ಅಂಧ ಯುವತಿಯರ ಮಾರ್ಜಾಲ ನಡಿಗೆ, ಗಿಳಿಗಳ ಪಿಸುಮಾತು
ಬೆಂಗಳೂರು, ಡಿಸೆಂಬರ್, 18: ಮುಸ್ಲಿಂ ಜನಾಂಗದ ಷಿಯಾ ಸಮುದಾಯದ ಮುಖಂಡ ಅಯತುಲ್ಲಾ ಶೇಖ್ ಇಬ್ರಾಹಿಂ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಷಿಯಾ ಸಮುದಾಯದವರು ಪ್ಲೇಕಾರ್ಡ್ ಹಿಡಿದು ವಿವಿಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಕೈಗೊಂಡಿದ್ದಾರೆ.
ಅಂಧ ಯುವತಿಯರು ಯಾವ ಯುವತಿಯರಿಗೂ ಕಡಿಮೆ ಇಲ್ಲ ಎಂಬಂತೆ ಎಲ್ಲಾ ಸುರಸುಂದರಿಯರನ್ನು ಹಿಂದಿಕ್ಕುವಂತೆ, ಕ್ಯಾಟ್ ವಾಕ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಬಿಜೆಪಿ ಮತ್ತು ಆಪ್ ಪಕ್ಷದ ರಾಜಕೀಯ ಮುಖಂಡರು ನವದೆಹಲಿಯಲ್ಲಿ ನಡೆದ ಚಳಿಗಾಲದ ಅಧಿವೇಶದಲ್ಲಿ ಪಾಲ್ಗೊಂಡಿದ್ದಾರೆ.
ಐಎಸ್ಐಎಸ್ ಉಗ್ರರ ಕಣ್ಣು ಭಾರತದ 14 ರಿಂದ 20 ವರ್ಷದ ಯುವತಿಯರ ಮೇಲೆ ನೆಟ್ಟಿದೆ. ಇನ್ನೊಂದೆಡೆ ನಿರ್ಭಯಾ ಗ್ಯಾಂಗ್ ರೇಪ್ ಬಾಲಾಪರಾಧಿ ಡಿಸೆಂಬರ್ 20ರಂದು ಬಿಡುಗಡೆಗೊಳ್ಳುತ್ತಿರುವ ವಿಚಾರ ದೇಶದಲ್ಲಿ ಕೊಂಚ ಶಾಂತಿ ಕದಡುವಂತೆ ಮಾಡಿದೆ.['ಜ್ಯೋತಿ' ಆರಿಸಿದ ಬಾಲಾಪರಾಧಿ ಜೈಲಿಂದ ಹೊರಬರುವುದು ಖಚಿತ]
ಅಸಹಿಷ್ಣುತೆ ಬಗ್ಗೆ ಮಾತನಾಡಿ ನಂತರ ಕ್ಷಮೆಯಾಚಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್ ದಿಲ್ವಾಲೆ ಚಲನಚಿತ್ರಕ್ಕೆ ದೇಶಾದ್ಯಂತ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಇಂದಿನ ಸುದ್ದಿಗಳು. ನಿಮಗೆ ಇನ್ನಷ್ಟು ಸುದ್ದಿಗಳು ಬೇಕಾದರೆ ಕೆಳಗಿನ ಸುದ್ದಿ ಚಿತ್ರಗಳ ಸ್ಲೈಡ್ ಗಳಲ್ಲಿವೆ.

ಷಿಯಾ ಮುಸ್ಲಿಂ ಜನಾಂಗದಿಂದ ಪ್ರತಿಭಟನೆ
ಮುಸ್ಲಿಮ್ ನ ಷಿಯಾ ಸಮುದಾಯದ ಮುಖಂಡ ಅಯತುಲ್ಲಾ ಶೇಖ್ ಇಬ್ರಾಹಿಂ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಷಿಯಾ ಸಮುದಾಯದವರು ಪ್ಲೇಕಾರ್ಡ್ ಹಿಡಿದು ನೈಜೀರಿಯಾ ಸೇನೆ ವಿರುದ್ದ ಘೋಷಣೆ ಕೂಗಿದ್ದಾರೆ.

ಅಂಧ ಯುವತಿಯರ ಕ್ಯಾಟ್ ವಾಕ್
ನವದೆಹಲಿಯಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಅಂಧತೆಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಆ ಸಂದರ್ಭದಲ್ಲಿ ಅಂಧ ಯುವತಿಯರು ಕ್ಯಾಟ್ ವಾಕ್ ಮಾಡಿ ನೋಡುಗರಲ್ಲಿ ಅಚ್ಚರಿ ಮೂಡಿಸಿದರು.[ಲಲನೆಯರ ಮಾರ್ಜಾಲ ನಡಿಗೆಗೆ ಪುಳಕವಾಯಿತೆನ್ನ ಮನ]

ಮ್ಯಾಕವ್ಸ್ ಲವ್
ಕೊಲ್ಕತ್ತಾದಲ್ಲಿ ಮ್ಯಾಕವ್ಸ್ ಜೋಡಿಯಾಗಿ ಕುಳಿತು ಕಷ್ಟ ಸುಖ ಮಾತನಾಡುತ್ತಾ ಪರಸ್ಪರ ಮುತ್ತುಗಳನ್ನು ವಿನಿಮಯ ಮಾಡಿಕೊಳ್ಳುವಾಗ ಕಂಡದ್ದು ಹೀಗೆ.

ಸ್ಟ್ಯಾಂಡ್ ಪೋರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಜೊತೆ ದಿನೇಶ್ ತ್ರಿವೇದಿ
ಮಾಜಿ ರೈಲ್ವೆ ಸಚಿವ, ಟಿಎಂಸಿ ನಾಯಕ ದಿನೇಶ್ ತ್ರಿವೇದಿ ಸ್ಟ್ಯಾಂಡ್ ಪೋರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಜೊತೆ ಗಾಂಧಿ ಪ್ರತಿಮೆ ಎದುರು ಭಾವಚಿತ್ರ ತೆಗೆಸಿಕೊಂಡರು.

ಶಾರುಖ್ ಖಾನ್ ವಿರುದ್ಧ ಸಿಡಿದೆದ್ದ ಹಿಂದೂಸೇನಾ
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ದಿಲ್ ವಾಲೆ ಚಲನಚಿತ್ರ ವಿರೋಧಿಸಿ ಲಕ್ನೋದಲ್ಲಿ ಹಿಂದೂಸೇನಾ ಸಂಘಟನೆಗಳ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು.[ಅಸಹಿಷ್ಣುತೆ ಮಾತಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದ ಪ್ರೇಕ್ಷಕ!]

ಕಣ್ಣೂರಿನಲ್ಲಿ ಫಿರಂಗಿ ಚೆಂಡುಗಳು
ಭಾರತದ ಉತ್ಕನನ ಇಲಾಖೆ ಅಧಿಕಾರಿಗಳು ಕಣ್ಣೂರಿನಲ್ಲಿ ಪೋರ್ಚುಗೀಸ್ ಕಾಲದಲ್ಲಿ ಕಟ್ಟಿದ ಸೆಂಟ್ ಏಂಜಲೋ ಕೋಟೆಯಲ್ಲಿ ಫಿರಂಗಿ ಚೆಂಡುಗಳನ್ನು ಹೊರತೆಗೆದರು.












Click it and Unblock the Notifications