ರಾಜಸ್ಥಾನದಲ್ಲಿ ನಾಗ್ ಕ್ಷಿಪಣಿ ಪರೀಕ್ಷೆ ಎರಡು ಬಾರಿ ಯಶಸ್ವಿ

Posted By:
Subscribe to Oneindia Kannada

ಜೈಪುರ, ಸೆ. 10: ಇಲ್ಲಿನ ಮರಭೂಮಿಯಲ್ಲಿ 'ನಾಗ್' ಕ್ಷಿಪಣಿಯ(Anti-tank missile) ಪರೀಕ್ಷಾರ್ಥ ಪ್ರಯೋಗ ಎರಡು ಬಾರಿ ಯಶಸ್ವಿಯಾಗಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ದೃಢಪಡಿಸಿದ್ದಾರೆ.

ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಹೊಡೆಯಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾಗಿರುವ 'ನಾಗ್' ಕ್ಷಿಪಣಿಯು 7 ಕಿ.ಮೀ ತನಕ ಗುರಿಯನ್ನು ನಿಖರವಾಗಿ ತಲುಪಬಹುದು.

India's Nag missile successfully tested

ಮೂರನೇ ತಲೆಮಾರಿನ ಆಂಟಿ ಟ್ಯಾಂಕ್ ಗೈಡೆಡ್ ಮಿಸ್ಸೈಲ್ ನಾಗ್ ನಲ್ಲಿ ಇಂಟಿಗ್ರೇಟೆಡ್ ಏವಿಯೋನಿಕ್ಸ್ ತಂತ್ರಜ್ಞಾನದೊಂದಿಗೆ ಹೆಚ್ಚು ಮುಂದುವರಿದ ಇಮೇಜಿಂಗ್ ಇನ್ಫ್ರಾರೆಡ್ ರಾಡಾರ್ (IRR) ಅನ್ನು ಅಳವಡಿಸಲಾಗಿದೆ.

ಎಟಿಜಿಎಂ ನಾಗ್ ಕ್ಷಿಪಣಿಯು ವಿವಿಧ ಶ್ರೇಣಿಯ ಬೇರೆ ಬೇರೆ ಗುರಿಯನ್ನು ನಿಖರವಾಗಿ ತಲುಪಿದೆ, ಪರೀಕ್ಷೆ ಯಶಸ್ವಿಯಾಗಿದೆ. ಜೂನ್, ಜುಲೈ ತಿಂಗಳಿನಲ್ಲಿ ನಡೆಸಿದ ಪರೀಕ್ಷಾರ್ಥ ಉಡಾವಣೆ ಬಳಿಕ ಈಗ ಮತ್ತೊಮ್ಮೆ ಪ್ರಯೋಗ ಯಶಸ್ವಿಯಾಗಿದೆ. ನಾಗ ಕ್ಷಿಪಣಿಯ ಯಶಸ್ವಿ ಹಾರಾಟ ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The DRDO has successfully tested India's indigenously developed third generation anti-tank guided missile (ATGM) Nag.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