ಭಾರತದಲ್ಲಿ 79,476 ಹೊಸ ಕೊರೊನಾ ಕೇಸ್: 1 ಲಕ್ಷ ದಾಟಿದ ಸಾವು

ನವದೆಹಲಿ, ಅಕ್ಟೋಬರ್ 03: ಕೊರೊನಾವೈರಸ್ ಸಾಂಕ್ರಾಂಮಿಕ ರೋಗದಿಂದಾಗಿ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಾವುಗಳು ಭಾರತದಲ್ಲಿ ವರದಿಯಾಗಿದ್ದು, ಶನಿವಾರ 79,476 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 1,069 ಸಾವುಗಳು ವರದಿಯಾಗಿದ್ದು, ಇದುವರೆಗೂ ಸಾವನ್ನಪ್ಪಿದರ ಸಂಖ್ಯೆಯು 1,00,842 ರಷ್ಟಾಗಿದೆ. ಇನ್ನು 79,476 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 64,73,545 ಕ್ಕೆ ತಲುಪಿದೆ.

ಒಟ್ಟು ಕೊರೊನಾ ಪ್ರಕರಣಗಳಲ್ಲಿ ಈವರೆಗೆ 54,27,707 ಮಂದಿ ಡಿಸ್ಚಾರ್ಜ್ ಆಗಿದ್ದು, 9,44,996 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಆದರೆ ಸಾವಿನ ಪ್ರಮಾಣವು ಹೆಚ್ಚಾಗುತ್ತಲೇ ಇದ್ದು, ಅಮೆರಿಕಾ ಹಾಗೂ ಬ್ರೆಜಿಲ್ ಬಳಿಕ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಒಂದು ಲಕ್ಷ ದಾಟಿದ ಮೂರನೇ ರಾಷ್ಟ್ರ ಭಾರತ.

Indias Covid-19 Deaths Cross 1 Lakh Mark: 1069 Deaths Reported In Last 24 Hours

ಅಮೆರಿಕಾದಲ್ಲಿ ಅತಿ ಹೆಚ್ಚು ಜನರು ಕೋವಿಡ್-19ಗೆ ಬಲಿಯಾಗಿದ್ದು 2 ಲಕ್ಷ ಗಡಿ ದಾಟಿದೆ. ಇನ್ನು ಬ್ರೆಜಿಲ್‌ನಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಜನರು ಕೊರೊನಾಗೆ ಬಲಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+