ಅಗ್ನಿಮತ್ತು ಡಾಂಗ್ ಫೆಂಗ್ ಕ್ಷಿಪಣಿ : ಯಾವುದು ಹೆಚ್ಚು ಶಕ್ತಿಶಾಲಿ?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಅ.11 : ಭಾರತ-ಚೀನಾ ನಡುವೆ ಯುದ್ಧವಾಗುವ ಪರಿಸ್ಥಿತಿ ಎದುರಾದರೆ ಅದನ್ನು ತಡೆಯಲು ಪ್ರಯತ್ನ ನಡೆಸಬೇಕು. ಯುದ್ಧದಿಂದ ಜೀವ ಹಾನಿಯಾಗುವ ಜೊತೆಗೆ ಆರ್ಥಿಕ ಪರಿಸ್ಥಿತಿಯೂ ಹಾಳಾಗುತ್ತದೆ. ಒಮ್ಮೆ ಯುದ್ಧ ನಡೆದರೆ ಅಭಿವೃದ್ಧಿಯ ವೇಗ ದಶಕಗಳಷ್ಟು ಹಿಂದಕ್ಕೆ ಸಾಗುತ್ತದೆ.

ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?

ಸಿಕ್ಕಿಂ ಸಮೀಪದ ಡೊಕ್ಲಾಮ್ ಪ್ರದೇಶದಲ್ಲಿ ಭಾರತ-ಚೀನಾ ಸೇನೆ ಸುಮಾರು ಎರಡು ತಿಂಗಳಿನಿಂದ ಬೀಡು ಬಿಟ್ಟಿವೆ. ಎರಡೂ ದೇಶಗಳು ಬೇರೆ-ಬೇರೆ ಮಟ್ಟದಲ್ಲಿ ಮಾತುಕತೆಯಲ್ಲಿ ತೊಡಗಿವೆ. ಎರಡೂ ದೇಶಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ಅಂತರಾಷ್ಟ್ರೀಯ ಸಮುದಾಯದ ಆತಂಕಕ್ಕೂ ಕಾರಣವಾಗಿದೆ.

'ಹಿಂದಿ-ಚೀನೀ ಭಾಯಿ ಭಾಯಿ': ಭಾರತ, ಚೀನಾಕ್ಕೆ ದಲೈಲಾಮ ಕಿವಿಮಾತು

ಡೊಕ್ಲಾಮ್ ಪ್ರದೇಶದಿಂದ ಸೇನೆಯನ್ನು ಭಾರತ ವಾಪಸ್ ಕರೆಸಿಕೊಳ್ಳದಿದ್ದರೆ ಮಿಲಿಟರಿ ಕ್ರಮದ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಚೀನಾ ಹೇಳಿದೆ. ಭಾರತ ಮತ್ತು ಚೀನಾ ಯುದ್ಧಕ್ಕೆ ಸಿದ್ಧವಾಗಿದೆಯೇ? ಎಂಬ ಪ್ರಶ್ನೆ ಹಲವಾರು ಜನರನ್ನು ಕಾಡುತ್ತಿದೆ. ಎರಡೂ ದೇಶಗಳು ಪ್ರಬುದ್ಧ ನಾಯಕತ್ವವನ್ನು ಹೊಂದಿವೆ. ಮಾತುಕತೆಗಳು ನಡೆಯುತ್ತಿವೆ.

ಗಡಿತಂಟೆ ಕೆದಕುತ್ತಿರುವ ಚೀನಾಗೆ ಪ್ರಧಾನಿ ಮೋದಿ ನೀಡಿದ ಭರ್ಜರಿ ಟಾಂಗ್?

