ಕೊರೊನಾ ವೈರಸ್: ಸೆಪ್ಟೆಂಬರ್ ತಿಂಗಳಲ್ಲಿ ಭಾರತ ನಂ. 1

ನವದೆಹಲಿ, ಸೆಪ್ಟೆಂಬರ್ 17: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 97,894 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಒಟ್ಟು ಸಂಖ್ಯೆ 51 ಲಕ್ಷದ ಗಡಿ ದಾಟಿದೆ. ದೇಶದ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 51,18,254ಕ್ಕೆ ತಲುಪಿದೆ. 24 ಗಂಟೆಗಳಲ್ಲಿ 1,132 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 83,198ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಚೇತರಿಕೆಯ ಪ್ರಮಾಣವೂ ಉತ್ತಮ ಸ್ಥಿತಿಯಲ್ಲಿದೆ. 24 ಗಂಟೆಯಲ್ಲಿ 40,25,080 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಒಟ್ಟು 10,09,976 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹಾಗೂ ಮರಣ ಪ್ರಮಾಣದಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ. ಆದರೆ ಪ್ರತಿದಿನವೂ ಒಂದು ಲಕ್ಷದ ಸಮೀಪ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ. ಅದರಲ್ಲಿಯೂ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಮುಂದೆ ಓದಿ.

ಅಮೆರಿಕ ಎರಡನೆಯ ಸ್ಥಾನದಲ್ಲಿ

ಅಮೆರಿಕ ಎರಡನೆಯ ಸ್ಥಾನದಲ್ಲಿ

ಸೆಪ್ಟೆಂಬರ್ ತಿಂಗಳ ಮೊದಲಾರ್ಧದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಭಾರತದ ನಂತರ ಅಮೆರಿಕ ಎರಡನೆಯ ಸ್ಥಾನದಲ್ಲಿದೆ. ಆದರೆ ಜಾನ್ಸ್ ಹಾಕಿನ್ಸ್ ಯುನಿವರ್ಸಿಟಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಸೆ. ತಿಂಗಳ ಮೊದಲ 15 ದಿನಗಳಲ್ಲಿ ಭಾರತದಲ್ಲಿ ವರದಿಯಾದ ಪ್ರಕರಣಗಳು ಅಮೆರಿಕಕ್ಕಿಂತ ಎರಡು ಪಟ್ಟು ಹೆಚ್ಚಿದೆ. ಮೃತರ ಸಂಖ್ಯೆಯಲ್ಲಿಯೂ ಭಾರತ ಮುಂಚೂಣಿಯಲ್ಲಿದೆ.

ಪ್ರಕರಣ-ಮರಣದಲ್ಲಿ ಭಾರತ ನಂ.1

ಪ್ರಕರಣ-ಮರಣದಲ್ಲಿ ಭಾರತ ನಂ.1

ಸೆಪ್ಟೆಂಬರ್‌ನ ಮೊದಲ 11 ದಿನಗಳಲ್ಲಿಯೇ ಭಾರತದಲ್ಲಿ ಹತ್ತು ಲಕ್ಷ ಪ್ರಕರಣಗಳು ದೃಢಪಟ್ಟಿವೆ. ಇದು ಯಾವುದೇ ದೇಶದಲ್ಲಿ ವರದಿಯಾದ ಪ್ರಕರಣಗಳಲ್ಲಿಯೇ ಅತಿ ಹೆಚ್ಚು. ಸೆ. 1ರಿಂದ 15ರವರೆಗೆ ಭಾರತದಲ್ಲಿ 13,04,991 ಪ್ರಕರಣಗಳು ವರದಿಯಾಗಿವೆ. 16,307 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ 5,57,657 ಮಂದಿ ಕೊರೊನಾಗೆ ತುತ್ತಾಗಿದ್ದರೆ, 11,461 ಮಂದಿ ಜೀವ ಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಇರುವ ಬ್ರೆಜಿಲ್‌ನಲ್ಲಿ 4,83,299 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಹಾಗೆಯೇ ಈ ತಿಂಗಳ ಮೊದಲ 15 ದಿನದಲ್ಲಿ 11,178 ಮಂದಿ ಮೃತಪಟ್ಟಿದ್ದಾರೆ.

ಮರಣ ಪ್ರಮಾಣದಲ್ಲಿ 8ನೇ ಸ್ಥಾನ

ಮರಣ ಪ್ರಮಾಣದಲ್ಲಿ 8ನೇ ಸ್ಥಾನ

ಆದರೆ ಈ 15 ದಿನಗಳ ಕೊರೊನಾ ವೈರಸ್ ಪ್ರಕರಣಗಳಲ್ಲಿ ಮರಣ ಪ್ರಮಾಣವನ್ನು ಲೆಕ್ಕ ಹಾಕಿದರೆ ಭಾರತ ಶೇ 1.25ರ ಸಾವಿನಂತೆ ಎಂಟನೇ ಸ್ಥಾನದಲ್ಲಿದೆ. ಮೆಕ್ಸಿಕೋ, ಕೊಲಂಬಿಯಾ ಮತ್ತು ಪೆರು ಮೊದಲ ಮೂರು ಸ್ಥಾನದಲ್ಲಿವೆ.

ಪರೀಕ್ಷೆ ಸಾಮರ್ಥ್ಯ ವೃದ್ಧಿ

ಪರೀಕ್ಷೆ ಸಾಮರ್ಥ್ಯ ವೃದ್ಧಿ

ದೇಶದಲ್ಲಿ ಕೊರೊನಾ ವೈರಸ್ ಪರೀಕ್ಷೆಗಳು ಹೆಚ್ಚು ನಡೆದಂತೆ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ. ಸೆ. 15ರ ವೇಳೆಗೆ 5.8 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ. 1-2 ಕೋಟಿ ಪರೀಕ್ಷೆಗೆ 27 ದಿನಗಳ ಬೇಕಿದ್ದರೆ, 4-5 ಕೋಟಿ ಪರೀಕ್ಷೆಯನ್ನು ಕೇವಲ 10 ದಿನದಲ್ಲಿಯೇ ನಡೆಸುವಷ್ಟು ಸಾಮರ್ಥ್ಯ ವೃದ್ಧಿಯಾಗಿದೆ.

Recommended Video

    BSY ಪುತ್ರನಿಗೆ ರಾಜ್ಯ ರಾಜಕೀಯದಲ್ಲಿ ಏನು ಕೆಲಸ | Vijayendra | Oneindia Kannada
    ರಾಜ್ಯವಾರು ಪ್ರಕರಣ

    ರಾಜ್ಯವಾರು ಪ್ರಕರಣ

    ದೇಶದಲ್ಲಿ ಶೇ 60ರಷ್ಟು ಸಕ್ರಿಯ ಪ್ರಕರಣಗಳು ಕೇವಲ ಐದು ರಾಜ್ಯಗಳಲ್ಲಿಯೇ ವರದಿಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

    ಮಹಾರಾಷ್ಟ್ರ-1,077,374, ಕರ್ನಾಟಕ-5,75,079, ಆಂಧ್ರಪ್ರದೇಶ-508,511, ಉತ್ತರ ಪ್ರದೇಶ-467,689, ತಮಿಳುನಾಡು-317,195 ಪ್ರಕರಣಗಳು ವರದಿಯಾಗಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+