ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಅತಿ ಪ್ರೀತಿಯ ಹುಲಿ 'ಮಚ್ಲಿ' ಇನ್ಮುಂದೆ ಘರ್ಜಿಸಲ್ಲ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 18: ಭಾರತ ಅತಿ ಹೆಚ್ಚು ವರ್ಷ ಜೀವಿಸಿದ ಹುಲಿ, ಅತಿ ಹೆಚ್ಚು ಭಾರಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಹುಲಿ, ಬಹು ಜನಪ್ರಿಯ ಹೆಣ್ಣು ಹುಲಿ 'ಮ‌ಚ್ಲಿ' ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರ ಸಾವನ್ನಪ್ಪಿದೆ.

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿದ್ದ 'ಮಚ್ಲಿ' ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. 19 ವರ್ಷ ವಯಸ್ಸಿನ ಮಚ್ಲಿಗೆ ವಯೋಸಹಜ ಕಾಯಿಲೆಗಳಿತ್ತು ಎಂದು ಉದ್ಯಾನವನದ ವೈದ್ಯರು ಹೇಳಿದ್ದಾರೆ.

India's most popular tiger, Machli, dies in Ranthambore aged 19

'ರಣಥಂಬೋರ್​ನ ರಾಣಿ', ಕ್ರೊಕಡೈಲ್ (ಮೊಸಳೆ) ಕಿಲ್ಲರ್ ಎಂಬ ಬಿರುದು ಹೊಂದಿದ್ದ ಮಚ್ಲಿಗೆ ಅನಾರೋಗ್ಯದಿಂದಾಗಿ ಕೊನೆಗಾಲದಲ್ಲಿ ಎಲ್ಲಾ ಕೋರೆ ಹಲ್ಲುಗಳನ್ನು ಕಳೆದುಕೊಂಡಿತ್ತು. ಮೊಸಳೆಗಳ ಜತೆ ಸೆಣಸಾಡುವುದರಲ್ಲಿ ಸಾಕಷ್ಟು ಪರಿಣತಿ ಹೊಂದಿದ್ದ ಮಚ್ಲಿಗೆ ಅದೇ ಮುಳ್ಳಾಯಿತು.

14 ಅಡಿ ಉದ್ದದ ಭಾರಿ ಗಾತ್ರದ ಮೊಸಳೆಯ ಮೇಲೆ ದಾಳಿ ನಡೆಸಿ ಕೊಂದ ಮಚ್ಲಿಗೆ ಕ್ರೊಕಡೈಲ್ ಕಿಲ್ಲರ್ ಎಂಬ ಹೆಸರು ಅಂಟಿಕೊಂಡಿತು. ಮೊಸಳೆಯ ಮೇಲೆ ದಾಳಿ ಮಾಡುವ ವಿಡಿಯೋ ಯೂಟ್ಯೂಬ್ ನಲ್ಲಿ ಸಕತ್ ಹಿಟ್ ಆಗಿ ಈಗಾಗಲೇ 6 ವರ್ಷ ಕಳೆದಿದೆ.


ರಣಥಂಬೋರ್ ಗೆ ಬರುವ ಪ್ರವಾಸಿಗರಿಗೆ ಇಲ್ಲಿನ ಗೈಡ್ ಗಳು ಮಚ್ಲಿ ಕಥೆ ಹೇಳದೆ ಕಾಡು ಸುತ್ತಾಡಿಸುವುದಿಲ್ಲ. ಜೀವಂತ ದಂತಕಥೆಯಾಗಿದ್ದ ಮಚ್ಲಿ ದಂತ ಕಳೆದುಕೊಂಡು ಅಸುನೀಗಿದೆ.

English summary
Known as the Queen of Ranthambore, Machli was described as one of the world's most photographed tigers. She had distinctive fish-shaped markings on the left side of her face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X