ಎರಡೂ ದೇಶಗಳು ಪರಮಾಣು ಅಸ್ತ್ರ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಯುದ್ಧ ಘೋಷಣೆಯಾದರೆ ದೇಶಗಳ ಮಿಲಿಟರಿ ಶಕ್ತಿಯ ಪ್ರದರ್ಶನವಾಗುವುದು ಖಚಿತ. ಭಾರತದ ಅಗ್ನಿ ಮತ್ತು ಚೀನಾದ ಡಾಂಗ್ ಫೆಂಗ್ ಮಿಸೈಲ್ ಶಕ್ತಿಗಳ ಬಗ್ಗೆ ತಿಳಿಯೋಣ...

ಎಷ್ಟು ದೂರ ಸಾಗಬಲ್ಲದು ಅಗ್ನಿ ಕ್ಷಿಪಣಿ

ಎಷ್ಟು ದೂರ ಸಾಗಬಲ್ಲದು ಅಗ್ನಿ ಕ್ಷಿಪಣಿ

ಭಾರತ ಸೇನೆಯ ಬಹು ದೊಡ್ಡ ಶಕ್ತಿ ಅಗ್ನಿ ಕ್ಷಿಪಣಿ. ಅಗ್ನಿ ಕ್ಷಿಪಣಿ 5 ಮಾದರಿಗಳನ್ನು ಹೊಂದಿದೆ. ಅಗ್ನಿ-1 1250 ಕಿ.ಮೀ. ಸಾಗಬಲ್ಲದು. ಅಗ್ನಿ-2 ಅಗ್ನಿ-1ರ ಆಧುನಿಕ ರೂಪವಾಗಿದೆ. ಇದು ಎರಡು ಹಂತದ ಕ್ಷಿಪಣಿಯಾಗಿದ್ದು 2000 ಕಿ.ಮೀ.ದೂರ ಸಾಗಬಲ್ಲದು. ನಿಖರವಾದ ಗುರಿಯನ್ನು ನೀಡಿ ಅಗ್ನಿ-2 ಕ್ಷಿಪಣಿ ಸಿಡಿಸಿದರೆ ದಕ್ಷಿಣ, ಮಧ್ಯ ಚೀನಾವನ್ನು ತಲುಪುತ್ತದೆ.

ಚೀನಾ ರಾಜಧಾನಿ ತಲುಪಲಿದೆ ಅಗ್ನಿ-4

ಚೀನಾ ರಾಜಧಾನಿ ತಲುಪಲಿದೆ ಅಗ್ನಿ-4

ಆಧುನಿಕ ತಂತ್ರಜ್ಞಾನದಿಂದ ತಯಾರು ಮಾಡಲಾಗದ ಅಗ್ನಿ-4 ಕ್ಷಿಪಣಿ ಚೀನಾದ ರಾಜಧಾನಿ ಬೀಜಿಂಗ್ ತಲುಪುವ ಶಕ್ತಿ ಹೊಂದಿದೆ. ಏಪ್ರಿಲ್ 29, 2012ರಲ್ಲಿ ಭಾರತ ಅಗ್ನಿ-5 ಕ್ಷಿಪಣಿ ಪರೀಕ್ಷೆ ಮಾಡಿದ ಬಳಿಕ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ ಕ್ಲಬ್ ಸೇರಿಕೊಂಡಿದೆ.

ಅಂತರಾಷ್ಟ್ರೀಯ ರಕ್ಷಣಾ ತಂತ್ರಜ್ಞರು ಅದರಲ್ಲೂ ಮುಖ್ಯವಾಗಿ ಚೀನಾದವರು ಭಾರತ ಅಂತರ ಖಂಡಾತರ ಕ್ಷಿಪಣಿ ಅಗ್ನಿ-5 ತಲುಪುವ ಗುರಿ ಬಗ್ಗೆ ಸ್ಪಷ್ಟತೆ ಹೊಂದಿಲ್ಲ ಎಂದು ಹೇಳಿತ್ತು. ಡಿಆರ್‌ಡಿಒ ಅಗ್ನಿ-5 ಖಂಡಾತರ ಕ್ಷಿಪಣಿ 5 ಸಾವಿರ ಕಿ.ಮೀ.ತಲುಪಬಲ್ಲದು ಎಂಬ ಸೂಚನೆ ನೀಡಿದೆ.

