ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 795ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 24: ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅದರ ಜತೆ ಜತೆಗೆ ರೂಪಾಂತರಿ ವೈರಸ್ ಸೋಂಕಿತರು ಸಂಖ್ಯೆಯೂ ಹೆಚ್ಚಾಗಿದೆ.

ಮಾರ್ಚ್ 18ರಂದು ಒಂದೇ ದಿನ 400 ರೂಪಾಂತರಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಕೊರೊನಾ ಲಸಿಕೆ ನೀಡಿಕೆಗೆ ವಯಸ್ಸಿನ ಮಿತಿ ತೆಗೆದುಹಾಕಲು ರಾಜಸ್ಥಾನ, ಪಂಜಾಬ್ ಮುಖ್ಯಮಂತ್ರಿಗಳ ಮನವಿಕೊರೊನಾ ಲಸಿಕೆ ನೀಡಿಕೆಗೆ ವಯಸ್ಸಿನ ಮಿತಿ ತೆಗೆದುಹಾಕಲು ರಾಜಸ್ಥಾನ, ಪಂಜಾಬ್ ಮುಖ್ಯಮಂತ್ರಿಗಳ ಮನವಿ

ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 795ಕ್ಕೆ ಏರಿಕೆಯಾಗಿದೆ. ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾಗಿರುವ SARS-CoV-2 ವೈರಸ್ ಮಾದರಿ ದೇಶದಲ್ಲೂ ಪತ್ತೆಯಾಗಿದೆ. ಈ ಮಾದರಿ ಸೋಂಕಿತರ ಸಂಖ್ಯೆ ಇದೀಗ 795ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Indias Total Cases Of Mutant COVID-19 Strains Reach 795

ಪ್ರಸ್ತುತ ದೇಶದಲ್ಲಿರುವ 10 ಲ್ಯಾಬ್‌ಗಳಲ್ಲಿ ರೂಪಾಂತರಿ ವೈರಸ್ ಪತ್ತೆ ಮಾಡುವ ಜೆನೋಮಿಕ್ ಕಾನ್ಸೋರ್ಟಿಯಂ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಲ್ಯಾಬ್‌ಗಳು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧೀನದಲ್ಲಿ ಕೆಲಸ ಮಾಡುತ್ತಿವೆ ಎನ್ನಲಾಗಿದೆ.

ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು, ದೇಶದಲ್ಲಿ ಈ ವರೆಗೂ ಯಾವುದೇ ರೀತಿಯ ರೂಪಾಂತರಿ ಕೊರೊನಾ ವೈರಸ್ ಮರು ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ ವಿಶ್ವದ ಮೂರು ರಾಷ್ಟ್ರಗಳಲ್ಲಿ ಅಂದರೆ ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಇದರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದ ಕೊರೊನಾ ವೈರಸ್ ತಳಿಯಿಂದ ಮರು ಸೋಂಕು ಸಾಧ್ಯತೆ ಹೆಚ್ಚಾಗಿದೆ. ಮೊದಲ ಸೋಂಕಿಗಿಂತ ಎರಡನೇ ಬಾರಿಗೆ ತಗುಲುವ ಸೋಂಕು ಹೆಚ್ಚು ಮಾರಣಾಂತಿಕವಾಗಿರುತ್ತದೆ ಎಂದು ಲಿಖಿತ ಉತ್ತರದಲ್ಲಿ ಹೇಳಲಾಗಿದೆ.

English summary
The total number of cases with the UK, South Africa and Brazil variants of SARS-CoV-2 in the country has reached 795, the Union Health Ministry said on Tuesday as India is witnessing a surge in COVID-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X