ಬರೋಡಾದಲ್ಲಿ ದೇಶದ ಪ್ರಥಮ ರೈಲ್ವೇ ವಿವಿ: ಪ್ರಧಾನಿ ಮೋದಿ

Posted By: Prithviraj
Subscribe to Oneindia Kannada

ವಡೋದರಾ, ಅಕ್ಟೋಬರ್, 22: ದೇಶದಲ್ಲೇ ಪ್ರಪ್ರಥಮ ಬಾರಿಗೆ ವಡೋದರಾದಲ್ಲಿ ರೈಲ್ವೇ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಿರುವ ವಡೋದರಾ ವಿಮಾನ ನಿಲ್ದಾಣ ನೂತನ ಟರ್ಮಿನಲ್ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

India's First Railway University come up in Vadodara

ದೇಶದ ರೈಲ್ವೇ ಕ್ಷೇತ್ರ ತೀರಾ ಹಿಂದುಳಿದಿದೆ. ರೈಲ್ವೇ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟರು.

ರೈಲ್ವೇ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆಗಬೇಕಿದೆ ಈ ಕಾರಣದಿಂದ ವಡೋದರಾದಲ್ಲಿ ರೈಲ್ವೇ ವಿವಿ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಆರ್ಥಿಕ ಅಭಿವೃದ್ಧಿಗೆ ಪ್ರವಾಸೋದ್ಯಮವೂ ಮುಖ್ಯ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಮರ್ಪಕ ವೈಮಾನಿಕ ಜಾಲ ಅಗತ್ಯ. ವೈಮಾನಿಕ ಸಂಪರ್ಕ ಉತ್ತಮ ಪಡಿಸುವುದರಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸಬಹುದು ಎಂದು ಅವರು ತಿಳಿಸಿದರು.

ರೈಲ್ವೇ ವಿವಿಗೆ ಸೂಕ್ತ ಸ್ಥಳ ಒದಗಿಸಿಕೊಡಲು ರಾಜ್ಯ ಸರ್ಕಾರ ಸಹಾಯ ಮಾಡುತ್ತದೆ ಎಂದು ರೈಲ್ವೇ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.

ಪ್ರಸ್ತುತಕ್ಕೆ ವಡೋದರಾದಲ್ಲಿರುವ ಭಾರತೀಯ ರೈಲ್ವೇ ನ್ಯಾಷನಲ್ ಆಕಾಡೆಮಿ ಕ್ಯಾಂಪಸ್ ನಲ್ಲಿ ತಾತ್ಕಾಲಿಕವಾಗಿ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭೂಮಿ ವಶಪಡಿಸಿಕೊಂಡ ನಂತರ ವಿಶ್ವವಿದ್ಯಾಲಯದ ನಿರ್ಮಾಣ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತಂತೆ ರೈಲ್ವೇ ಇಲಾಖೆಯಿಂದ 2015ರ ಡಿಸೆಂಬರ್ ನಲ್ಲೇ ಒಪ್ಪಿಗೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's First Railway University come up in Vadodara says Prime Minister Narendra Modi in Vadodara on Satuarday.
Please Wait while comments are loading...