• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಒಂದೇ ದಿನ 3,970 ಕೊರೊನಾ ಹೊಸ ಪ್ರಕರಣ: 103 ಸಾವು

|

ನವದೆಹಲಿ, ಮೇ 16: ಭಾರತದಲ್ಲಿ ಒಂದೇ ದಿನ 3,970 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 103 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ 85,940ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಲಾಕ್‌ಡೌನ್: ಮತ್ತೆ ದೆಹಲಿಯಿಂದ ರಾಜ್ಯಕ್ಕೆ ಬಂದ 1200 ಜನರು

ಅತಿ ಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣ ಹೊಂದಿರುವ ದೇಶಗಳ ಪೈಕಿ ಸದ್ಯ ಭಾರತ 11ನೇ ಸ್ಥಾನದಲ್ಲಿದೆ. ಭಾರತದಲ್ಲೀಗ ಒಟ್ಟಾರೆ ಸೋಂಕುಗಳ ಸಂಖ್ಯೆ 85 ಸಾವಿರ ಗಡಿ ದಾಟಿದೆ. ಇನ್ನೊಂದೆಡೆ ಚೀನಾದಲ್ಲಿ ಅಧಿಕೃತವಾಗಿ 84,031 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ ಭಾರತದಲ್ಲಿ ಕಳೆದ ಆರು ದಿನಗಳಲ್ಲಿ ದಿನಕ್ಕೆ 3,500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ಅಪಾಯದ ಸಂಕೇತವಾಗಿದೆ. ಚೀನಾಗೆ ಹೋಲಿಸಿದಾಗ ಭಾರತ ಕೈಗೊಂಡ ಮುನ್ನಚ್ಚೆರಿಕಾ ಕ್ರಮಗಳು ಹೆಚ್ಚು ಪರಿಣಾಮಕಾರಿ ಎನಿಸಿಕೊಂಡಿದೆ.

80000 ಪ್ರಕರಣಗಳ ವೇಳೆಗೆ ಚೀನಾದಲ್ಲಿ 2914 ಸಾವುಗಳು ಸಂಭವಿಸಿತ್ತು. ಇನ್ನೊಂದೆಡೆ 100ರಿಂದ 80 ಸಾವಿರ ಪ್ರಕರಣಗಳಿಗೆ ಏರುಗತಿ ಸಾಧಿಸಲು 43 ದಿನಗಳನ್ನು ಪಡೆದಿತ್ತು.

ಇನ್ನೊಂದೆಡೆ ಭಾರತದಲ್ಲಿ 80 ಸಾವಿರ ಪ್ರಕರಣಗಳ ವೇಳೆಗೆ 2,646 ಸಾವುಗಳು ಸಂಭವಿಸಿದೆ. ಹಾಗೆಯೇ 100ರಿಂದ 80 ಸಾವಿರ ಪ್ರಕರಣಗಳು ಏರುಗತಿ ಸಾದಿಸಲು 61 ದಿನಗಳನ್ನು ತೆಗೆದುಕೊಂಡಿದೆ.

ಅಮೆರಿಕ, ರಷ್ಯಾ ಹೊರತುಪಡಿಸಿದರೆ ಯುರೋಪ್ ಖಂಡದಲ್ಲಿ ಕೊವಿಡ್ 19 ರೋಗ ಹೆಚ್ಚಿನ ಸಾವು-ನೋವುಗಳನ್ನು ಉಂಟು ಮಾಡಿದೆ. ಈ ಪೈಕಿ ಬ್ರಿಟನ್‌ನಲ್ಲಿ 2.3 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 33 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

English summary
The country reported a total of 53,035 active Coronavirus cases as of today,India's case tally hit 85,940, with 103 new deaths, bringing the grim tally to 2,752.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X