ಅಗ್ನಿ-5 ಕ್ಷಿಪಣಿ ಬಗ್ಗೆ ಚೀನಾದ ಕಿರಿಕ್

ಅಗ್ನಿ-5 ಕ್ಷಿಪಣಿ ಬಗ್ಗೆ ಚೀನಾದ ಕಿರಿಕ್

ಅಗ್ನಿ-5 ಕ್ಷಿಪಣಿ 8000 ಕಿ.ಮೀ.ತಲುಪಲಿದೆ. ಆದರೆ, ಭಾರತ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬುದು ಚೀನಾದ ತಜ್ಞರ ಆರೋಪ. ಕ್ಷಿಪಣಿ ಅಷ್ಟು ದೂರ ಸಾಗುವ ಶಕ್ತಿ ಹೊಂದಿದ್ದರೆ ದಕ್ಷಿಣ ಭಾರತದಿಂದ ಅದನ್ನು ಹಾರಿಸಿದರೆ ಅದು ಚೀನಾ ತಲುಪಲಿದೆ.

ಅಗ್ನಿ-5 ಕ್ಷಿಪಣಿ 2-10 ಹತ್ತು ಪರಮಾಣು ಸಿಡಿತಲೆಗಳನ್ನು ಹೊತ್ತುಯ್ಯುವ ಶಕ್ತಿ ಹೊಂದಿದೆ. ಈ ಬೇರೆ-ಬೇರೆ ಸಿಡಿತಲೆಗಳಿಗೆ ಬೇರೆ-ಬೇರೆ ಗುರಿಯನ್ನು ನಿಗದಿ ಮಾಡುವಂತೆ ರೂಪಿಸಲಾಗಿದೆ. ಮೊಬೈಲ್ ಲಾಂಚರ್ ಮೂಲಕ ಈ ಕ್ಷಿಪಣಿಯನ್ನು ಕೆಲವೇ ನಿಮಿಷಗಳಲ್ಲಿ ಹಾರಿಸಬಹುದಾಗಿದೆ.

ಡಾಂಗ್‌ಫೆಂಗ್ ಅಮೆರಿಕ ತಲುಪಬಲ್ಲದೇ?

ಡಾಂಗ್‌ಫೆಂಗ್ ಅಮೆರಿಕ ತಲುಪಬಲ್ಲದೇ?

ಚೀನಾ ತನ್ನ ಬಳಿ ಡಾಂಗ್‌ಫೆಂಗ್ ಕ್ಷಿಪಣಿ ಹೊಂದಿದೆ. ಸಣ್ಣ, ಮಧ್ಯಮ ಮತ್ತು ಖಂಡಾತರ ಕ್ಷಿಪಣಿಗಳನ್ನು ಡಾಂಗ್‌ಫೆಂಗ್ ಆವೃತ್ತಿ ಒಳಗೊಂಡಿದೆ. 1950ರಲ್ಲಿ ಚೀನಾ ಡಾಂಗ್‌ಫೆಂಗ್ ಕ್ಷಿಪಣಿ ತಯಾರಿ ಆರಂಭಿಸಿತು. ಡಾಂಗ್‌ಫೆಂಗ್ 1 ಮತ್ತು 2 ಕ್ಷಿಪಣಿಗಳನ್ನು ಮೊದಲು ತಯಾರಿಸಲಾಯಿತು. ಇವುಗಳು 500 ಮತ್ತು 1,250 ಕಿ.ಮೀ ಸಾಗಬಲ್ಲವು.

