ಭಾರತ ಸೇನೆಯಿಂದ ಪ್ರತೀಕಾರ, 6 ಪಾಕ್ ಸೈನಿಕರ ಸಾವು
ಜಮ್ಮು ಮತ್ತು ಕಾಶ್ಮೀರ, ಜೂನ್ 1: ಭಾರತೀಯ ಸೇನೆ ಆರು ಪಾಕಿಸ್ತಾನಿ ಸೈನಿಕರನ್ನು ಕೊಂದು ಹಾಕಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ಈ ಪ್ರತಿಕ್ರಿಯೆ ತೆಗೆದುಕೊಂಡಿದೆ. ಇನ್ನು ಘಟನೆಯಲ್ಲಿ ಆರು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಬಿಂಬಲ್ ಮತ್ತು ಭಟ್ಟಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಬೆನ್ನಿಗೆ ಇಸ್ಲಮಾಬಾದ್ ನಲ್ಲಿರುವ ಭಾರತದ ಉಪ ರಾಯಭಾರಿ ಜೆಪಿ ಸಿಂಗ್ ರಿಗೆ ಪಾಕಿಸ್ತಾನದ ವಿದೇಶಾಂಗ ಇಲಾಖೆ ಸಮನ್ಸ್ ನೀಡಿದೆ.[ಕಾಶ್ಮೀರದ ಟಾಪ್ 12 ಭಯೋತ್ಪಾದಕರ ಪಟ್ಟಿ ಬಹಿರಂಗ]

ಎರಡೂ ದೇಶಗಳ ನಡುವೆ ಸರಕು ಸಾಗಣೆ, ಭದ್ರತಾ ವಿಷಯಗಳ ಜತೆಗೆ ಪ್ರಮುಖವಾಗಿ ಗಡಿ ನಿಯಂತ್ರಣಾ ರೇಖೆ ಬಳಿ ನಡೆದ ಗುಂಡಿನ ದಾಳಿಯೂ ಈ ಸಂದರ್ಭದಲ್ಲಿ ಚರ್ಚೆಗೆ ಬಂದಿದೆ.
ಇನ್ನು ಇವತ್ತು ಬೆಳಿಗ್ಗೆ ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮಿಲಿಟರಿ ಕಾರ್ಯಾಚರಣೆಗಳ ಕಮಾಂಡರ್ ಸೇರಿ 7 ಕಮಾಂಡರ್ ಗಳ ಜತೆ ಮಹತ್ವದ ಮಾತುಕತೆ ನಡೆಸಿದ್ದರು.

'ಕಾಶ್ಮೀರ ಪರಿಸ್ಥಿತಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿಯಲ್ಲಿನ ಉದ್ವಿಗ್ನ ಪರಿಸ್ಥಿತಿ' ಈ ಸಭೆಯ ಉದ್ದೇಶವಾಗಿತ್ತು. ಸಭೆಯ ಬೆನ್ನಿಗೆ ಪಾಕಿಸ್ತಾನದ ವಿರುದ್ಧ ಭಾರತತವೂ ಆಕ್ರಮಣಕಾರಿ ನಿಲುವು ತಳೆದಿದ್ದು 6 ಪಾಕಿಸ್ತಾನ ಸೈನಿಕರು ಸಾವನ್ನಪ್ಪಿ, 6 ಸೈನಿಕರು ಗಾಯಗೊಂಡಿದ್ದಾರೆ.












Click it and Unblock the Notifications