ಭಾರತದಲ್ಲಿ ಆಗಸ್ಟ್ 10ರ ವೇಳೆ 12.6 ಲಕ್ಷ ಹೊಸ ಪ್ರಕರಣಗಳು ಪತ್ತೆ
ಬೆಂಗಳೂರು, ಜುಲೈ 13: ಭಾರತದಲ್ಲಿ ಆಗಸ್ಟ್ 10ರ ವೇಳೆಗೆ 12.6 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಲಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 32.1 ಮಿಲಿಯನ್‌ಗೆ ಏರಿಕೆಯಾಗಲಿದೆ ಎಂಬುದು ಒಂದು ಅಧ್ಯಯನದ ಮೂಲಕ ತಿಳಿದುಬಂದಿದೆ.
ಜೀವನ್ ರಕ್ಷಾ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಸಾವಿನ ಸಂಖ್ಯೆ 4.40 ಲಕ್ಷ ಮುಟ್ಟುವ ಸಾಧ್ಯತೆ ಇದ್ದು. ಕರ್ನಾಟಕದಲ್ಲಿ ಕೋವಿಡ್ ಸಂಖ್ಯೆ 29.35 ಲಕ್ಷ ಪ್ರಕರಣಗಳಾಗುವ ಸಾಧ್ಯತೆಯಿದೆ, ಆಗಸ್ಟ್ 10 ರೊಳಗೆ ರಾಜ್ಯದಲ್ಲಿ 37,275 ಸಾವಿನ ಸಂಖ್ಯೆ ಮುಟ್ಟಲಿದೆ.
ಭಾರತ ಮತ್ತು ಕರ್ನಾಟಕವು ಈವರೆಗೆ ಮಾಡಿದ ಉತ್ತಮ ಕಾರ್ಯಗಳು, ವಿಶೇಷವಾಗಿ ಸುಧಾರಿತ ಕಂಟೈನ್ ಮೆಂಟ್ ನಿರ್ವಹಣೆ ಮುಂದುವರಿಯಬೇಕಿದೆ. ಪ್ರತಿ ಜಿಲ್ಲಾಡಳಿತವು ಕೋವಿಡ್‌ನ 7 ದಿನಗಳ ಮೂವಿಂಗ್ ಗ್ರೋತ್ ರೇಟ್ (ಎಂಜಿಆರ್) ಶೇ. 2 ಕ್ಕಿಂತ ಕಡಿಮೆಯಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜೀವನ್ ರಕ್ಷಾ ಸಂಚಾಲಕ ಮೈಸೂರು ಸಂಜೀವ್ ಮಾಹಿತಿ ನೀಡಿದ್ದಾರೆ.

ಅಂಕಿಅಂಶ ಕಾಪಾಡಿಕೊಳ್ಳಬೇಕು
ಪ್ರಸ್ತುತ ಪರೀಕ್ಷಾ ಅಂಕಿಅಂಶಗಳನ್ನು ಕಾಪಾಡಿಕೊಳ್ಳಬೇಕು ಆದರೆ ಯಾರನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಇಷ್ಟು ಜನರನ್ನು ಏಕೆ ಪರೀಕ್ಷಿಸಲಾಗುತ್ತಿದೆ ಎಂಬುದರ ಹಿಂದೆ ಒಂದು ತಾರ್ಕಿಕತೆಯ ಅಗತ್ಯವಿದೆ ಎಂದು ಮೈಸೂರು ಸಂಜೀವ್ ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕಿತ ಪ್ರಕರಣಗಳು
ಕಳೆದ ವಾರ, ಕರ್ನಾಟಕದ 14 ಜಿಲ್ಲೆಗಳಲ್ಲಿ 7 ದಿನಗಳ ಎಂಜಿಆರ್ ಶೇ. 1 ಕ್ಕಿಂತ ಕಡಿಮೆಯಿದ್ದರೆ, 15 ಜಿಲ್ಲೆಗಳಲ್ಲಿ ಎಂಜಿಆರ್ 1-2% ಇತ್ತು. ಕೊಡಗು ಜಿಲ್ಲೆಯಲ್ಲಿ ಮಾತ್ರ ಶೇ.3 ರಷ್ಟು ಕಡಿಮೆ ಎಂಜಿಆರ್ ಹೊಂದಿತ್ತು. ಇದು ಮುಂಬರುವ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.

ಸರಿಯಾದ ರೀತಿ ಪರೀಕ್ಷೆ
ಸೂಕ್ಷ್ಮ ಕಂಟೈನ್‌ಮೆಂಟ್ ಜೋನ್‌ಗಳು ಮತ್ತು ಹಳ್ಳಿಗಳಲ್ಲಿ , ಆರ್‌ಟಿ-ಪಿಸಿಆರ್ ಪರೀಕ್ಷೆ ಲಭ್ಯವಾಗುವಂತೆ ಮಾಡಬೇಕು. ರಾಪಿಡ್ ಆಂಟಿಜೆನ್ ಪರೀಕ್ಷೆಗಳ ಬದಲು ಸರಿಯಾದ ರೀತಿಯ ಜನರನ್ನು ಪರೀಕ್ಷಿಸುವುದನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೊರೊನಾ ಮೂರನೇ ಅಲೆ
ರಾಜ್ಯದ ಶೇ.80 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆಯುವವರೆಗೆ ಎಲ್ಲಾ ಜಿಲ್ಲೆಗಳು 7 ದಿನಗಳ ಮೂವಿಂಗ್ ಗ್ರೋತ್ ರೇಟ್ ಶೇ.2 ಕ್ಕಿಂತ ಕಡಿಮೆ ಇದ್ದರೆ, ಕರ್ನಾಟಕವು ಯಾವುದೇ ಸಂದೇಹವಿಲ್ಲದೆ ಮೂರನೇ ಅಲೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications