ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಲಿರುವ ನ್ಯೂ ಜನರೇಶನ್ ಬ್ರಹ್ಮೋಸ್!

By Prasad
|
Google Oneindia Kannada News

ನವದೆಹಲಿ, ಅಕ್ಟೋಬರ್ 19 : ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪಾಕಿಸ್ತಾನಕ್ಕೆ ಜಸ್ಟ್ ಒಂದು ಸ್ಯಾಂಪಲ್ ತೋರಿಸಿರುವ ಭಾರತ, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಉಗ್ರವಾದವನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಚಳಿಜ್ವರ ಬರುವುದರಲ್ಲಿ ಸಂಶಯವೇ ಇಲ್ಲ.

600 ಕಿ.ಮೀ. ದೂರದ ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ, ವೈರಿಗಳ ಸುರಕ್ಷಿತ ತಾಣವನ್ನು ಧ್ವಂಸ ಮಾಡುವಂಥ ನೂತನ ಬ್ರಹ್ಮೋಸ್ ಮಿಸೈಲ್ ಅನ್ನು ತಯಾರಿಸಲು ರಷ್ಯಾದೊಡನೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದು ಸಾಕಾರಗೊಂಡರೆ ಭಾರತದ ಸೇನೆಗೆ ಮತ್ತೊಂದು ಗರಿ ಮೂಡಿದಂತಾಗುತ್ತದೆ.

ಇದೀಗ ತಾನೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ಸೇನೆಯ ತಾಕತ್ತು ತೋರಿಸಿರುವ ಭಾರತ, ನ್ಯೂ ಜನರೇಶನ್ ಕ್ಷಿಪಣಿಗಳನ್ನು ರಷ್ಯಾದೊಡನೆ ಜಂಟಿಯಾಗಿ ಅಭಿವೃದ್ಧಿಪಡಿಸುವ ಮೂಲಕ ನೇರವಾಗಿಯೇ ಸೆಡ್ಡು ಹೊಡೆದಿದೆ. [ಸರ್ಜಿಕಲ್ ಸ್ಟ್ರೈಕ್: ಏನ್ ದೇವೇಗೌಡ್ರೇ ಹೀಗೆ ಹೇಳ್ ಬಿಟ್ರಿ, ತಪ್ಪಲ್ವಾ?]

ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್

ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್

ಕಳೆದ ಜೂನ್ ತಿಂಗಳಲ್ಲಿ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (MTCR) ಸೇರಿದ್ದರಿಂದ ಭಾರತಕ್ಕೆ ಭಾರೀ ಬಲ ಬಂದಂತಾಗಿದೆ. ಪ್ರಸ್ತುತ ಇರುವ ಬ್ರಹ್ಮೋಸ್ ಕೇವಲ 300 ಕಿ.ಮೀ. ಮಾತ್ರ ಕ್ರಮಿಸುವ ತಾಕತ್ತು ಹೊಂದಿವೆ.

ಪಾಕಿಸ್ತಾನದ ಯಾವುದೇ ಮೂಲೆಯನ್ನು ಕ್ರಮಿಸಲು ಸಾಧ್ಯ

ಪಾಕಿಸ್ತಾನದ ಯಾವುದೇ ಮೂಲೆಯನ್ನು ಕ್ರಮಿಸಲು ಸಾಧ್ಯ

ರಷ್ಯಾದೊಡನೆ ಜಂಟಿಯಾಗಿ ನ್ಯೂ ಜನರೇಶನ್ ಬ್ರಹ್ಮೋಸ್ ಮಿಸೈಲನ್ನು ಭಾರತ ಅಭಿವೃದ್ಧಿಪಡಿಸಿದರೆ, ಪಾಕಿಸ್ತಾನದ ಯಾವುದೇ ಮೂಲೆಯನ್ನು ಕ್ರಮಿಸಲು ಭಾರತಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ, ಪರ್ವತ ಪ್ರದೇಶವನ್ನು ಕೂಡ ಅತ್ಯಂತ ನಿಖರವಾಗಿ ಗುರಿಯಾಗಿಸಲು ಸಾಧ್ಯ.

ಕಡಿಮೆ ಅಂತರದ ಕ್ಷಿಪಣಿ ತಯಾರಿಕೆಗೂ ತಯಾರಿ

ಕಡಿಮೆ ಅಂತರದ ಕ್ಷಿಪಣಿ ತಯಾರಿಕೆಗೂ ತಯಾರಿ

ಗೋವಾದಲ್ಲಿ ಜೂನ್ ನಲ್ಲಿ ರಷ್ಯಾ ಮತ್ತು ಭಾರತ ದ್ವಿಪಕ್ಷೀಯವಾಗಿ ಮಾಡಿಕೊಂಡ ಒಪ್ಪಂದದಲ್ಲಿ, ಸಬ್ ಮರಿನ್ ಮತ್ತು ವಿಮಾನಗಳ ಮೂಲಕ ದಾಳಿ ಮಾಡಲು ಸಾಧ್ಯವಿರುವ ಕಡಿಮೆ ಅಂತರ ಕ್ರಮಿಸುವ ಕ್ಷಿಪಣಿ ತಯಾರಿಸಲು ಕೂಡ ಯೋಜನೆ ಹಾಕಿಕೊಳ್ಳಲಾಗಿದೆ.

ಹೆಚ್ಚು ಅಂತರ ಕ್ರಮಿಸುವ ಮಿಸೈಲ್ ಇದ್ದರೂ...

ಹೆಚ್ಚು ಅಂತರ ಕ್ರಮಿಸುವ ಮಿಸೈಲ್ ಇದ್ದರೂ...

ಭಾರತದ ಬಳಿ ಈಗಾಗಲೆ ಬ್ರಹ್ಮೋಸ್ ಗಿಂತಲೂ ಹೆಚ್ಚು ಅಂತರ ಕ್ರಮಿಸುವ ಬ್ಯಾಲಿಸ್ಟಿಕ್ ಮಿಸೈಲ್ ಗಳಿವೆ. ಆದರೆ, ಇವು ಬ್ರಹ್ಮೋಸ್ ದಷ್ಟು ನಿಖರವಾಗಿ ಗುರಿ ತಲುಪಲಾರವು.

ಪಾಕ್ ಪಾಠ ಕಲಿಯದಿದ್ದರೆ ಇದ್ದೇ ಇದೆ!

ಪಾಕ್ ಪಾಠ ಕಲಿಯದಿದ್ದರೆ ಇದ್ದೇ ಇದೆ!

ಹಿಂಬದಿಯಿಂದ ಆಕ್ರಮಣ ಮಾಡುತ್ತಲೇ ಭಾರತದ ಸಹನಶೀಲತೆಯನ್ನು ಕೆಣಕುತ್ತಲೇ ಇರುವ ಪಾಕಿಸ್ತಾನ ಇನ್ನು ಮುಂದಾದರೂ ಎಚ್ಚರಿಕೆಯಿಂದ ಇರುವುದು ಒಳಿತು. ಪಾಠ ಕಲಿಯದಿದ್ದರೆ ಇದ್ದೇ ಇದೆ!

English summary
India's offensive capacity, especially against Pakistan, is set to take a huge step forward with New Delhi and Moscow deciding to jointly develop a new generation of Brahmos missiles with 600 km-plus range and an ability to hit protected targets with pinpoint accuracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X