟು ಹತ್ತು ಅಂಕಗಳಲ್ಲಿ 2.26 ಅಂಕ ಗಳಿಸಿರುವ ಚೀನಾ 153ನೇ ಸ್ಥಾನ ಪಡೆದಿದೆ. ಚೀನಾದ ವಾಯುವ್ಯ ಭಾಗದಲ್ಲಿನ ಪ್ರತಿಭಟನೆಗಳು ಸ್ಥಳೀಯ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ನೀತಿಗಳು ಸೇರಿ ಇತರೆ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಈ ಕುಸಿತಕ್ಕೆ ಕಾರಣವಾಗಿದೆ. ಇನ್ನು ಬ್ರೆಜಿಲ್ 52ನೇ ಸ್ಥಾನ ಹೊಂದಿದ್ದರೆ ರಷ್ಯಾ 34ನೇ ಸ್ಥಾನಕ್ಕೆ ಕುಸಿದಿದೆ. ಜಗತ್ತಿನ ಕುಖ್ಯಾತ ಸರ್ವಾಧಿಕಾರಿ ಎನಿಸಿಕೊಂಡಿರುವ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಸರ್ಕಾರ ಅಂದರೆ 167ನೇ ಸ್ಥಾನ ಪಡೆದಿದೆ.

English summary
India slipped 10 places to 51st position in the 2019 Democracy Index's global ranking, Economist Intelligence Unit said that "erosion of civil liberties" in the country as the primary cause for the downtrend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X