ಡಾಂಗ್‌ಫೆಂಗ್ 3 ಮತ್ತು ಡಿಎಫ್3 ಕ್ಷಿಪಣಿಗಳು 2,500 ಕಿ.ಮೀ.ಸಾಗಬಲ್ಲವು. ಆದರೆ, ಇದನ್ನು ಚೀನಾ ವಾಪಸ್ ಪಡೆದಿದ್ದು ಇದಕ್ಕೆ ಬದಲಾಗಿ ಡಿಎಫ್ 21 ಮತ್ತು ಡಾಂಗ್‌ಫೆಂಗ್ 4 ಮತ್ತು 5 ಮಾದರಿಯ ಕ್ಷಿಪಣಿ ಅಭಿವೃದ್ಧಿಪಡಿಸಿದೆ. ಅತ್ಯಾಧುನಿಕವಾಗಿ ತಯಾರು ಮಾಡಲಾದ ಡಿಎಫ್-5ಎ ಕ್ಷಿಪಣಿ ಪರಮಾಣು ಸಿಡಿತಲೆಗಳನ್ನು 12 ಸಾವಿರ ಕಿ.ಮೀ. ಸಾಗಿಸುವ ಶಕ್ತಿ ಹೊಂದಿವೆ.

ಮಿಲಿಟರಿ ಪರೇಡ್‌ನಲ್ಲಿ ಡಾಂಗ್‌ಫೆಂಗ್ ಪ್ರದರ್ಶನ

ಮಿಲಿಟರಿ ಪರೇಡ್‌ನಲ್ಲಿ ಡಾಂಗ್‌ಫೆಂಗ್ ಪ್ರದರ್ಶನ

ಭಾರತದ ಅಗ್ನಿ-5 ಕ್ಷಿಪಣಿಯನ್ನು ಚೀನಾ ತನ್ನ ಡಿಎಫ್-26 ಐಸಿಬಿಎಂನೊಂದಿಗೆ ಹೋಲಿಸುತ್ತದೆ. 1,200-1,800 ಕೆಜಿ ತೂಕದ ಸಿಡಿತಲೆಗಳನ್ನು 5000 ಕಿ.ಮೀ.ತನಕ ಸಾಗಿಸುವ ಶಕ್ತಿಯನ್ನು ಈ ಕ್ಷಿಪಣಿ ಹೊಂದಿದೆ ಎಂದು ಚೀನಾ ಹೇಳಿಕೊಳ್ಳುತ್ತದೆ.

ಭಾರತ ಸೂರ್ಯ ಎಂಬ ಕ್ಷಿಪಣಿ ತಯಾರು ಮಾಡುತ್ತಿದೆ?

ಭಾರತ ಸೂರ್ಯ ಎಂಬ ಕ್ಷಿಪಣಿ ತಯಾರು ಮಾಡುತ್ತಿದೆ?

ಭಾರತ 12 ಸಾವಿರ ಕಿ.ಮೀ. ಸಾಗಬಲ್ಲ ಸೂರ್ಯ ಎಂಬ ಕ್ಷಿಪಣಿ ತಯಾರು ಮಾಡುತ್ತಿದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಕುರಿತು ಡಿಆರ್‌ಡಿಒ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಈ ಹೊಸ ಕ್ಷಿಪಣಿಗೆ ಅಗ್ನಿ-6 ಅಥವ ಸೂರ್ಯ ಎಂದು ನಾಮಕರಣ ಮಾಡಬಹುದು ಎಂದು ತಿಳಿದುಬಂದಿದೆ. ಈ ಸುದ್ದಿ ನಿಜವಾದಲ್ಲಿ ಶತ್ರು ರಾಷ್ಟ್ರಗಳು ಬೆಚ್ಚಿ ಬೀಳಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Agni vs Dongfeng missile
English summary
War is the worst possible outcome of a diplomatic fallout between two countries and any nation would like to avoid it all costs. India and China are involved in a standoff at Doklam, near Sikkim, for close to two-months now. Well, it seems highly unlikely as both nations have matured leadership, but it wouldn't do any harm to try and understand India and China's ballistic missile capabilities.
Please Wait while comments are loading...