ಕಾಶ್ಮೀರದ ಟಾಪ್ 12 ಭಯೋತ್ಪಾದಕರ ಪಟ್ಟಿ ಬಹಿರಂಗ
ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರದ ಭಯಾನಕ ಉಗ್ರರ ಪಟ್ಟಿ ಬಹಿರಂಗವಾಗಿದೆ. ಸಶಸ್ತ್ರಧಾರಿಗಳಾಗಿ ಸುತ್ತುತ್ತಿರುವ ಟಾಪ್ 12 ಭಯೋತ್ಪಾದಕರ ಪಟ್ಟಿ ಇಲ್ಲಿದೆ.
ಶ್ರೀನಗರ, ಜೂನ್ 01: ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರದ ಭಯಾನಕ ಉಗ್ರರ ಪಟ್ಟಿ ಬಹಿರಂಗವಾಗಿದೆ. ಸಶಸ್ತ್ರಧಾರಿಗಳಾಗಿ ಸುತ್ತುತ್ತಿರುವ ಟಾಪ್ 12 ಭಯೋತ್ಪಾದಕರ ಪಟ್ಟಿ ಇಲ್ಲಿದೆ.
ಭಾರತದ ಗಡಿ ಭದ್ರತಾ ಪಡೆ, ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಅಧಾರದ ಮೇಲೆ ಮೋಸ್ಟ್ ಬಹುಬೇಡಿಕೆಯ ಭಯೋತ್ಪಾದಕರು ಇಲ್ಲಿದ್ದಾರೆ. 12 ಮಂದಿಯ ಪಟ್ಟಿಯನ್ನು ಗ್ರೇಡಿಂಗ್ ಮೂಲಕ ವಿಭಾಗಿಸಲಾಗಿದೆ. ಯಾವ ಸಂಘಟನೆ, ಯಾರ ಬೆಂಬಲಿಗ ಎಂಬುದನ್ನು ವಿವರಿಸಲಾಗಿದೆ.[ಭಾರತ ಸೇನೆಯಿಂದ ಪ್ರತೀಕಾರ, 6 ಪಾಕ್ ಸೈನಿಕರ ಸಾವು]
ಬುರ್ಹಾನ್ ವನಿ ಹಾಗೂ ಸಬ್ಜರ್ ಭಟ್ ಅವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೇತೃತ್ವ ವಹಿಸಿಕೊಂಡ ಬಳಿಕ ಹೆಚ್ಚೆಚ್ಚು ವಿದ್ಯಾವಂತ ಯುವಕರು ಉಗ್ರ ಸಂಘಟನೆಗಳತ್ತ ಮುಖ ಮಾಡುತ್ತಿದ್ದಾರೆ. ವನಿ ಹಾಗೂ ಭಟ್ ಇಬ್ಬರೂ 21 ವರ್ಷ ಆಸುಪಾಸಿನ ವಯೋಮಾನದಲ್ಲೇ ಉಗ್ರ ಸಂಘಟನೆಯ ಮುಂದಾಳತ್ವ ವಹಿಸಿಕೊಂಡವರು. ಉಗ್ರರ ವಿವರ ಮುಂದೆ ಓದಿ...

ಕಾಶ್ಮೀರದ ಒಸಾಮಾ
* ವಾಸೀಮ್ ಎಎಚ್ ಅಲಿಯಾಸ್ ಒಸಾಮಾ.
* ಶೋಪಿಯಾನ್ ಪ್ರಾಂತ್ಯದ ನಿವಾಸಿ.
* A+ ಭಯೋತ್ಪಾದಕ
* ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ.

ಅಬು ದುಜಾನಾ
ಅಬು ದುಜಾನಾ- ವರ್ಷಕ್ಕೆ ಮೂರು ಬಾರಿಯಾದ್ರೂ ಏಜೆನ್ಸಿಗಳ ಕಣ್ಣಿಗೆ ಕಾಣದಂತೆ ಮಾಯವಾಗುವ ಈತ ಲಷ್ಕರ್ ಇ ತೋಯ್ಬಾ ಸಂಘಟನೆಯ ಪ್ರಮುಖ ಉಗ್ರ.

