ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಭ್ರಷ್ಟ ದೇಶಗಳಲ್ಲಿ ಭಾರತಕ್ಕೆ 81ನೇ ಸ್ಥಾನ

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 22: ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ 81ನೇ ಸ್ಥಾನ ಪಡೆದಿದೆ. ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆ 180 ದೇಶಗಳ ಶ್ರೇಯಾಂಕ ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತ ಈ ಸ್ಥಾನ ಪಡೆದಿದೆ.

ಇನ್ನು ಏಷ್ಯಾ ಪೆಸಿಫಿಕ್ ಭಾಗದಲ್ಲಿ ಪತ್ರಿಕಾ ಸ್ವಾತಂತ್ರ್ಯ ವಿಚಾರದಲ್ಲಿ ಭಾರತ 'ಕೆಟ್ಟ ಅಪರಾಧಿ' ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಭಾರತದಲ್ಲಿನ ಶ್ರೀಮಂತಿಕೆ, ಲೆಕ್ಕ ತಪ್ಪಿಸಿ- ಬೆಚ್ಚಿಬೀಳಿಸುವ ಲೆಕ್ಕಾಚಾರ ಇಲ್ಲಿದೆ!ಭಾರತದಲ್ಲಿನ ಶ್ರೀಮಂತಿಕೆ, ಲೆಕ್ಕ ತಪ್ಪಿಸಿ- ಬೆಚ್ಚಿಬೀಳಿಸುವ ಲೆಕ್ಕಾಚಾರ ಇಲ್ಲಿದೆ!

2016ರಲ್ಲಿ 176 ದೇಶಗಳಲ್ಲಿ ಭಾರತ 79ನೇ ಸ್ಥಾನ ಪಡೆದಿತ್ತು. ಇದೀಗ ಭಾರತ ಇನ್ನೆರಡು ಸ್ಥಾನ ಕೆಳಕ್ಕೆ ಜಾರಿದೆ. ಆದರೆ ಅಂಕ ಮಾತ್ರ 40ರಲ್ಲೇ ಸ್ಥಿರವಾಗಿದೆ. 0-100ರವರೆಗೆ ಅಂಕಗಳನ್ನು ನೀಡಲಾಗಿದೆ. ಇದರಲ್ಲಿ 0 ಅಂಕ ಪಡೆದವರು ಅತೀ ಹೆಚ್ಚಿನ ಭ್ರಷ್ಟ ದೇಶಗಳಾದರೆ 100 ಅಂಕ ಪಡೆದ ದೇಶಗಳು ತುಂಬಾ ಸ್ವಚ್ಛ ದೇಶಗಳಾಗಿವೆ.

India ranks 81st in global corruption perception index

ಈ ಬಗ್ಗೆ ಪ್ರಕಟಣೆ ನೀಡಿರುವ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್, "ಏಷ್ಯಾ ಪೆಸಿಫಿಕ್ ನ ಕೆಲವು ದೇಶಗಳಲ್ಲಿ ಪತ್ರಕರ್ತರು, ಕಾರ್ಯಕರ್ತರು, ಪ್ರತಿಪಕ್ಷ ನಾಯಕರು, ಜತೆಗೆ ಕಾನೂನು ಜಾರಿ ಮಾಡುವ ಅಧಿಕಾರಿಗಳ ಮೇಲೆ ದಾಳಿಗಳು ನಡೆದಿವೆ. ಕೆಲವು ಸಂದರ್ಭದಲ್ಲಿ ಕೊಲೆಯೇ ನಡೆದಿದೆ," ಎಂದು ಹೇಳಿದೆ.

ಈ ವಿಚಾರದಲ್ಲಿ ಭಾರತ, ಫಿಲಿಪ್ಪೀನ್ಸ್ ಮತ್ತು ಮಾಲ್ಡೀವ್ಸ್ ಅತಿ ಕೆಟ್ಟ ರಾಷ್ಟ್ರಗಳಾಗಿವೆ. ಇಲ್ಲಿ ಭ್ರಷ್ಟಾಚಾರ ಜೋರಾಗಿದ್ದರೆ, ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅದು ವರದಿಯಲ್ಲಿ ಹೇಳಿದೆ.

ಭ್ರಷ್ಟಾಚಾರ ಶ್ರೇಯಾಂಕದಲ್ಲಿ ನ್ಯೂಜಿಲ್ಯಾಂಡ್ ಮತ್ತು ಡೆನ್ಮಾರ್ಕ್ ಕ್ರಮವಾಗಿ 89 ಮತ್ತು 88 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿವೆ. ಸಿರಿಯಾ, ದಕ್ಷಿಣ ಸುಡಾನ್, ಸೊಮಾಲಿಯಾ ಕನಿಷ್ಠ 14, 12, 9 ಅಂಕಗಳನ್ನು ಪಡೆದು ಕೊನೆಯ ಸ್ಥಾನದಲ್ಲಿವೆ.

41 ಅಂಕಗಳೊಂದಿಗೆ ಚೀನಾ 77ನೇ ಸ್ಥಾನದಲ್ಲಿದೆ. ಬ್ರೆಜಿಲ್ 37 ಅಂಕಗಳೊಂದಿಗೆ 96ನೇ ಸ್ಥಾನವನ್ನು ಕಾಯ್ದುಕೊಂಡಿದೆ. ರಷ್ಯಾ ಕೇವಲ 29 ಅಂಕಗಳೊಂದಿಗೆ 135ನೇ ಸ್ಥಾನದಲ್ಲಿದೆ.

English summary
India has been ranked 81st in the global corruption perception index for 2017, released by Transparency International, which named the country among the "worst offenders" in terms of graft and press freedom in the Asia Pacific region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X