ಜಾಕೀರ್ ರಷಿದ್ ಭಟ್
ಜಾಕೀರ್ ರಷಿದ್ ಭಟ್: ಹಿಜ್ಬುಲ್ ಸಂಘಟನೆಯಿಂದ ಹೊರ ಬಂದಿದ್ದಾನೆ. ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆ ವೈಮನಸ್ಯ ಬೆಳೆಸಿಕೊಂಡಿದ್ದಾನೆ. A++ ಭಯೋತ್ಪಾದಕ.

ಜುನೈದ್ ಮಟ್ಟೂ
ಜುನೈದ್ ಮಟ್ಟೂ: -ಕಳೆದ ಎರಡು ವರ್ಷಗಳಿಂದ ಲಷ್ಕರ್ ಉಗ್ರನಾಗಿ ಗುರುತಿಸಿಕೊಂಡಿದ್ದಾನೆ. ಈತ A ಕೆಟಗರಿ ಭಯೋತ್ಪಾದಕ.

ಶೌಕತ್ ತಕ್
ಶೌಕತ್ ತಕ್: ಹುಫೈಜಾ ಹೆಸರಿನಿಂದಲೂ ಗುರುತಿಸಿಕೊಂಡಿದ್ದಾನೆ. A++ ಭಯೋತ್ಪಾದಕ ಎಂದು ಹೆಸರಿಸಲಾಗಿದೆ.

ಯಾಸಿನ್ ಇಟ್ಟೂ
ಯಾಸಿನ್ ಇಟ್ಟೂ- ಹಿಜ್ಬುಲ್ ಸಂಘಟನೆಗ ಸೇರಿರುವ ಈಗ ಎ ಕೆಟಗರಿ ಭಯೋತ್ಪಾದಕ.

ರಿಯಾಜ್ ನಾಯ್ಕೂ
ರಿಯಾಜ್ ನಾಯ್ಕೂ: ಕಾಶ್ಮೀರದಲ್ಲಿ ಹಿಜ್ಬುಲ್ ನ ನೂತನ ನಾಯಕ. ಭಯಾನಕ ಉಗ್ರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾನೆ ಎಂದು ಗುಪ್ತಚರ ಇಲಾಖೆ ಹೇಳಿದೆ
-

ಅಬು ಹಮಾಸ್
ಅಬು ಹಮಾಸ್ : A++ ಉಗ್ರ, 2016ರಿಂದ ಸಕ್ರಿಯನಾಗಿರುವ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ.

ಜೀನತ್
ಜೀನತ್ ಅಲಿಯಾಸ್ ಅಲ್ಕಾಮಾ ಶೋಪಿಯಾನ್ ಪ್ರದೇಶದ ನಿವಾಸಿ. ಲಷ್ಕರ್ ಸಂಘಟನೆಯ ಉಗ್ರ.

ಸದ್ದಾಂ ಪದ್ದಾರ್
ಸದ್ದಾಂ ಪದ್ದಾರ್- ಹಿಜ್ಬುಲ್ ನ ಬುರ್ಹಾನ್ ವನಿ ಬಣದಲ್ಲಿ ಕಾಣಿಸಿಕೊಂಡಿರುವ ಸದ್ದಾಂ ಕೂಡಾ ಶೋಪಿಯಾನ್ ಪ್ರಾಂತ್ಯದ ನಿವಾಸಿ.

ಬಷೀರ್
ಬಷೀರ್ ವನಿ -ಲಷ್ಕರ್ ಭಯೋತ್ಪಾದಕ A++ ಕೆಟಗರಿಯ ಉಗ್ರ.

ಅಲ್ತಾಫ್ ದರ್
ಅಲ್ತಾಫ್ ದರ್ ಅಲಿಯಾಸ್ ಕಾಚ್ರೋ, ಹಿಜ್ಬುಲ್ ಸಂಘಟನೆಯ ಉಗ್ರ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications